ತನಿಖೆಗೆ 2 ವಾರ ಅವಕಾಶ

Team Udayavani, Oct 27, 2018, 6:00 AM IST

27-rahul.jpg

ಹೊಸದಿಲ್ಲಿ: ಸಿಬಿಐ ನಿರ್ದೇಶಕ ಅಲೋಕ್‌ ಕುಮಾರ್‌ ವರ್ಮಾ ವಿರುದ್ಧ ತನಿಖೆಯನ್ನು ಕೇಂದ್ರ ಜಾಗೃತ ದಳ (ಸಿವಿಸಿ) 2 ವಾರಗಳಲ್ಲಿ ಮುಕ್ತಾಯಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಆದೇಶ ನೀಡಿದೆ. ಜತೆಗೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾ| ಎ.ಕೆ.ಪಟ್ನಾಯಕ್‌ ತನಿಖೆ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ನ್ಯಾಯಪೀಠ ಆದೇಶಿಸಿದೆ. ಮತ್ತೂಂದು ಪ್ರಮುಖ ವಿಚಾರ ವೆಂದರೆ ಹಂಗಾಮಿ ಸಿಬಿಐ ನಿರ್ದೇಶಕ ಎಂ.ನಾಗೇಶ್ವರ ರಾವ್‌ ದಿನವಹಿ ವಿಚಾರಗಳ ಬಗ್ಗೆ ಮಾತ್ರ ಗಮನ ಹರಿಸಬೇಕು. ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಂತಿಲ್ಲ ಎಂದೂ ಸ್ಪಷ್ಟವಾಗಿ ತಿಳಿಸಿದೆ ಸುಪ್ರೀಂಕೋರ್ಟ್‌. ಇನ್ನೊಂದೆಡೆ ಬೆಳವಣಿಗೆ ಖಂಡಿಸಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ವಿಪಕ್ಷಗಳು ಸಿಬಿಐ ಪ್ರಧಾನ ಕಚೇರಿ ಸಮೀಪ ಭಾರಿ ಪ್ರತಿಭಟನೆ ನಡೆಸಿವೆ. ಈ ಸಂದರ್ಭದಲ್ಲಿ ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ.

2 ವಾರಗಳ ಅವಕಾಶ: ಸಿಬಿಐ ನಿರ್ದೇಶಕ ಅಲೋಕ್‌ ಕುಮಾರ್‌ ವರ್ಮಾ ತಮ್ಮನ್ನು ಬಲವಂತವಾಗಿ ರಜೆಯ ಮೇಲೆ ಕಳುಹಿಸಿ ದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪೀಠ ನಡೆಸಿತು. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್‌ ಉಸ್ತು ವಾರಿ ಸಿವಿಸಿ ಅಲೋಕ್‌ ಕುಮಾರ್‌ ವರ್ಮಾ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಬೇಕು. 2 ವಾರಗಳ ಒಳಗಾಗಿ ಪ್ರಕ್ರಿಯೆ ಮುಕ್ತಾಯಗೊಳಿಸಬೇಕು. ಜತೆಗೆ ಕೇಂದ್ರ ಸರಕಾರ, ಸಿವಿಸಿಗೆ ನೋಟೀಸ್‌ ನೀಡಿದೆ.

ಹತ್ತು ದಿನಗಳಲ್ಲಿ ಸಿಬಿಐ ನಿರ್ದೇಶಕರ ವಿರುದ್ಧ ಇರುವ ಆರೋಪಗಳ ಬಗ್ಗೆ ತನಿಖೆ ನಡೆಸಿ ಪ್ರಾಥಮಿಕ ವರದಿ ಸಲ್ಲಿಸಿ. ಅದನ್ನು ಪರಿಶೀಲಿಸಿ ಮುಂದಿನ ತನಿಖೆ ಅಗತ್ಯ ವಿದೆಯೋ ಇಲ್ಲವೋ ಎಂದು ಪರಿಶೀಲಿ ಸೋಣ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಅಟಾರ್ನಿ ಜನ ರಲ್‌ ಕೆ.ಕೆ.ವೇಣುಗೋಪಾಲ್‌ಗೆ ಸೂಚಿಸಿ ದರು. ಇದೇ ವೇಳೆ ಸಿವಿಸಿ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಈಗಾಗಲೇ ತನಿಖೆ ಆರಂಭಿಸ ಲಾಗಿದೆ. ಭಾರೀ ಸಂಖ್ಯೆಯ ದಾಖಲೆಗಳನ್ನು ಪರಿಶೀಲಿಸಬೇಕಾಗಿರುವುದ ರಿಂದ 10 ದಿನ ಸಾಲದು ಎಂದರು. ಅದಕ್ಕೆ ಉತ್ತರಿಸಿದ ನ್ಯಾಯಪೀಠ “ದೇಶದ ಹಿತಾಸಕ್ತಿಯಿಂದ ಇದು ಒಳ್ಳೆಯದಲ್ಲ. ದೀರ್ಘ‌ ಕಾಲದ ವರೆಗೆ ತನಿಖೆ ನಡೆಯುವುದು ಉತ್ತಮವಲ್ಲ. 2 ವಾರಗಳನ್ನು ನೀಡಿದ್ದೇವೆ’ ಎಂದು ಹೇಳಿತು. 

ಈ ನಡುವೆ ಕಾಮನ್‌ ಕಾಸ್‌ ಎಂಬ ಎನ್‌ಜಿಒ ರಾಕೇಶ್‌ ಅಸ್ತಾನ ಮತ್ತು ಇತರ ಸಿಬಿಐ ಅಧಿಕಾರಿಗಳ ವಿರುದ್ಧ ವಿಶೇಷ ತನಿಖಾ ತಂಡದಿಂದ ತನಿಖೆಯಾಗಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ಪರಿಗಣಿಸಿ ಕೇಂದ್ರ, ಸಿಬಿಐ, ಸಿವಿಸಿ, ರಾಕೇಶ್‌ ಅಸ್ತಾನ, ಅಲೋಕ್‌ ಕುಮಾರ್‌ ವರ್ಮಾ, ಹಂಗಾಮಿ ನಿರ್ದೇಶಕ ನಾಗೇಶ್ವರ ರಾವ್‌ಗೂ ನೋಟಿಸ್‌ ನೀಡಿ, ನ.12ರ ಒಳಗಾಗಿ ಉತ್ತರಿಸುವಂತೆ ಸೂಚಿಸಿದೆ. 

ನಿರ್ಧಾರ ಕೈಗೊಳ್ಳುವಂತಿಲ್ಲ: ಹಂಗಾಮಿ ನಿರ್ದೇಶಕರಾಗಿರುವ ಎಂ.ನಾಗೇಶ್ವರ ರಾವ್‌ ಸಿಬಿಐನ ದಿನವಹಿ ಪ್ರಕರಣ, ಕೆಲಸಗಳ ಬಗ್ಗೆ ಮಾತ್ರ ಉಸ್ತುವಾರಿ ನೋಡಿಕೊಳ್ಳಬೇಕು.ಪ್ರಮುಖ ನಿರ್ಧಾರ, ಆಡಳಿತಾತ್ಮಕ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ಹೇಳಿದೆ ಸುಪ್ರೀಂಕೋರ್ಟ್‌. ಹೀಗಾಗಿ ಅ.23ರ ಬಳಿಕ ರಾವ್‌ ಹೊರಡಿಸಿದ ಅಧಿಕಾರಿಗಳ ವರ್ಗಾವಣೆ ಆದೇಶ ಜಾರಿಯಾಗುವಂತಿಲ್ಲ ಎಂದೂ ಸ್ಪಷ್ಟಪಡಿಸಿದೆ. ಅವರ ನಿರ್ಧಾರಗಳನ್ನು ಮೊಹರು ಮಾಡಿದ ಲಕೋಟೆಯಲ್ಲಿ ಕೋರ್ಟ್‌ಗೆ ಸಲ್ಲಿಸಬೇಕು ಎಂದು ನ್ಯಾಯಪೀಠ ಹೇಳಿದೆ. 

ಇದೇ ವೇಳೆ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನ ಪರವಾಗಿ ವಾದಿಸಿದ ಹಿರಿಯ ನ್ಯಾಯವಾದಿ ಮುಕುಲ್‌ ರೋಹಟಗಿ ತಮ್ಮ ಕಕ್ಷಿದಾರನ ವಾದವನ್ನೂ ಕೇಳಬೇಕು ಎಂದರು. “ನಮ್ಮ ಮುಂದೆ ಇರದ ಅರ್ಜಿಯ ವಿಚಾರಣೆ ಸಾಧ್ಯವಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ರಾಹುಲ್‌ ನೇತೃತ್ವದಲ್ಲಿ ಪ್ರತಿಭಟನೆ 
ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸಿಬಿಐ ಕೇಂದ್ರ ಕಚೇರಿಯಿಂದ 4.2 ಕಿಮೀ ದೂರದಲ್ಲಿ ಭಾರೀ ಪ್ರತಿಭಟನೆ ನಡೆಸಿದರು. ತೃಣಮೂಲ ಕಾಂಗ್ರೆಸ್‌, ಸಿಪಿಎಂ ಮತ್ತು ಇತರ ಪಕ್ಷದ ನಾಯಕರು ಕಾಂಗ್ರೆಸ್‌ ಅಧ್ಯಕ್ಷರ ಜತೆ ಇದ್ದರು. ಇದೇ ಸಂದರ್ಭದಲ್ಲಿ ಪೊಲೀಸರು ಪ್ರತಿಪಕ್ಷಗಳ ನಾಯಕರು ಸಿಬಿಐ ಕಚೇರಿಯತ್ತ ತೆರಳಲು ಮುಂದಾದವರನ್ನು ಬ್ಯಾರಿಕೇಡ್‌ ಹಾಕಿ ತಡೆದರು. ಒಂದು ಹಂತದಲ್ಲಿ ರಾಹುಲ್‌ ಬ್ಯಾರಿಕೇಡ್‌ ಮೇಲೆ ಹತ್ತಿ ಕುಳಿತಿದ್ದರು. ರಾಹುಲ್‌, ಕಾಂಗ್ರೆಸ್‌ ನಾಯಕ ಅಶೋಕ್‌ ಗೆಹಲೋಟ್  ಮತ್ತು ಇತರರು ಹೊಸದಿಲ್ಲಿಯ ಲೋಧಿ ಪೊಲೀಸ್‌ ಠಾಣೆಗೆ ತೆರಳಿ ಬಂಧನಕ್ಕೊಳಗಾದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್‌ “ಹೆದರಿಕೆಯಿಂದಾಗಿಯೇ ಪ್ರಧಾನಿ ಸಿಬಿಐ ಮುಖ್ಯಸ್ಥರನ್ನು ವಜಾ ಮಾಡಿದ್ದಾರೆ. ರಫೇಲ್‌ ಡೀಲ್‌ ಬಗ್ಗೆ ಅವರು ತನಿಖೆ ಮಾಡುವುದರಲ್ಲಿದ್ದರು. ಅನಿಲ್‌ ಅಂಬಾನಿಗೆ 30 ಸಾವಿರ ಕೋಟಿ ರೂ. ಮೊತ್ತದ ಡೀಲ್‌ ನೀಡಿದ್ದ ಬಗ್ಗೆ ಸತ್ಯ ಹೊರ ಬೀಳುವುದರಲ್ಲಿತ್ತು ಎಂದಿದ್ದಾರೆ. ಚೌಕಿದಾರ ಕಳ್ಳನಾಗಲು ಅವಕಾಶ ಕೊಡುವುದಿಲ್ಲ ಎಂದಿದ್ದಾರೆ.

ಸುಪ್ರೀಂಕೋರ್ಟ್‌ ಆದೇಶ ಸ್ವಾಗತಾರ್ಹ. ಯಾವುದೇ ವ್ಯಕ್ತಿ ವಿರುದ್ಧ ಸರಕಾರ ಇಲ್ಲ. ಜತೆಗೆ ಯಾವುದೇ ಹಿತಾಸಕ್ತಿಯನ್ನೂ ಹೊಂದಿಲ್ಲ. ಇತ್ತೀಚಿನ ಬೆಳವಣಿಗೆಗಳು ಸಿಬಿಐನ ವಿಶ್ವಾಸಾರ್ಹತೆ ತಗ್ಗಿಸಿದೆ. ಇಬ್ಬರು ಅಧಿಕಾರಿಗಳ ವಿರುದ್ಧದ ಆರೋಪ ತನಿಖೆಯಾಗುವ ವರೆಗೆ ಸಿವಿಸಿ ಅವರನ್ನು ರಜೆಯ ಮೇಲೆ ತೆರಳುವಂತೆ ಸೂಚಿಸಿದೆ.
ಅರುಣ್‌ ಜೇಟ್ಲಿ, ಕೇಂದ್ರ ವಿತ್ತ ಸಚಿವ

ಸುಪ್ರೀಂಕೋರ್ಟ್‌ ಮಧ್ಯಪ್ರವೇಶ ಮಾಡಿದ್ದು ಸಮಾಧಾನ ತಂದಿದೆ. ಈ ಕ್ರಮ ದಿಂದಲಾದರೂ ಕೇಂದ್ರ ತನಿಖಾ ಸಂಸ್ಥೆಯ ನಂಬಿಕೆ ಮರು ಸ್ಥಾಪನೆ ಯಾಗುತ್ತದೆ ಎಂಬ ವಿಶ್ವಾಸವಿದೆ.
ಅರವಿಂದ ಕೇಜ್ರಿವಾಲ್‌,ದಿಲ್ಲಿ ಮುಖ್ಯಮಂತ್ರಿ

ಟಾಪ್ ನ್ಯೂಸ್

Fake News: ಕೇಂದ್ರ ಸಚಿವ ಅಮಿತ್‌ ಶಾ ನಿಧನ ಎಂದು ಸುಳ್ಳು ಸುದ್ದಿ: ವ್ಯಕ್ತಿ ಸೆರೆ

Fake News: ಕೇಂದ್ರ ಸಚಿವ ಅಮಿತ್‌ ಶಾ ನಿಧನ ಎಂದು ಸುಳ್ಳು ಸುದ್ದಿ: ವ್ಯಕ್ತಿ ಸೆರೆ

Karnataka ಸೇರಿ ವಿವಿಧ ರಾಜ್ಯದ ಸಾಧಕರ ಜತೆ ರಾಷ್ಟ್ರಪತಿ ಭೇಟಿ

Karnataka ಸೇರಿ ವಿವಿಧ ರಾಜ್ಯದ ಸಾಧಕರ ಜತೆ ರಾಷ್ಟ್ರಪತಿ ಭೇಟಿ

ISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗ

ISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗ

ಬಾಹ್ಯಾಕಾಶದಲ್ಲಿ ಕ್ರಿಸ್ಮಸ್‌ ಆಚರಿಸಿದ ಸುನೀತಾ ವಿಲಿಯಮ್ಸ್‌

ಬಾಹ್ಯಾಕಾಶದಲ್ಲಿ ಕ್ರಿಸ್ಮಸ್‌ ಆಚರಿಸಿದ ಸುನೀತಾ ವಿಲಿಯಮ್ಸ್‌

Ken-Betwa River linking project: ಅಂಬೇಡ್ಕರ್‌ ಜಲಸಂರಕ್ಷಕ: ಪ್ರಧಾನಿ ಮೋದಿ ಶ್ಲಾಘನೆ

Ken-Betwa River linking project: ಅಂಬೇಡ್ಕರ್‌ ಜಲಸಂರಕ್ಷಕ: ಪ್ರಧಾನಿ ಮೋದಿ ಶ್ಲಾಘನೆ

ಮಾಜಿ ಪ್ರಧಾನಿ ವಾಜಪೇಯಿ ಜನ್ಮ ಶತಮಾನೋತ್ಸವ: ಗಣ್ಯರಿಂದ ನಮನ

ಮಾಜಿ ಪ್ರಧಾನಿ ವಾಜಪೇಯಿ ಜನ್ಮ ಶತಮಾನೋತ್ಸವ: ಗಣ್ಯರಿಂದ ನಮನ

ಕೇಜ್ರಿ ಯೋಜನೆಗಳಿಗೆ ನೋಂದಣಿ ಶುರು ಮಾಡಿಲ್ಲ: ದಿಲ್ಲಿ ಸರಕಾರ

Delhi Government: ಕೇಜ್ರಿ ಯೋಜನೆಗಳಿಗೆ ನೋಂದಣಿ ಶುರು ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fake News: ಕೇಂದ್ರ ಸಚಿವ ಅಮಿತ್‌ ಶಾ ನಿಧನ ಎಂದು ಸುಳ್ಳು ಸುದ್ದಿ: ವ್ಯಕ್ತಿ ಸೆರೆ

Fake News: ಕೇಂದ್ರ ಸಚಿವ ಅಮಿತ್‌ ಶಾ ನಿಧನ ಎಂದು ಸುಳ್ಳು ಸುದ್ದಿ: ವ್ಯಕ್ತಿ ಸೆರೆ

Karnataka ಸೇರಿ ವಿವಿಧ ರಾಜ್ಯದ ಸಾಧಕರ ಜತೆ ರಾಷ್ಟ್ರಪತಿ ಭೇಟಿ

Karnataka ಸೇರಿ ವಿವಿಧ ರಾಜ್ಯದ ಸಾಧಕರ ಜತೆ ರಾಷ್ಟ್ರಪತಿ ಭೇಟಿ

ISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗ

ISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗ

Ken-Betwa River linking project: ಅಂಬೇಡ್ಕರ್‌ ಜಲಸಂರಕ್ಷಕ: ಪ್ರಧಾನಿ ಮೋದಿ ಶ್ಲಾಘನೆ

Ken-Betwa River linking project: ಅಂಬೇಡ್ಕರ್‌ ಜಲಸಂರಕ್ಷಕ: ಪ್ರಧಾನಿ ಮೋದಿ ಶ್ಲಾಘನೆ

ಮಾಜಿ ಪ್ರಧಾನಿ ವಾಜಪೇಯಿ ಜನ್ಮ ಶತಮಾನೋತ್ಸವ: ಗಣ್ಯರಿಂದ ನಮನ

ಮಾಜಿ ಪ್ರಧಾನಿ ವಾಜಪೇಯಿ ಜನ್ಮ ಶತಮಾನೋತ್ಸವ: ಗಣ್ಯರಿಂದ ನಮನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Fake News: ಕೇಂದ್ರ ಸಚಿವ ಅಮಿತ್‌ ಶಾ ನಿಧನ ಎಂದು ಸುಳ್ಳು ಸುದ್ದಿ: ವ್ಯಕ್ತಿ ಸೆರೆ

Fake News: ಕೇಂದ್ರ ಸಚಿವ ಅಮಿತ್‌ ಶಾ ನಿಧನ ಎಂದು ಸುಳ್ಳು ಸುದ್ದಿ: ವ್ಯಕ್ತಿ ಸೆರೆ

ABV-Modi

A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್‌ ಬಿಹಾರಿ ವಾಜಪೇಯಿ ಭದ್ರ ಬುನಾದಿ

Karnataka ಸೇರಿ ವಿವಿಧ ರಾಜ್ಯದ ಸಾಧಕರ ಜತೆ ರಾಷ್ಟ್ರಪತಿ ಭೇಟಿ

Karnataka ಸೇರಿ ವಿವಿಧ ರಾಜ್ಯದ ಸಾಧಕರ ಜತೆ ರಾಷ್ಟ್ರಪತಿ ಭೇಟಿ

ISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗ

ISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗ

ಬಾಹ್ಯಾಕಾಶದಲ್ಲಿ ಕ್ರಿಸ್ಮಸ್‌ ಆಚರಿಸಿದ ಸುನೀತಾ ವಿಲಿಯಮ್ಸ್‌

ಬಾಹ್ಯಾಕಾಶದಲ್ಲಿ ಕ್ರಿಸ್ಮಸ್‌ ಆಚರಿಸಿದ ಸುನೀತಾ ವಿಲಿಯಮ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.