ಸಿಬಿಎಸ್ ಸಿ ಪರೀಕ್ಷಾ ಶುಲ್ಕ ಹೆಚ್ಚಳ
Team Udayavani, Nov 28, 2019, 8:30 PM IST
ಹೊಸದಿಲ್ಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜ್ಯುಕೇಶನ್ (ಸಿಬಿಎಸ್ ಸಿ) ಪರೀಕ್ಷಾ ಶುಲ್ಕವನ್ನು ಮುಂಬರುವ ಶೈಕ್ಷಣಿಕ ವರ್ಷದಿಂದ ಹೆಚ್ಚಿಸಲಾಗುವುದು ಎಂದು ಕೇಂದ್ರ ಸರಕಾರ ಹೇಳಿದೆ. ರಾಷ್ಟ್ರ ರಾಜಧಾನಿ ಹೊಸದಿಲ್ಲಿಯನ್ನು ಹೊರತುಪಡಿಸಿ ಈ ಶುಲ್ಕ ಹೆಚ್ಚಳ ಅನ್ವಯವಾಗಲಿದೆ.
ದಿಲ್ಲಿ ಸರಕಾರ ಈಗಾಗಲೇ ತನ್ನ ಎಲ್ಲಾ 1299 ಶಾಲೆಗಳಿಗೆ ಅನ್ವಯವಾಗುವಂತೆ ಪರೀಕ್ಷಾ ಶುಲ್ಕವನ್ನು ಹೆಚ್ಚಿಸಿದೆ. ಇಲ್ಲಿ ಹತ್ತನೇ ತರಗತಿಗೆ 375 ರೂ.ನಿಂದ 1,200 ರೂ., 12ನೇ ತರಗತಿಯವರಿಗೆ 600 ರೂ.ನಿಂದ 1,200 ರೂ.ಗೆ ಹೆಚ್ಚಿಸಲಾಗಿದೆ.
ಈಗ ಸಿಬಿಎಸ್ ಸಿಯ 10ನೇ ತರಗತಿಯ ಪರಿಷ್ಕೃತ ಪರೀಕ್ಷಾ ಶುಲ್ಕವನ್ನು 750 ರೂ.ನಿಂದ 12,00ಗೆ ಏರಿಸಲಾಗಿದ್ದು, 12ನೇ ತರಗತಿಯ ಪರೀಕ್ಷಾ ಶುಲ್ಕವನ್ನು 750 ರೂ.ನಿಂದ 1500 ರೂ.ಗೆ ಏರಿಸಲಾಗಿದೆ. ಈ ನೂತನ ಪರಿಷ್ಕೃತ ಶುಲ್ಕ ಮುಂಬರುವ 2020ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ. ಸಿಬಿಎಸ್ ಸಿ ತನ್ನಲ್ಲಿ ಆದಾಯ ಪ್ರಮಾಣವನ್ನು ಕಾಯ್ದುಕೊಳ್ಳಲು ಈ ಕ್ರಮವನ್ನು ಕೈಗೊಂಡಿದೆ ಎಂದು ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಕ್ರಿಯಾಲ್ ರಾಜ್ಯಸಭೆಗೆ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.