ಅಂತರ್ಜಾಲ ತನಿಖಾ ಘಟಕ ಶುರು
Team Udayavani, Nov 16, 2019, 5:21 AM IST
ಹೊಸದಿಲ್ಲಿ: ಕೇಂದ್ರ ತನಿಖಾ ಸಂಸ್ಥೆ ಸಿಬಿಐ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಶೋಷಣೆ ತಡೆಯಲು ಆಧುನಿಕ ತಂತ್ರಜ್ಞಾನದ ಮೊರೆಹೋಗಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಶೋಷಣೆ ತಡೆ/ತನಿಖೆ (ಒಸಿಎಸ್‌ಎಇ) ಎಂಬ ಅಂತರ್ಜಾಲ ಘಟಕವನ್ನು ಅದು ತೆರೆದಿದೆ.
ಅದರ ಮೂಲಕ ಹೆಚ್ಚುತ್ತಿರುವ ಈ ರೀತಿಯ ದೌರ್ಜನ್ಯವನ್ನು ತಡೆಯಲು ಸಿದ್ಧವಾಗಿದೆ. ಇದೊಂದು ವಿಶೇಷ ಘಟಕ. ಸಿಬಿಐನ ವಿಶೇಷ ಅಪರಾಧ ತನಿಖಾ ಘಟಕದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಮಕ್ಕಳನ್ನು ಶೋಷಿ ಸುವಂತಹ ವಿಷಯಗಳನ್ನು ಸಿದ್ಧಪಡಿಸಿ, ಅದನ್ನು ಅಂತರ್ಜಾಲದಲ್ಲಿ ಹರಡುವ ವ್ಯಕ್ತಿ ಗಳನ್ನು ಪತ್ತೆ ಹಚ್ಚುತ್ತದೆ. ಅಷ್ಟು ಮಾತ್ರವಲ್ಲ, ಈ ವಿಷಯ ಗಳನ್ನು ಹುಡುಕಿ, ಸಂಗ್ರಹಿಸುವ ವ್ಯಕ್ತಿ ಗಳ ಕುರಿತೂ ಮಾಹಿತಿ ಸಂಗ್ರಹಿಸುತ್ತದೆ. ಶೋಷಕರ ವಿರುದ್ಧ ಐಪಿಸಿ ನಿಯಮಗಳು, 2012ರಲ್ಲಿ ತಯಾರಾದ ಕಠಿನ ಪೋಕ್ಸೋ ಕಾಯಿದೆಯಡಿ ದೂರನ್ನು ದಾಖಲಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.