ಕೈಗೆ ಮರೆವಿನ ಚಾಟಿ
ಪಿವಿಎನ್, ಡಾ.ಸಿಂಗ್‌ರನ್ನು ನೆನಪೇ ಮಾಡಿಕೊಳ್ಳಲ್ಲ: ಮೋದಿ ಟೀಕೆ
Team Udayavani, Jun 26, 2019, 6:00 AM IST
ನವದೆಹಲಿ: ”ಈ ದೇಶಕ್ಕೆ ಒಳಿತು ಮಾಡಿದವರನ್ನು ಕಾಂಗ್ರೆಸ್ ನಾಯಕರು ಎಂದಿಗೂ ನೆನೆಯುವುದಿಲ್ಲ. ಹಾಗೇನಾದರೂ ನೆನೆದರೆ ಅದು ಗಾಂಧಿ-ನೆಹರು ಕುಟುಂಬದವರನ್ನು ಮಾತ್ರ” ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.
17ನೇ ಲೋಕಸಭೆಯ ಜಂಟಿ ಸದನವನ್ನುದ್ದೇಶಿಸಿ ರಾಷ್ಟ್ರಪತಿಗಳ ಭಾಷಣಕ್ಕೆ ಸದನದಲ್ಲಿ ಸಲ್ಲಿಸಲಾದ ವಂದನಾರ್ಪಣೆ ಮೇಲಿನ ಭಾಷಣದಲ್ಲಿ ಅವರು, ”ಈ ದೇಶಕ್ಕೆ ಮಾಜಿ ಪ್ರಧಾನಿಗಳಾದ ವಾಜಪೇಯಿ ಅವರ ಕೊಡುಗೆ ಅಪಾರವಾಗಿದೆ. ಆದರೆ, ಅದನ್ನೆಂದೂ ಕಾಂಗ್ರೆಸ್ಸಿಗರು ನೆನೆಯುವುದಿಲ್ಲ. ಅದು ಹೋಗಲಿ, ಅವರದ್ದೇ ಪಕ್ಷದ ಇಬ್ಬರು ಮಾಜಿ ಪ್ರಧಾನಿಗಳಾದ ಪಿ.ವಿ. ನರಸಿಂಹರಾವ್ ಹಾಗೂ ಮನಮೋಹನ್ ಸಿಂಗ್ ಅವರ ಉತ್ತಮ ಕೆಲಸಗಳ ಬಗ್ಗೆಯಾದರೂ ಎಂದಾದರೂ ಮಾತನಾಡಿದ್ದಾರೆಯೇ? ಅದೂ ಇಲ್ಲ” ಎಂದರು. ಅಂದಹಾಗೆ, 2ನೇ ಬಾರಿಗೆ ಪ್ರಧಾನಿಯಾದ ನಂತರ ಲೋಕಸಭೆಯಲ್ಲಿ ಅವರು ಮೊದಲ ಭಾಷಣ ಇದಾಗಿತ್ತು.
ಸದೃಢ ದೇಶವೇ ನಮ್ಮ ಗುರಿ: ”ಸ್ವಾರ್ಥ ಮನೋಭಾವದ ಕಾಂಗ್ರೆಸ್‌ನ ನೇತೃತ್ವ ಹೊಂದಿದ್ದ ಯುಪಿಎ ಸರ್ಕಾರದ ಸತತ ಎರಡು ಅಧಿಕಾರಾವಧಿಯಲ್ಲಿ ರೋಸಿಹೋಗಿದ್ದ ಜನತೆ, ಆ ಆಡಳಿತದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಎನ್‌ಡಿಎಗೆ ಮತ ಹಾಕಿ ಅಧಿಕಾರಕ್ಕೆ ತಂದರು. ಈಗ ಮತ್ತೆ ಅಧಿಕಾರ ಕೊಟ್ಟಿದ್ದಾರೆ. ಚುನಾವಣೆಯ ಸೋಲು, ಗೆಲುವುಗಳ ಲೆಕ್ಕಾಚಾರ ಮೀರಿ ನಾವು ಜನಸೇವೆ ಮಾಡಬೇಕಿದೆ. ಈ ನಿಟ್ಟಿನಲ್ಲಿ, ಭಾರತವನ್ನು ಶಕ್ತಿಶಾಲಿ, ಸುರಕ್ಷೆ, ಅಭಿವೃದ್ಧಿಗೊಂಡ ಹಾಗೂ ಐಕ್ಯತೆಯ ರಾಷ್ಟ್ರವನ್ನಾಗಿ ರೂಪಿಸುವ ಪಣ ತೊಟ್ಟಿದ್ದೇವೆ” ಎಂದರು. ಅಲ್ಲದೆ, ತಮ್ಮ ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ ಎಂದರು.
ಮುಸ್ಲಿಮರು ಗಟರ್‌ನಲ್ಲಿ ವಾಸಿಸಲಿ ಎಂದರು!: ”ಕೇಂದ್ರ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ಮಾಜಿ ನಾಯಕ ಆರಿಫ್ ಮೊಹಮ್ಮದ್ ಖಾನ್, ಇತ್ತೀಚೆಗೆ ಸಂದರ್ಶನವೊಂದರಲ್ಲಿ ‘ಮುಸ್ಲಿಮರು ಗಟರ್‌ನಲ್ಲಿ ವಾಸಿಸಲಿ’ ಎಂದಿದ್ದರು” ಎಂದು ಮೋದಿ ಹೇಳಿದರು. ಇದಷ್ಟೇ ಅಲ್ಲ, ಖಾನ್ ಅವರು ಮುಸ್ಲಿಮರನ್ನು ಅಭಿವೃದ್ಧಿಗೊಳಿಸುವುದು ಕಾಂಗ್ರೆಸ್ ಕೆಲಸವಲ್ಲ ಎಂದೂ ತಮ್ಮ ಪಕ್ಷದ ನಾಯಕರು ತಿಳಿಸಿದ್ದರು ಎಂದು ಹೇಳಿದ್ದನ್ನು ಉಲ್ಲೇಖೀಸಿದರು. ”ಮುಸ್ಲಿಮರ ಬಗ್ಗೆ ಕಾಂಗ್ರೆಸ್ ಹೊಂದಿರುವ ಇಂಥ ಮನಸ್ಥಿತಿ ನಾಚಿಕೆಗೇಡಿನ ಸಂಗತಿ. ಮುಸ್ಲಿಮರನ್ನು ಅಭಿವೃದ್ಧಿಗೊಳಿಸುತ್ತೇವೆ ಎನ್ನುತ್ತಿದ್ದ ಕಾಂಗ್ರೆಸ್, ಅಧಿಕಾರದಲ್ಲಿರುವವರೆಗೂ ಸತತವಾಗಿ ಮುಸ್ಲಿಮರ, ಅದರಲ್ಲೂ ವಿಶೇಷವಾಗಿ ಆ ಸಮುದಾಯದ ಮಹಿಳೆಯರಿಗೆ ನಂಬಿಕೆದ್ರೋಹ ಮಾಡಿದೆ” ಎಂದರು. ಈ ಮೂಲಕ ತ್ರಿವಳಿ ತಲಾಖ್ ವಿಧೇಯಕಕ್ಕೆ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್ ಅನ್ನು ಕುಟುಕಿದರು.
”ಗುಜರಾತ್‌ನಲ್ಲಿ ನಿರ್ಮಾಣವಾದ ಸರ್ದಾರ್ ಪಟೇಲ್ ಅಣೆಕಟ್ಟು, ಸರ್ದಾರ್ ಪಟೇಲರ ಕನಸಾಗಿತ್ತು. ಆದರೆ, ಅದನ್ನು ನಿರ್ಮಿಸಲು ಅನೇಕ ಅಡೆತಡೆಗಳಿದ್ದವು. ನಾನು ಗುಜರಾತ್ ಸಿಎಂ ಆಗಿದ್ದಾಗ ಮಂದಗತಿಯಲ್ಲಿ ಸಾಗುತ್ತಿದ್ದ ಆ ಯೋಜನೆಗೆ ವೇಗವನ್ನು ನೀಡಿದೆ. ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದಾಗ ಆ ಯೋಜನೆಗೆ ಪ್ರೋತ್ಸಾಹ ಸಿಕ್ಕಿತು. ಈಗ ಅಣೆಕಟ್ಟು ನಿರ್ಮಾಣವಾಗಿದೆ. ಅದೇ ರೀತಿ ನಾನು ಇಡೀ ದೇಶದ ಉಳಿದ ಯೋಜನೆಗಳಿಗೂ ಗಮನ ನೀಡುತ್ತೇನೆ” ಎಂದು ಮೋದಿ ತಿಳಿಸಿದರು.
ತುರ್ತು ಪರಿಸ್ಥಿತಿ ಕರಾಳ ನೆನಪು
1975ರಿಂದ 1977ರವರೆಗೆ ದೇಶದಲ್ಲಿ ಜಾರಿಯಲ್ಲಿದ್ದು ತುರ್ತು ಪರಿಸ್ಥಿತಿ ಈ ದೇಶದ ಪ್ರಜಾಪ್ರಭುತ್ವದ ಇತಿಹಾಸಕ್ಕೆ ಕಳಂಕವಾಗಿದೆ ಎಂದು ವ್ಯಾಖ್ಯಾನಿಸಿದ ಮೋದಿ, ”ಆ ಕಳಂಕ ಎಂದಿಗೂ ಮಾಸುವುದಿಲ್ಲ. ಇಂದು ಜೂ. 25. 44 ವರ್ಷಗಳ ಹಿಂದೆ, ಇದೇ ದಿನ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಇದನ್ನು ಹೇರಿದವರು ಯಾರು? ಈ ದೇಶದ ಸಂವಿಧಾನವನ್ನು ನೆಲಸಮ ಮಾಡಿದವರು ಯಾರು, ಮಾಧ್ಯಮಗಳನ್ನು ಹತ್ತಿಕ್ಕಿದವರು ಯಾರು, ನ್ಯಾಯಾಂಗ ವನ್ನು ಭೂಗತ ಮಾಡಿದವರು ಯಾರು’ ಎಂದು ನಾನು ಇಂದು ಕಾಂಗ್ರೆಸ್ಸನ್ನು ಕೇಳಬಯಸುತ್ತೇನೆ’ ಎಂದ ಅವರು, ”ಆ ಕರಾಳ ದಿನಗಳನ್ನು ನಾವೆಂದಿಗೂ ಮರೆಯುವುದಿಲ್ಲ” ಎಂದರು.
ಅಂಬೇಡ್ಕರ್ ಸ್ಮರಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚೆನ್ನೈ ಲೈಂಗಿಕ ಕಿರುಕುಳ ಕೇಸ್: ಎಸ್‌ಐಟಿ ತನಿಖೆಗೆ ಹೈಕೋರ್ಟ್ ಆದೇಶ
Pinarayi Vijayan: ಸಿಂಗ್ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ
Manmohan Singh ವಿಚಾರದಲ್ಲಿ ಕಾಂಗ್ರೆಸ್ ಅಗ್ಗದ ರಾಜಕಾರಣ ಮಾಡುತ್ತಿದೆ: ಬಿಜೆಪಿ
ED ಅಧಿಕಾರಿ ಒಳಗೊಂಡ ಲಂಚ ಪ್ರಕರಣ; ಸಿಬಿಐನಿಂದ ಮಧ್ಯವರ್ತಿ ಬಂಧನ
Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.