ಬಾಡಿಗೆ ಗಂಡನನ್ನು ಕೊಚ್ಚಿ ಕೊಂದ ನರ್ಸ್ ನಿಮಿಷ ಪ್ರಿಯಾ ಗಲ್ಲಿನಿಂದ ಬಚಾವಾಗುವಳೇ?

ಏನಿದು ಯಮನ್ ನಲ್ಲಿ ಮರಣ ದಂಡನೆಗೆ ಒಳಗಾಗಿರುವ ಕೇರಳ ನರ್ಸ್ ನಿಮಿಷಾಳ ಕರುಣಾಜನಕ ಕಥೆ?

Team Udayavani, Aug 20, 2020, 3:14 PM IST

ಬಾಡಿಗೆ ಗಂಡನನ್ನು ಕೊಚ್ಚಿ ಕೊಂದ ನರ್ಸ್ ನಿಮಿಷ ಪ್ರಿಯಾ ಗಲ್ಲಿನಿಂದ ಬಚಾವಾಗುವಳೇ?

ತಿರುವನಂತಪುರಂ: ಇದೊಂದು ವಿಚಿತ್ರವಾದ ಮತ್ತು ಅಷ್ಟೇ ಕರುಣಾಜನಕವಾದ ಕಥೆ.

ಕೇರಳದ ಪಾಲಕ್ಕಾಡ್ ನಿಂದ ದೂರದ ಅರಬ್ ನಾಡಿಗೆ ತೆರಳಿ ಅಲ್ಲಿ ನರ್ಸ್ ವೃತ್ತಿ ನಡೆಸಿ ಬಳಿಕ ಅಲ್ಲಿಯೇ ತನ್ನ ಸ್ವಂತ ಕ್ಲಿನಿಕ್ ಒಂದನ್ನು ಪ್ರಾರಂಭಿಸಿದ ಹೆಣ್ಣುಮಗಳೊಬ್ಬಳು ಇದೀಗ ಕೊಲೆ ಅಪರಾಧಿಯಾಗಿ ನೇಣಿಗೇರಲು ದಿನಗಳನ್ನು ಎಣಿಸುತ್ತಿದ್ದಾಳೆ.

ಇಷ್ಟಕ್ಕೂ ಆಗಿದ್ದೇನು?
ನಿಮಿಷ ಪ್ರಿಯಾ ಎಂಬ ಕೇರಳ ಮೂಲದ ನರ್ಸ್ ಯೆಮನ್ ದೇಶದಲ್ಲಿ ಹಲವು ವರ್ಷಗಳ ಕಾಲ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದಳು.

ಈ ನಡುವೆ ನಿಮಿಷಾ ಅವರಿಗೆ ಯೆಮನ್ ದೇಶದಲ್ಲಿ ತನ್ನದೇ ಆದ ಒಂದು ಕ್ಲಿನಿಕ್ ಪ್ರಾರಂಭಿಸಬೇಕೆಂಬ ಅಭಿಲಾಷೆ ಮೂಡುತ್ತದೆ. ಆದರೆ ಆ ದೇಶದ ಕಾನೂನಿನ ಪ್ರಕಾರ ಆ ದೇಶದ ಪ್ರಜೆಗಳಲ್ಲದವರು ಅಲ್ಲಿ ಕ್ಲಿನಿಕ್ ಮತ್ತು ಉದ್ದಿಮೆಗಳನ್ನು ಸ್ಥಾಪಿಸುವಂತಿಲ್ಲ.

ಈ ಕಾನೂನು ತೊಡಕನ್ನು ಹೋಗಲಾಡಿಸಲು ನಿಮಿಷ ಒಂದು ಪ್ಲ್ಯಾನ್ ಮಾಡುತ್ತಾರೆ. ಅದೇನೆಂದರೆ, ಆ ದೇಶದ ಪ್ರಜೆಯಾಗಿದ್ದ ಮಹದಿ ಎಂಬಾತನ ಬೆಂಬಲವನ್ನು ಪಡೆದುಕೊಳ್ಳುತ್ತಾಳೆ.

ಹೀಗೆ ಇವರಿಬ್ಬರು ಸೇರಿಕೊಂಡು 2014ರಲ್ಲಿ ಯೆಮನ್ ನ ರಾಜಧಾನಿ ಸನಾದಲ್ಲಿ ಕ್ಲಿನಿಕ್ ಒಂದನ್ನು ಸ್ಥಾಪಿಸುತ್ತಾರೆ.

ನಿಮಿಷಾ ಮಹದಿ ಜೊತೆ ವಿವಾಹವಾಗಿದ್ದೇನೆ ಎಂಬ ಪ್ರಮಾಣಪತ್ರವನ್ನು ಸಲ್ಲಿಸಿ ತನ್ನ ಕ್ಲಿನಿಕ್ ಗೆ ಪರವಾನಿಗೆಯನ್ನು ಪಡೆದುಕೊಳ್ಳುತ್ತಾಳೆ. ಆದರೆ ಈ ಒಂದು ನಿರ್ಧಾರ ನಿಮಿಷ ಬಾಳನ್ನು ನರಕಕ್ಕೆ ತಳ್ಳಿಬಿಡುತ್ತದೆ.

ನಿಮಿಷಾಳಿಗೆ ಅದಾಗಲೇ ಕೇರಳದಲ್ಲಿ ಒಂದು ಮದುವೆಯಾಗಿತ್ತು ಮಾತ್ರವಲ್ಲದೇ 5 ವರ್ಷ ಪ್ರಾಯದ ಒಂದು ಮಗುವೂ ಆಕೆಗಿತ್ತು. ಇತ್ತ ಮಹದಿಯೂ ಸಹ ವಿವಾಹಿತನಾಗಿದ್ದು ಆತನಿಗೂ ಒಂದು ಮಗು ಇತ್ತು. ನಿಮಿಷಾ ಮತ್ತು ಮಹದಿ ಅವರ ನಡುವಿನ ಮದುವೆ ಕೇವಲ ಆ ದೇಶದಲ್ಲಿ ತನ್ನ ಕ್ಲಿನಿಕ್ ಗೆ ಪರಾವನಿಗೆ ಪಡೆದುಕೊಳ್ಳಲು ಮಾತ್ರವೇ ನಿಮಿಷ ಮಾಡಿಕೊಂಡ ‘ಮ್ಯಾರೇಜ್ ಅಗ್ರಿಮೆಂಟ್’ ಆಗಿತ್ತು!

ಇತ್ತ ಶುರುವಾಯ್ತು ಮಹದಿಯ ಟಾರ್ಚರ್?
ನಿಮಿಷಾಳೇನೋ ತನ್ನ ಕ್ಲಿನಿಕ್ ಸ್ಥಾಪನೆಗೆ ಅನುಕೂಲವಾಗಲೆಂದು ಮಹದಿಯ ಸಹಕಾರ ಪಡೆದುಕೊಂಡು ಪರವಾನಿಗೆಯನ್ನೇನೋ ಪಡೆದುಕೊಂಡು ಕ್ಲಿನಿಕ್ ಪ್ರಾರಂಭಿಸಿದಳು. ಆದರೆ ಇತ್ತ ಶುರುವಾಯ್ತು ನೊಡಿ ಮಹದಿಯ ಟಾರ್ಚರ್!

ತಮ್ಮಿಬ್ಬರ ಮದುವೆಯ ಪ್ರಮಾಣಪತ್ರ ಊರ್ಜಿತಗೊಳ್ಳುತ್ತಿದ್ದಂತೆಯೇ ತನ್ನ ವರಸೆ ಶುರುವಿಟ್ಟುಕೊಂಡ ಮಹದಿ, ನಿಮಿಷಾಳಗೆ ತನ್ನನ್ನು ಮದುವೆಯಾಗುವಂತೆ ಬಲವಂತ ಮಾಡುತ್ತಾನೆ. ಈ ಸಂದರ್ಭದಲ್ಲಿ ನಿಮಿಷಾ ಮಹದಿಯೊಟ್ಟಿಗೇ ಆತನ ಮೊದಲನೇ ಪತ್ನಿಯೊಂದಿಗೇ ವಾಸಿಸುತ್ತಿದ್ದಳು.

ತನ್ನನ್ನು ಮದುವೆಯಾಗಲು ನಿರಾಕರಿಸಿದ ನಿಮಿಷಾ ದೇಶ ಬಿಟ್ಟು ಹೋಗಬಾರದೆಂಬ ಕಾರಣದಿಂದ ಮೆಹದಿ ಆಕೆಯ ಪಾಸ್ ಪೋರ್ಟನ್ನು ತನ್ನ ವಶಕ್ಕೆ ಪಡೆದುಕೊಳ್ಳುತ್ತಾನೆ. ಮಾದಕ ದ್ರವ್ಯ ವ್ಯಸನಿಯಾಗಿದ್ದ ಮಹದಿ ಡ್ರಗ್ಸ್ ನಶೆಯಲ್ಲಿ ಆಕೆಗೆ ದಿನವೂ ಚಿತ್ರ ಹಿಂಸೆ ನೀಡುತ್ತಾನೆ.

ಇತ್ತ ಮಹದಿಯ ಚಿತ್ರಹಿಂಸೆ ಅತೀಯಾದಾಗ ನಿಮಿಷಾ ಈ ಕುರಿತಾಗಿ ಪೊಲೀಸರಿಗೆ ದೂರನ್ನು ನೀಡುತ್ತಾಳೆ ಮತ್ತು ಮಹದಿಯನ್ನು ಬಂಧಿಸಿದ ಪೊಲೀಸರು ಆತನನ್ನು ಜೈಲಿಗಟ್ಟುತ್ತಾರೆ. ಆದರೆ ಜೈಲಿನಿಂದ ಹೊರಬಂದ ಮಹದಿ ಮತ್ತಷ್ಟಯ ವ್ಯಗ್ರನಾಗಿ ನಿಮಿಷಾಳಿಗೆ ಇನ್ನಷ್ಟು ಚಿತ್ರಹಿಂಸೆ ನೀಡುತ್ತಾನೆ.

ಮಹದಿಯ ಹತ್ಯೆಗೆ ಸಿದ್ಧವಾಯ್ತು ಸ್ಕೆಚ್!
ಇನ್ನು ಈತ ತನ್ನನ್ನು ಬದುಕಲು ಬಿಡುವುದಿಲ್ಲ ಎಂಬುದು ನಿಮಿಷಾಳಿಗೆ ಕನ್ಫರ್ಮ್ ಆಗುತ್ತಿದ್ದಂತೆ ಆಕೆ ಮಹದಿಯನ್ನು ಕೊಂದೇ ಬಿಡಬೇಕೆಂಬ ನಿರ್ಧಾರಕ್ಕೆ ಬರುತ್ತಾಳೆ. ಇದಕ್ಕಾಗಿ ಆಕೆಗೆ ಒಬ್ಬ ಜೊತೆಗಾತಿಯ ಅಗತ್ಯವಿತ್ತು. ಆಗ ನಿಮಿಷಾಳ ಮರ್ಡರ್ ಪ್ಲ್ಯಾನಿಂಗ್ ಗೆ ಜೊತೆಯಾದವಳೇ ಆಕೆಯ ಜೊತೆಯೇ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಅದೇ ದೇಶದ ಮಹಿಳೆ.

ಒಂದು ಫೈನ್ ಡೇ ಇವರಿಬ್ಬರೂ ಸೇರಿಕೊಂಡು ಮಹದಿಗೆ ಅರವಳಿಕೆ ಔಷಧಿಯನ್ನು (ಅನಸ್ತೇಷಿಯಾ) ಲೆಕ್ಕಕ್ಕಿಂತ ಹೆಚ್ಚು ನೀಡುತ್ತಾರೆ. ಇದಾದ ಕೆಲ ಗಂಟೆಗಳಲ್ಲೇ ಮಹದಿ ಸಾವನ್ನಪ್ಪುತ್ತಾನೆ. ಆದರೆ ಈತನ ಮೃತದೇಹವನ್ನು ಏನು ಮಾಡುವುದೆಂದು ತೋಚದೇ ಇವರಿಬ್ಬರೂ ಸೇರಿಕೊಂಡು ಅದನ್ನು ಕತ್ತರಿಸಿ ಪಾಲಿಥೀನ್ ಚೀಲದಲ್ಲಿ ತುಂಬಿ ತನ್ನ ಅಪಾರ್ಟ್ಮೆಂಟ್ ಮೇಲಿದ್ದ ನೀರಿನ ಟ್ಯಾಂಕ್ ಗೆ ಎಸೆದು ಸೈಲೆಂಟಾಗಿ ಜಾಗ ಖಾಲಿ ಮಾಡುತ್ತಾರೆ.

ಮಹದಿಯನ್ನು ಕೊಲೆ ಮಾಡಿದ ಬಳಿಕ ಪೊಲೀಸರಿಗೆ ಹೆದರಿದ ನಿಮಿಷಾ ಯಮನ್ ರಾಜದಾನಿಯನ್ನು ತೊರೆದು ಅಲ್ಲಿಂದ 200 ಕಿಲೋಮೀಟರ್ ದೂರದಲ್ಲಿದ್ದ ಊರೊಂದಕ್ಕೆ ತೆರಳಿ ಅಲ್ಲಿ ಆಸ್ಪತ್ರೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.

ಇತ್ತ ಮಹದಿಯ ಶವವಿದ್ದ ಆ ನೀರಿನ ಟ್ಯಾಂಕ್ ನಿಂದ ವಿಚಿತ್ರ ವಾಸನೆ ಬರುತ್ತಿದ್ದುದನ್ನು ಗಮನಿಸಿದ ಅಪಾರ್ಟ್ಮೆಂಟ್ ನಿವಾಸಿಗಳು ಈ ಕುರಿತಾಗಿ ಪೊಲೀಸರಿಗೆ ದೂರನ್ನು ನೀಡುತ್ತಾರೆ. ನೀರಿನ ಟ್ಯಾಂಕನ್ನು ತಪಾಸಣೆ ನಡೆಸಿದಾಗ ಅಲ್ಲಿ ಪಾಲಿಥಿನ್ ಚೀಲದಲ್ಲಿ ಕಟ್ಟಿ ಎಸೆದಿದ್ದ ಮಹದಿಯ ಕತ್ತರಿಸಿದ ಮೃತದೇಹ ಪತ್ತೆಯಾಗುತ್ತದೆ!

ತಕ್ಷಣವೇ ಯಮನ್ ಪೊಲೀಸರು ನಿಮಿಷಾಳಿಗಾಗಿ ತೀವ್ರ ಹುಡುಕಾಟವನ್ನು ನಡೆಸುತ್ತಾರೆ. ಅಲ್ಲಿನ ಪ್ರಮುಖ ದಿನ ಪತ್ರಿಕೆಗಳಲ್ಲಿ ಆಕೆಯ ಫೊಟೋವನ್ನೂ ಪ್ರಕಟಿಸುತ್ತಾರೆ. ಮತ್ತು ಬಳಿಕ ಆಕೆಯನ್ನು ಆಕೆ ಹೊಸದಾಗಿ ಕೆಲಸ ಪ್ರಾರಂಭಿಸಿದ್ದ ಆಸ್ಪತ್ರೆಯಿಂದ ಬಂಧಿಸಲಾಗುತ್ತದೆ.

ಈ ಕೊಲೆ ಪ್ರಕರಣದ ವಿಚಾರಣೆ ನಡೆದು ಒಂದು ವರ್ಷದ ಬಳಿಕ ಅಂದರೆ 2018ರಲ್ಲಿ ಯೆಮನ್ ನ ಕೆಳ ನ್ಯಾಯಾಲಯವು ಆಕೆಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸುತ್ತದೆ. ಮಹದಿ ಕೊಲೆಯಲ್ಲಿ ಆಕೆಗೆ ಸಹಕಾರ ನೀಡಿದ್ದ ಹನನ್ ನೆ ಜೀವವಾಧಿ ಶಿಕ್ಷೆಯಾಗುತ್ತದೆ. ಈ ತೀರ್ಪನ್ನು ಪ್ರಶ್ನಿಸಿ ನಿಮಿಷಾ ಪ್ರಿಯಾಳ ವಕೀಲರು ಉನ್ನತ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲೂ ಸಹ ನಿಮಿಷಾಳಿಗೆ ಮರಣ ದಂಡನೆ ಶಿಕ್ಷೆಯೇ ಖಾಯಂ ಆಗಿದೆ. ಮತ್ತು ಆ ತೀರ್ಪು ನಿನ್ನೆ ಪ್ರಕಟವಾಗಿದೆ.

ಇದೀಗ ನಿಮಿಷಾಳ ಮುಂದಿರುವ ಕೊನೆಯ ಆಯ್ಕೆ ಎಂದರೆ ಆ ದೇಶದ ಅಧ್ಯಕ್ಷರೇ ಮುಖ್ಯಸ್ಥರಾಗಿರುವ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ ಮುಂದೆ ತನ್ನ ಮರಣದಂಡನೆಯನ್ನು ಪುನರ್ ಪರಿಶೀಲಿಸಲು ಮನವಿ ಮಾಡಿಕೊಳ್ಳುವುದು. 15 ದಿನಗಳೊಳಗಾಗಿ ಈ ಮನವಿಯನ್ನು ಸಲ್ಲಿಸಬೇಕಾಗಿದೆ.

ಇನ್ನೊಂದೆಡೆ, ನಿಮಿಷಾಳನ್ನು ಕ್ಷಮಿಸಲು ಮಹದಿ ಕುಟುಂಬಸ್ಥರು ಒಪ್ಪಿದ್ದಾರೆ ಎಂಬ ಮಾಹಿತಿಯೂ ಇದೀಗ ಲಭ್ಯವಾಗಿದೆ. ಆದರೆ ಇದಕ್ಕಾಗಿ ನಿಮಿಷಾ 70 ಲಕ್ಷ ಪರಿಹಾರ ಧನವನ್ನು (ಬ್ಲಡ್ ಮನಿ) ಮಹದಿ ಕುಟುಂಬಕ್ಕೆ ನೀಡಬೇಕಾಗಿರುತ್ತದೆ. ನಿಮಿಷಾ ಪರವಾಗಿ ಪರಿಹಾರ ಮೊತ್ತವನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಆಕೆಯ ವಕೀಲರಾಗಿರುವ ಕೆ. ಎಲ್. ಬಾಲಚಂದ್ರನ್ ತಮ್ಮ ಪ್ರಯತ್ನವನ್ನು ಮುಂದುವರಿಸಿದ್ದಾರೆ.

ಟಾಪ್ ನ್ಯೂಸ್

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Maharashtra Election: ಅಘಾಡಿ ಸೋಲಿಗೆ ಉದ್ಧವ್‌,ಶರದ್‌ ಕಾರಣ: ಕಾಂಗ್ರೆಸ್‌

Maharashtra Election: ಅಘಾಡಿ ಸೋಲಿಗೆ ಉದ್ಧವ್‌,ಶರದ್‌ ಕಾರಣ: ಕಾಂಗ್ರೆಸ್‌

Modi-Tour

Mann Ki Baat: ಮೈಸೂರಿನ ‘ಅರ್ಲಿ ಬರ್ಡ್‌’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ

Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!

Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!

Isro: ಡಿ.20ಕ್ಕೆ ಸ್ಪೇಡೆಕ್ಸ್‌ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌

Isro: ಡಿ.20ಕ್ಕೆ ಸ್ಪೇಡೆಕ್ಸ್‌ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.