ಬಾಂಬ್ ಕಟ್ಟಿ ಜಾನುವಾರು ಕಳ್ಳಸಾಗಣೆ
ಬಾಂಗ್ಲಾ ಗಡಿಯಲ್ಲಿ ಪ್ರಾಣವನ್ನೇ ಒತ್ತೆಯಿಟ್ಟು ಜಾನುವಾರು ರಕ್ಷಿಸುತ್ತಿರುವ ಯೋಧರು
Team Udayavani, Jul 27, 2019, 5:19 AM IST
ಕೋಲ್ಕತಾ: ಪಶ್ಚಿಮ ಬಂಗಾಲ ಬಳಿ ಗಡಿಯಲ್ಲಿ ಬಾಂಗ್ಲಾದೇಶದ ಜಾನುವಾರು ಕಳ್ಳಸಾಗಣೆದಾರರು ತಮ್ಮ ಕುಕೃತ್ಯಕ್ಕೆ ಅತ್ಯಂತ ಹೇಯ ಕ್ರಮ ಅನುಸರಿಸುತ್ತಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಈ ಭಾಗದಲ್ಲಿ ಜಾನುವಾರು ಕಳ್ಳತನ ಹಿಂದಿನಿಂದಲೂ ನಡೆಯುತ್ತಿದ್ದು, ಮಳೆಗಾಲ ಆರಂಭವಾಗುತ್ತಿದ್ದಂತೆ ಹೆಚ್ಚಳ ಕಂಡಿದೆ. ಇತ್ತೀಚೆಗೆ ಕಳ್ಳಸಾಗಣೆದಾರರು ಜಾನುವಾರುಗಳ ಕತ್ತಿಗೆ ಸ್ಫೋಟಕಗಳನ್ನು ಕಟ್ಟಿ, ನದಿಯಲ್ಲಿ ತೇಲಿಬಿಡುತ್ತಿದ್ದಾರೆ. ಈ ಜಾನುವಾರುಗಳನ್ನು ರಕ್ಷಿಸಲು ಹೋಗುವ ಬಿಎಸ್‌ಎಫ್ ಸಿಬಂದಿ ಸ್ವಲ್ಪ ಎಚ್ಚರ ತಪ್ಪಿದರೂ ಜಾನುವಾರು ಹಾಗೂ ಸಿಬಂದಿಗೆ ಪ್ರಾಣಾಪಾಯ ಖಚಿತ.
ಬಾಳೆ ಗಿಡಗಳಿಗೆ ಉದ್ದನೆಯ ಹಗ್ಗ ಕಟ್ಟಿ ಅದನ್ನು ಜಾನುವಾರುಗಳಿಗೆ ಕಟ್ಟಲಾಗುತ್ತದೆ. ಜೊತೆಗೆ ಜಾನುವಾರುಗಳ ಕತ್ತಿಗೆ ಸುಧಾರಿತ ಸ್ಫೋಟಕವನ್ನು ಕಟ್ಟಿ, ಜಾನುವಾರುಗಳನ್ನು ಸಣ್ಣ ತೊರೆಗಳಲ್ಲಿ ನೂಕಿಬಿಡಲಾಗುತ್ತದೆ. ಬಾಂಗ್ಲಾ ಗಡಿ ದಾಟಿ ಅನಂತರ ಬಾಂಗ್ಲಾದೇಶದ ಭಾಗದಲ್ಲಿ ಜಾನುವಾರುಗಳನ್ನು ಹಿಡಿದು ಕಸಾಯಿಖಾನೆಗೆ ಸಾಗಿಸಲಾಗುತ್ತದೆ. ಪಶ್ಚಿಮ ಬಂಗಾಲದ ಮಾಲ್ಡಾ, ಮುರ್ಶಿದಾಬಾದ್, ನಾರ್ತ್ 24 ಪರಗಣ ಹಾಗೂ ನಾಡಿಯಾದಲ್ಲಿ ಇಂಥವು ಭಾರೀ ಪ್ರಮಾಣದಲ್ಲಿ ಕಂಡುಬಂದಿವೆ. ಬುಧವಾರದಿಂದ ಈವರೆಗೆ 365 ಜಾನುವಾರುಗಳನ್ನು ಬಿಎಸ್‌ಎಫ್ ಸಿಬಂದಿ ರಕ್ಷಿಸಿದ್ದಾರೆ. ಜಾನುವಾರುಗಳ ರಕ್ಷಣೆಗೆ ಬಿಎಸ್‌ಎಫ್ ಸಿಬಂದಿ ಹೊಸ ತಂತ್ರಗಳನ್ನೂ ಅಳವಡಿಸಿಕೊಂಡಿದೆ. ಬೋಟ್‌ಗಳನ್ನು ಬಳಸಿ ನದಿಯಲ್ಲಿ ಜಾನುವಾರುಗಳ ಬಳಿ ತೆರಳುವ ಸಿಬಂದಿ, ಮೊದಲು ಈ ಕಚ್ಚಾ ಬಾಂಬ್‌ಗಳನ್ನು ತೆಗೆಯಬೇಕಾಗುತ್ತದೆ. ಇದಕ್ಕೆ ಸಿಬಂದಿ ತಮ್ಮ ಪ್ರಾಣವನ್ನೇ ಒತ್ತೆಯಿಡಬೇಕಾಗುತ್ತದೆ.
ಎಚ್ಚರಿಕೆ ವಹಿಸುವಂತೆ ಸೂಚನೆ: ಕಚ್ಚಾ ಬಾಂಬ್ ಹಿನ್ನೆಲೆಯಲ್ಲಿ ಯೋಧರಿಗೆ ತೀವ್ರ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಗುಂಪು ಗುಂಪಾಗಿ ಜಾನುವಾರುಗಳನ್ನು ತೇಲಿಬಿಡ ಲಾಗುತ್ತದೆ. ಕೆಲವು ಜಾನುವಾರುಗಳಿಗಷ್ಟೇ ಬಾಂಬ್ ಕಟ್ಟಲಾಗಿರುತ್ತದೆ. ಬಾಂಬ್ ಇಲ್ಲ ಎಂಬ ಕಾರಣಕ್ಕೆ ಜಾನುವಾರುಗಳ ರಕ್ಷಣೆಯಲ್ಲಿ ಎಚ್ಚರ ತಪ್ಪಿದರೆ ಪ್ರಾಣಕ್ಕೇ ಅಪಾಯ. ಬಿಎಸ್‌ಎಫ್ ಈ ಭಾಗದಲ್ಲಿ ಹೆಚ್ಚಿನ ಸಿಬಂದಿಯನ್ನೂ ನಿಯೋಜಿಸಿದೆ. ಮೋಟಾರ್‌ಬೋಟ್, ಸರ್ವೇಕ್ಷಣೆ ತಂತ್ರಜ್ಞಾನವನ್ನು ಅಳವಡಿಸಿ ಕೊಳ್ಳಲಾಗಿದೆ. ಇಲ್ಲಿರುವ ಶಸ್ತ್ರಸಜ್ಜಿತ ಕಳ್ಳಸಾಗಣೆ ದಾರರು ಯೋಧರ ಮೇಲೆ ದಾಳಿ ನಡೆಸಲು ಸನ್ನದ್ಧರಾಗಿರುತ್ತಾರೆ. ಇತ್ತೀಚೆಗೆ ಕಳ್ಳಸಾಗಣೆ ದಾರರೊಂದಿಗೆ ನಡೆದ ಘರ್ಷಣೆಯಲ್ಲಿ ಓರ್ವ ಬಿಎಸ್‌ಎಫ್ ಯೋಧರ ಕೈ ಕತ್ತರಿಸಿಹೋಗಿದೆ. ಈ ಎಲ್ಲ ಪ್ರಕರಣಗಳ ವಿವರಗಳನ್ನೂ ಬಾಂಗ್ಲಾದೇಶದ ಗಡಿ ಭದ್ರತಾ ಪಡೆಯೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಬಿಎಸ್‌ಎಫ್ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
PAK Vs SA: ಸರಣಿ ಕ್ಲೀನ್ ಸ್ವೀಪ್ ಗೈದ ಪಾಕಿಸ್ಥಾನ
Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕಾರ
BCCI: ಇನ್ನೆರಡು ಟೆಸ್ಟ್ ನಿಂದ ಮೊಹಮ್ಮದ್ ಶಮಿ ಹೊರಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.