CBSE SSLC ಫಲಿತಾಂಶ ಪ್ರಕಟ; ತೇರ್ಗಡೆ ಪ್ರಮಾಣ ಶೇ.5ರಷ್ಟು ಕುಸಿತ
Team Udayavani, Jun 3, 2017, 3:46 PM IST
ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್) (ಸಿಬಿಎಸ್ಇ) ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ಶೇ.90.95ರಷ್ಟು ಫಲಿತಾಂಶ ದಾಖಲಾಗಿದೆ. ಆದರೆ 2016ನೇ ಸಾಲಿನಲ್ಲಿ ಶೇ.96.21ರಷ್ಟು ಫಲಿತಾಂಶ ಬಂದಿದ್ದು, ಈ ವರ್ಷದ ಫಲಿತಾಂಶ ಶೇ.5ರಷ್ಟು ಕುಸಿತ ಕಂಡಿದೆ.
ತಿರುವನಂತಪುರ ಪ್ರದೇಶ ಅತ್ಯಧಿಕ (ಶೇ.99.85) ಫಲಿತಾಂಶ ಪಡೆದಿದೆ. ಮದ್ರಾಸ್ ಶೇ.99.62 ಮತ್ತು ಅಲಹಾಬಾದ್ ನಲ್ಲಿ ಶೇ.98.23ರಷ್ಟು ಫಲಿತಾಂಶ ಪಡೆದಿದೆ.
ಈ ಬಾರಿ ದೆಹಲಿಯ ಫಲಿತಾಂಶದಲ್ಲಿ ಶೇ,13ರಷ್ಟು ಕುಸಿತ ಕಂಡಿದೆ. ಕಳೆದ ಬಾರಿ 91.06ರಷ್ಟು ಫಲಿತಾಂಶ ಪಡೆದಿದ್ದ ದೆಹಲಿ ಪ್ರಸಕ್ತ ಸಾಲಿನಲ್ಲಿ ಶೇ.78.09ರಷ್ಟು ಫಲಿತಾಂಶ ಗಳಿಸಿದೆ.
ಫಲಿತಾಂಶಕ್ಕಾಗಿ ಈ ವೆಬ್ ಸೈಟ್ ನೋಡಿ:
cbseresults.nic.in/cbse.nic.in/results.nic.in/Bing.com
ಎಸ್ ಎಂಎಸ್ ಮೂಲಕ ಫಲಿತಾಂಶ ಪಡೆಯಬಹುದು:
ಸಿಬಿಎಸ್ ಸಿ ಹತ್ತನೇ ತರಗತಿಯ ಫಲಿತಾಂಶವನ್ನು ಎಸ್ ಎಂಎಸ್ ಸೇವೆಯ ಮೂಲಕವೂ ಪಡೆಯಬಹುದಾಗಿದೆ. ಪ್ರತಿ ಫಲಿತಾಂಶಕ್ಕೆ 50ಪೈಸೆ ಶುಲ್ಕ. ಫಲಿತಾಂಶ ಪಡೆಯಲಿ ಈ ಕೆಳಗಿನ ಯಾವುದೇ ಸಂಖ್ಯೆಗೆ ರೋಲ್ ನಂಬರ್ ಕಳುಹಿಸಿ ಫಲಿತಾಂಶ ತಿಳಿದುಕೊಳ್ಳಬಹುದು.
Telephone numbers are: 52001 (MTNL), 57766 (BSNL), 5800002 (Aircel), 55456068 (Idea), 54321, 51234 – 5333300 (TataTeleservices), 54321202 (Airtel), and 9212357123 (National Informatics Centre)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.