ಉದ್ಘಾಟನೆ ಕಾಣುವ ಮುನ್ನ ಕಾಲುವೆ “ಢಮ್’
Team Udayavani, Sep 21, 2017, 9:14 AM IST
ಭಾಗಲ್ಪುರ/ಪಟ್ನಾ: ಇನ್ನೇನು ಕೆಲವೇ ಕ್ಷಣಗಳಲ್ಲಿ ಆ ಕಾಲುವೆ ಉದ್ಘಾಟನೆಯಾಗಿ, ಬಿಹಾರದ ಭಾಗಲ್ಪುರ ಜಿಲ್ಲೆಯ ಹಲವಾರು ಹಳ್ಳಿಗಳಿಗೆ ನೀರುಣಿಸಬೇಕಾಗಿತ್ತು. ಅಷ್ಟೇ… ಬಾಂಬ್ ಸ್ಫೋಟಿಸಿದಂತೆ ಸದ್ದು ಕೇಳಿಸಿತು. ಏನಾಯಿತು ಎಂದು ಗೊತ್ತಾಗುತ್ತಿರು ವಂತೆಯೇ ಗಂಗಾ ನದಿಗೆ ಅಡ್ಡಲಾಗಿ ಕಟ್ಟಿದ್ದ ಕಾಲುವೆ ಗೇಟ್ ಸ್ಫೋಟಗೊಂಡಿತು. ನಿಂತಿದ್ದ ಜನರತ್ತ ನೀರು ನುಗ್ಗಿ ಬಂದಿತು. ಹೆದರಿದ ಸಾರ್ವಜನಿಕರು ದಿಕ್ಕಾಪಾಲಾಗಿ ಓಡಿ ಹೋದರು. ಒಟ್ಟು 389.31 ಕೋಟಿ ರೂ.ವ್ಯರ್ಥವಾಗಿ ಹರಿದು ಹೋಯಿತು. ಬಿಹಾರ ಮತ್ತು ಜಾರ್ಖಂಡ್‌ನ ಕೆಲ ಜಿಲ್ಲೆಗಳಿಗೆ ಈ ಕಾಲುವೆಯಿಂದ ನೀರು ಹರಿಯಬೇಕಾಗಿತ್ತು.
ಈ ಘಟನೆಯಿಂದಾಗಿ ಮುಖ್ಯಮಂತ್ರಿ ನಿತೀಶ್‌ಕುಮಾರ್ ನೇತೃತ್ವದ ಬಿಜೆಪಿ- ಜೆಡಿಯು ಸರಕಾರಕ್ಕೆ ಮುಜುಗರ ಉಂಟಾಗಿದೆ. ಯಾವ ಕಾರಣಕ್ಕಾಗಿ ಹೀಗಾಯಿತು ಎಂದು ಕಂಡುಕೊಳ್ಳಲು ತನಿಖೆಗೆ ಕೂಡ ಆದೇಶಿಸಲಾಗಿದೆ. ಭಾಗಲ್ಪುರ ಜಿಲ್ಲೆಯ ಬತೇ ಶ್ವರ್‌ಸ್ಥಾನದಲ್ಲಿ ಅದನ್ನು ನಿರ್ಮಿಸಿ ಪ್ರಾಯೋ ಗಿಕವಾಗಿ ಪಂಪ್ ಅನ್ನು ಆನ್ ಮಾಡಲಾಗಿತ್ತು. ಗಂಗಾ ನದಿಯ ನೀರು ಕಹಲ್‌ಗಾಂವ್‌ನಲ್ಲಿ ನಿರ್ಮಿಸವಾಗಿರುವ ಎನ್‌ಟಿಪಿಸಿ ಟೌನ್‌ಶಿಪ್‌ಗ್ೂ ನೀರು ನುಗ್ಗಿ ಅವಾಂತರಕ್ಕೆ ಕಾರಣವಾಗಿದೆ. ಜತೆಗೆ ಸ್ಥಳೀಯ ಕೋರ್ಟ್‌ನ ನ್ಯಾಯಾಧೀಶರ ನಿವಾಸಕ್ಕೂ ನೀರು ನುಗ್ಗಿದೆ. ಸ್ಥಳೀಯ ಮಾಧ್ಯಮಗಳಲ್ಲಿ ಕಾರ್ಯಕ್ರಮದ ಬಗ್ಗೆ ಅದ್ಧೂರಿ ಜಾಹೀರಾತು ಪ್ರಕಟಿಸಲಾಗಿತ್ತು.
ಪ್ರತಿಪಕ್ಷ ಆರ್‌ಜೆಡಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಭಾಗಲ್ಪುರ ಮತ್ತಿತರ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.