ಕ್ಯಾನನ್ ಇಒಎಸ್ ಎಂ50 ಕ್ಯಾಮೆರಾ ಬಿಡುಗಡೆ
Team Udayavani, Apr 17, 2018, 12:04 PM IST
ನವದೆಹಲಿ: ಖ್ಯಾತ ಕ್ಯಾಮೆರಾ ತಯಾರಕ ಸಂಸ್ಥೆ ಕ್ಯಾನನ್ ಇಂಡಿಯಾ, “ಕ್ಯಾನನ್ ಇಒಎಸ್ ಎಂ50′ ಎಂಬ ಅತ್ಯಾಧುನಿಕ ಮಿರರ್‌ಲೆಸ್ 4ಕೆ ಕ್ಯಾಮೆರಾವನ್ನು ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಯಾನನ್ ಇಂಡಿಯಾ ಅಧ್ಯಕ್ಷ ಮತ್ತು ಸಿಇಒ ಕಜುಟಡ ಕೊಬಯಾಶಿ ಹಾಗೂ ಸಂಸ್ಥೆಯ ಕನ್ಸೂಮರ್ ಇಮೇಜಿಂಗ್ ಮತ್ತು ಇನ್ಫಾರ್ಮೇಷನ್ ಸೆಂಟರ್‌ನ ಉಪಾಧ್ಯಕ್ಷ ಎಡ್ಡಿ ಯುಡಗಾವ ಇಒಎಸ್ ಎಂ50 ಕ್ಯಾಮೆರಾ ಅನಾವರಣಗೊಳಿಸಿದರು.
ಈ ವೇಳೆ ಕಜುØಟಡ ಕೊಬಯಾಶಿ ಮಾತನಾಡಿ, ಈ ಹೊಸ ಕ್ಯಾಮೆರಾ, ಡಿಜಿಕ್ 8 ಇಮೇಜ್ ಪ್ರೊಸೆಸ್ಸರ್ ಹೊಂದಿದ್ದು, ಇದರಿಂದ ಅತ್ಯುತ್ತಮ ಗುಣಮಟ್ಟದ ಚಿತ್ರಗಳು ಮೂಡಿಬರುತ್ತವೆ. 4ಕೆ ಮೂವೀ ಶೂಟಿಂಗ್ ಸಾಮರ್ಥ್ಯವುಳ್ಳ ಇಒಎಸ್ ಎಂ50 ಡ್ನೂಯೆಲ್ ಫಿಕ್ಸೆಲ್ ಸಿಎಂಒಎಸ್ ಎಎಫ್ ಇದಕ್ಕಿದೆ. ಗ್ರಾಹಕರ ಮತ್ತು ವೃತ್ತಿಪರರ ಅಗತ್ಯಗಳಿಗೆ ತಕ್ಕಂತ ತಂತ್ರಜ್ಞಾನವುಳ್ಳ ಆಧುನಿಕ ಹಾಗೂ ನಾವೀನ್ಯತೆಯ ಕ್ಯಾಮೆರಾ ಇದಾಗಿದೆ.
ಕ್ಯಾನನ್ ಇಂಡಿಯಾ ಕಾಲಕ್ಕನುಗುಣವಾಗಿ ಎಲ್ಲ ರೀತಿ ನವೀನ ತಂತ್ರಜ್ಞಾನಗಳನ್ನು ಕ್ಯಾಮೆರಾಗಳಲ್ಲಿ ಅಳವಡಿಸುತ್ತಾ ಬಂದಿದೆ ಎಂದರು. ಇಂದು ಮಾರುಕಟ್ಟೆಗೆ ಪರಿಚಯಿಸಿರುವ ಈ ಕ್ಯಾಮೆರಾ ಗ್ರಾಹಕರ ಇಚ್ಛೆಗೆ ಹಾಗೂ ವೃತ್ತಿಪರರಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ. ನಮ್ಮ ಸಂಸ್ಥೆ ಹೊಸತನವನ್ನು ಅಳವಡಿಸಿಕೊಳ್ಳುವುದರಲ್ಲಿ ಸದಾ ಬದ್ಧವಾಗಿದೆ.
ಸರಳ, ಸುಲಭವಾಗಿ ಬಳಸಬಹುದಾದ ಕ್ಯಾಮೆರಾ ಇದಾಗಿದ್ದು, ಇಒಎಸ್ ಕುಟುಂಬದಲ್ಲಿ ಇದೊಂದು ಮೈಲಿಗಲ್ಲು ಎನ್ನಬಹುದಾಗಿದೆ. ಇದರಲ್ಲಿ 24.1 ಮೆಗಾ ಫಿಕ್ಸೆಲ್ ಇಮೇಜ್ ಸೆನ್ಸಾರ್ ಹಾಗೂ ಎಪಿಎಸ್-ಸಿ ಸಿಎಂಒಎಸ್ ಸೆನ್ಸಾರ್ ಇದೆ. 3.0 ಇಂಚ್ ಎಲ್‌ಸಿಡಿ ವೆರಿ ಆ್ಯಂಗಲ್ ಟಚ್ ಪ್ಯಾನೆಲ್, ವೈಫೈ, ಎನ್‌ಎಫ್‌ಸಿ, ಬ್ಲೂಟೂತ್ ಸೌಲಭ್ಯವಿರುವ ಈ ಕ್ಯಾಮೆರಾ ಬೆಲೆ 61,995 ರೂ. ಎಂದು ಅವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಪತ್ರಕರ್ತ ಮುಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೈದರಾಬಾದ್‌ನಲ್ಲಿ ಬಂಧನ
ಅಪ್ಪನನ್ನೇ ಬದಲಿಸಿದ ಅತಿಶಿ: ಪ್ರಿಯಾಂಕಾ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ಬಿಧುರಿ
Prashant Kishor: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್ ಕಿಶೋರ್ ಬಂಧನ
Protect: ಹೆತ್ತವರನ್ನು ಸಾಕದಿದ್ದರೆ ಗಿಫ್ಟ್ ಡೀಡ್ ರದ್ದು: ಸುಪ್ರೀಂ ಕೋರ್ಟ್
ವಲಸೆ ನಿಯಮ ಸಡಿಲಿಸಿದ ನ್ಯೂಜಿಲ್ಯಾಂಡ್ ಸರಕಾರ; ಭಾರತೀಯರಿಗೆ ಹೆಚ್ಚಿನ ಅವಕಾಶ ಸಾಧ್ಯತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.