ಹತ್ರಾಸ್ ಪ್ರಕರಣ: CCTV ದೃಶ್ಯಾವಳಿ ಇಲ್ಲ ಎಂದ ಆಸ್ಪತ್ರೆ; ಬರಿಗೈಯಲ್ಲಿ ಹಿಂದಿರುಗಿದ CBI
Team Udayavani, Oct 15, 2020, 4:21 PM IST
ಮಣಿಪಾಲ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 19 ವರ್ಷದ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಸಾವಿನ ಪ್ರಕರಣದಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸರ ನಿರ್ಲಕ್ಷ್ಯ ಮತ್ತೊಮ್ಮೆ ಸಾಬೀತಾಗಿದೆ.
ಸಿಬಿಐ ತನಿಖೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಘಟನೆಯ ಸಾಕ್ಷ್ಯಗಳನ್ನು ಸಂಗ್ರಹಿಸಲು ಹತ್ರಾಸ್ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಸಿಬಿಐ ತಂಡ ಯಾವುದೇ ಸಾಕ್ಷ್ಯಗಳಿಲ್ಲದೇ ವಾಪಾಸಾಗಿದೆ.
ಸೆಪ್ಟಂಬರ್ 14 ರಂದು ನಡೆದ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಿಬಿಐಗೆ ಲಭ್ಯವಾಗಿಲ್ಲ.
ಸಂತ್ರಸ್ಥೆಯನ್ನು ಚಿಕಿತ್ಸೆಗಾಗಿ ಕರೆತಂದಾಗ ಜಿಲ್ಲಾಡಳಿತ ಮತ್ತು ಪೊಲೀಸರು ಅವುಗಳ ದೃಶ್ಯಗಳನ್ನು ಚಿತ್ರೀಕರಿಸಿಲ್ಲ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ವಾದಿಸಿದೆ. ಆದರೆ ಘಟನೆಯ ಒಂದು ತಿಂಗಳ ಬಳಿಕ ಸಿಸಿಟಿವಿ ದೃಶ್ಯಾವಳಿಗಳು ಸಾಮಾನ್ಯವಾಗಿ ಬ್ಯಾಕಪ್‌ನಲ್ಲಿರುವುದಿಲ್ಲ. ಆದರೆ ಇಲ್ಲಿ ಆಸ್ಪತ್ರೆಯ ಲೋಪ ಎದ್ದು ಕಾಣುತ್ತಿದ್ದು ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕರು ಮತ್ತು ವೈದ್ಯರನ್ನು ಸಿಬಿಐ ತರಾಟೆಗೆ ತೆಗೆದುಕೊಂಡಿದೆ. ಹತ್ರಾಸ್ ಜಿಲ್ಲಾ ಆಸ್ಪತ್ರೆಯ ವೈದ್ಯರ ಮೇಲೆ ಅನುಮಾನ ಮೂಡುತ್ತಿದೆ ಎಂದು ಹೇಳಿ ಸಿಬಿಐ ತಂಡ ಹಿಂದಿರುಗಿದೆ.
ಸೆಪ್ಟೆಂಬರ್ 14 ರಂದು, ಹತ್ರಾಸ್ ಜಿಲ್ಲೆಯ ಬುಲ್ಗಧಿ ಗ್ರಾಮದಲ್ಲಿ 4 ವರ್ಷದ 19 ವರ್ಷದ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಆರೋಪಿಯು ಬಾಲಕಿಯ ಬೆನ್ನೆಲುಬು ಮುರಿದು ನಾಲಗೆ ಕೂಡ ಕತ್ತರಿಸಿದ. ಸೆಪ್ಟೆಂಬರ್ 29ರಂದು ದಿಲ್ಲಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಸಂತ್ರಸ್ತೆ ಸಾವನ್ನಪ್ಪಿದ್ದಾಳೆ. ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಅತ್ಯಾಚಾರ ನಡೆದಿಲ್ಲ ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಕುಟುಂಬ ಅತ್ಯಾಚಾರ ನಡೆದಿದೆ ಎಂದು ಹೇಳಿದೆ. ಸಾಕ್ಷ್ಯನಾಶಕ್ಕಾಗಿ ಪೊಲೀಸರು ರಾತ್ರೋರಾತ್ರಿ ಸಂತ್ರಸ್ತೆಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಇದರ ಸುಳಿವು ಕುಟುಂಬಕ್ಕ ನೀಡಲಾಗಿಲ್ಲ.
ಸಂತ್ರಸ್ತೆಯನ್ನು ಅವರ ಕುಟುಂಬವು ಸೆಪ್ಟೆಂಬರ್ 14ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿತ್ತು. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಸಂತ್ರಸ್ತೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಲಿಘರ್‌ನ ಜೆಎನ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿತ್ತು. ಹೀಗಾಗಿ ಅಲ್ಲಿನ ಘಟನೆಗಳ ಕುರಿತ ಪ್ರಶ್ನೆಗಳಿಗೆ ಸಿಬಿಐ ಉತ್ತರಗಳನ್ನು ಬಯಸಿದೆ.
ಸಿಬಿಐ ಕೇಳಿದ ಪ್ರಶ್ನೆಗಳು
-ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸುವಾಗ ಅವರೊಂದಿಗೆ ಯಾರು ಇದ್ದರು?
-ಯಾವ ವೈದ್ಯರು ಚಿಕಿತ್ಸೆ ನೀಡಿದರು?
-ಸಂತ್ರಸ್ತೆ ಆಸ್ಪತ್ರೆಯಲ್ಲಿ ಎಷ್ಟು ದಿನ ಇದ್ದರು?
-ಅವರನ್ನು ಭೇಟಿಯಾಗಲು ಯಾರು ಬಂದಿದ್ದರು.
– ಸಂತ್ರಸ್ತೆ ಎಷ್ಟು ಜನರೊಂದಿಗೆ ಮಾತನಾಡಿದ್ದಾರೆ?
ನಮ್ಮ ಕ್ಯಾಮೆರಾಗಳು ಉತ್ತಮವಾಗಿವೆ, ಆದರೆ ಈಗ ಬ್ಯಾಕಪ್ ಇಲ್ಲ
ಸಿಸಿಟಿವಿ ತುಣುಕು ಲಭ್ಯವಿಲ್ಲದ ಕಾರಣ ಸಿಬಿಐ ಈಗ ಹೇಳಿಕೆಗಳ ಆಧಾರದ ಮೇಲೆ ಮಾತ್ರ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ. ನಮ್ಮ ಕ್ಯಾಮೆರಾಗಳು ಉತ್ತಮವಾಗಿವೆ. ಆದರೆ ಅವುಗಳ ಬ್ಯಾಕಪ್ ಕೇವಲ 7 ದಿನಗಳು ಎಂದು ಹತ್ರಾಸ್ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಇಂದ್ರವೀರ್ ಸಿಂಗ್ ಹೇಳಿದ್ದಾರೆ. ಸಿಬಿಐ 29 ದಿನಗಳ ಅನಂತರ ಬಂದಿತ್ತು. ಆದ್ದರಿಂದ ಬ್ಯಾಕಪ್ ಅನ್ನು ಇಟ್ಟುಕೊಳ್ಳಲಾಗಿಲ್ಲ. ಪ್ರತಿ 7 ದಿನಗಳಿಗೊಮ್ಮೆ ಹಳೆಯ ದಾಖಲೆಗಳನ್ನು ಅಳಿಸಲಾಗುತ್ತದೆ. ಆದರೆ ಜಿಲ್ಲಾಡಳಿತ ನಮಗೆ ಮಾಹಿತಿ ನೀಡಿದ್ದರೆ ನಾವು ದೃಶ್ಯಾವಳಿಗಳನ್ನು ಸಂಗ್ರಹಿಸಿಡುತ್ತಿದ್ದೆವು ಎಂದು ಆಸ್ಪತ್ರೆ ಹೇಳಿದೆ. ಇದು ಆಕ್ರೋಶಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.