9ರಂದು ಕಾವೇರಿ ಕುರಿತ ಕೇಂದ್ರದ ಅರ್ಜಿ ವಿಚಾರಣೆ
Team Udayavani, Apr 4, 2018, 9:50 AM IST
ಹೊಸದಿಲ್ಲಿ: ಕಾವೇರಿ ತೀರ್ಪಿನಲ್ಲಿ ತಿಳಿಸಿರುವ ಕೆಲವು ಅಂಶಗಳಲ್ಲಿ ಸ್ಪಷ್ಟತೆ ಹಾಗೂ ಸಮಿತಿ ರಚನೆಗೆ ಕಾಲಾವಕಾಶ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ಪುರಸ್ಕರಿಸಿರುವ ಸುಪ್ರೀಂ ಕೋರ್ಟ್, ಏ.9ರಂದು ವಿಚಾರಣೆ ನಿಗದಿಪಡಿಸಿದೆ.
ಅರ್ಜಿಯನ್ನು ತ್ವರಿತ ವಿಚಾರಣೆಗೆ ಒಳಪಡಿಸಬೇಕು ಎಂದು ಕೇಂದ್ರ ಸರ್ಕಾರದ ಪರ ವಕೀಲ ವಾಸಿಂ ಖಾದ್ರಿ ಕೇಳಿಕೊಂಡಿದ್ದು, ಅದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ, ತಮಿಳುನಾಡು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯ ದಿನವೇ(ಏ.9) ಈ ಅರ್ಜಿಯನ್ನೂ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು. ಕಾವೇರಿ ತೀರ್ಪಿನಲ್ಲಿ ಪ್ರಸ್ತಾಪಿಸಲಾಗಿರುವ ಸ್ಕೀಮ್ ಎಂಬ ಪದದ ಬಗ್ಗೆ ಕೇಂದ್ರ ಸರ್ಕಾರ ಅರ್ಜಿಯಲ್ಲಿ ಸ್ಪಷ್ಟನೆ ಕೇಳಿತ್ತು. ಜತೆಗೆ, ಕರ್ನಾಟಕದಲ್ಲಿ ಚುನಾವಣೆಯಿರುವ ಹಿನ್ನೆಲೆಯಲ್ಲಿ ಸುಪ್ರೀಂ ಆದೇಶ ಪಾಲನೆಗೆ 3 ತಿಂಗಳ ಕಾಲಾವಕಾಶವನ್ನೂ ಕೋರಿತ್ತು.
ಮುಂದುವರಿದ ಪ್ರತಿಭಟನೆ: ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಕೋರಿ ತಮಿಳುನಾಡಿನಾದ್ಯಂತ ನಡೆಯುತ್ತಿರುವ ಪ್ರತಿಭಟನೆ 3 ದಿನ ಪೂರೈಸಿದೆ. ಎಐಎಡಿಎಂಕೆ, ಡಿಎಂಕೆ ನಿರಶನ, ಪ್ರತಿಭಟನೆ ನಡೆಸಿವೆ.
ಉಪವಾಸದ ಮಧ್ಯೆ ಬಿರಿಯಾನಿ
ಉಪವಾಸ ಸತ್ಯಾಗ್ರಹ ನಡೆಯುತ್ತಿರುವಾಗ ಅಲ್ಲಿ ಬಿರಿಯಾನಿ, ಟೊಮ್ಯಾಟೋ ರೈಸ್‌ಗೇನು ಕೆಲಸ? ಖಂಡಿತಾ ಕೆಲಸ ಇದೆ. ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ವೆಲ್ಲೂರ್‌ನಲ್ಲಿ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಸಿಎಂ ಪಳನಿಸ್ವಾಮಿ ನೇತೃತ್ವದಲ್ಲಿ ಒಂದು ದಿನದ ನಿರಶನ ಕೈಗೊಂಡಿದ್ದಾಗ, ಎಲ್ಲರಿಗೂ ಮಧ್ಯಾಹ್ನದ ‘ಭೋಜನ ವಿರಾಮ’ ನೀಡಲಾಗಿದೆ. ಸತ್ಯಾಗ್ರಹಿಗಳು ಬಿಸಿಬಿಸಿ ಬಿರಿಯಾನಿ, ಟೊಮ್ಯಾಟೋ ಬಾತ್ ಸವಿದಿದ್ದಾರೆ. ಹೆಸರು ಉಪವಾಸ ಸತ್ಯಾಗ್ರಹ. ತೆರೆ ಮರೆಯಲ್ಲಿ ಭರ್ಜರಿ ಭೋಜನ. ಹೀಗೆ, ಉಪವಾಸ ಕೂತವರು ಲೆಕ್ಕಹಾಕಿ ತಿಂದಿದ್ದನ್ನು ಯಾರೋ ವಿಡಿಯೋ ಮಾಡಿದ್ದು, ಅದೀಗ ವೈರಲ್ ಆಗಿದೆ. ಜನರ ಕಣ್ಣಿಗೆ ಮಣ್ಣೆರೆಚುವ ನಿಜಬಣ್ಣವೂ ಬಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police Nabs: 930 “ಡಿಜಿಟಲ್ ಅರೆಸ್ಟ್’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!
PM-Kisan Samman; ರೈತರಿಗೆ 6000 ರೂ. ಸಿಗುವ ಯೋಜನೆಗೆ ಐ.ಡಿ. ಕಡ್ಡಾಯ : ಏನಿದು ರೈತ ಚೀಟಿ?
Ayodhya ರಾಮಮಂದಿರಕ್ಕೆ ಇಂದು ವರ್ಷಪೂರ್ಣ: ಹೇಗಿರಲಿದೆ ಕಾರ್ಯಕ್ರಮ?
Sambhal ಬಾವಿ ಬಗ್ಗೆ ಯಾವ ಕ್ರಮವೂ ಬೇಡ: ಸುಪ್ರೀಂಕೋರ್ಟ್
Maha Kumbh; ಜಾಗ ಕೇಳಿದರೆ ಹುಷಾರ್: ವಕ್ಫ್ ಬೋರ್ಡ್‌ಗೆ ಎಚ್ಚರಿಕೆ ನೀಡಿದ ಯೋಗಿ
MUST WATCH
ಹೊಸ ಸೇರ್ಪಡೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ
Police Nabs: 930 “ಡಿಜಿಟಲ್ ಅರೆಸ್ಟ್’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!
Revenue Officers: ನಿಮಗೆ ಸಲಾಂ ಹೊಡೀಬೇಕಾ?: ತಹಶೀಲ್ದಾರ್‌ಗೆ ಕಂದಾಯ ಸಚಿವ ತರಾಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.