ಸಿಬಿಎಸ್ ಇ 12ನೇ ತರಗತಿ ಫಲಿತಾಂಶ ಪ್ರಕಟ: ಶೇ.99.37 ವಿದ್ಯಾರ್ಥಿಗಳು ತೇರ್ಗಡೆ
Team Udayavani, Jul 30, 2021, 2:42 PM IST
Representative Image Used
ಹೊಸದಿಲ್ಲಿ: ಸಿಬಿಎಸ್ ಇ (ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜುಕೇಶನ್) ನ 12ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಇಂದು ಪ್ರಕಟವಾಗಿದೆ. ಶೇ.99.37ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕೋವಿಡ್-19 ಎರಡನೇ ಅಲೆಯ ಹಿನ್ನೆಲೆಯಲ್ಲಿ ಈ ವರ್ಷ ಸಿಬಿಎಸ್ ಇ 12ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಪರ್ಯಾಯ ಮೌಲ್ಯಮಾಪನ ನೀತಿಯಡಿ ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡಿ ಇಂದು ಫಲಿತಾಂಶ ಪ್ರಕಟಿಸಿದೆ. 30:30:40 ಸೂತ್ರದಡಿ ಫಲಿತಾಂಶ ನೀಡಲಾಗಿದೆ. 10 ಮತ್ತು 11ನೇ ತರಗತಿ ಅಂತಿಮ ಪರೀಕ್ಷೆ ಅಂಕ ಮತ್ತು 12ನೇ ತರಗತಿಯಲ್ಲಿ ಈಗಾಗಲೇ ನಡೆಸಿರುವ ಪೂರ್ವ ಸಿದ್ಧತಾ ಪರೀಕ್ಷೆಗಳ ಅಂಕ ಆಧರಿಸಿ 30:30:40 ಅನುಪಾತದಲ್ಲಿ ಈ ಬಾರಿ ಫಲಿತಾಂಶ ಪ್ರಕಟಿಸಲಾಗಿದೆ.
ಇದನ್ನೂ ಓದಿ:ಕೇಂದ್ರದ ನಾಯಕರಿಗೆ ಬೆದರಿಕೆ ಹಾಕಿ ಬಿಎಸ್ ವೈ ನನಗೆ ಸಿಎಂ ಹುದ್ದೆ ತಪ್ಪಿಸಿದ್ದಾರೆ: ಯತ್ನಾಳ್
ಅಧಿಕೃತ ಜಾಲತಾಣ cbse.nic.in ಇಲ್ಲವೇ cbseresults.nic.in ಗೆ ಭೇಟಿ ನೀಡಿ, ನೋಂದಣಿ ಸಂಖ್ಯೆ ನಮೂದಿಸಿ ನೋಡಬಹುದು. ಅಲ್ಲದೇ ಇದಲ್ಲದೇ ವಿದ್ಯಾರ್ಥಿಗಳು ಡಿಜಿಲಾಕರ್ ನಲ್ಲಿ ತಮ್ಮ ಫಲಿತಾಂಶ ಪಡೆಯಬಹುದು.
ಈ ವ್ಯವಸ್ಥೆಯ ಬಗ್ಗೆ ಅಸಮಾಧಾನ ಇರುವ ವಿದ್ಯಾರ್ಥಿಗಳು ನೇರವಾಗಿ 12ನೇ ತರಗತಿಯ ಆಫ್ ಲೈನ್ ಪರೀಕ್ಷೆಗಳನ್ನು ಬರೆಯಲು ಅವಕಾಶವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.