ಸಿಬಿಎಸ್‌ಇ ಪರೀಕ್ಷೆಗೆ ಬದಲಾವಣೆ
Team Udayavani, Jul 15, 2022, 8:10 AM IST
ಹೊಸದಿಲ್ಲಿ: ಸಿಬಿಎಸ್‌ಇ 10 ಮತ್ತು 12ನೇ ತರಗತಿಯ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಕಾಯುತ್ತಿರುವಂತೆಯೇ, ಮುಂದಿನ ವರ್ಷದಿಂದ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟಿನ ಬದಲಾವಣೆ ತರಲು ಸಿಬಿಎಸ್‌ಇ ಸಿದ್ಧತೆ ನಡೆಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನ್ವಯ, ಈಗಾಗಲೇ ಕೆಲವು ಶಾಲೆಗಳಲ್ಲಿ ಹೊಸ ನಿಯಮಗಳನ್ನು ಪರಿಚಯಿಸಲಾಗಿದೆ. 2024ರಿಂದ ಎಲ್ಲ ಶಾಲೆಗಳೂ ಇದನ್ನು ಅನುಸರಿಸಬೇಕಿದೆ.
ಏನೇನು ಬದಲಾವಣೆ? :
- ಎಲ್ಲ ವಿಷಯಗಳಿಗೂ (ಪ್ರಾಕ್ಟಿಕಲ್ ಪರೀಕ್ಷೆ ಇಲ್ಲದಂತಹ ವಿಷಯಗಳಿಗೂ) ಶೇ.20ರಷ್ಟು ಆಂತರಿಕ ಮೌಲ್ಯಾಂಕನ ನೀಡಲಾಗುತ್ತದೆ. ಶಿಕ್ಷಕರು ಮತ್ತು ಹೆತ್ತವರು ಮಾಡುವ ಮೌಲ್ಯಮಾಪನವನ್ನು ಆಧರಿಸಿ ಈ ಅಂಕ ನೀಡಲಾಗುತ್ತದೆ.
- ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆ ನೀಡುವ ಸಲುವಾಗಿ ಪ್ರಶ್ನೆಗಳ ಸಂಖ್ಯೆಯನ್ನು ಶೇ.33ರಷ್ಟು ಹೆಚ್ಚಳ ಮಾಡಲಾಗುತ್ತದೆ. ಹೀಗಾಗಿ ಪ್ರಶ್ನೆಪತ್ರಿಕೆ ದೀರ್ಘವಾಗಿದ್ದರೂ ವಿದ್ಯಾರ್ಥಿಗಳಿಗೆ ಉತ್ತರಿಸಲು ಬಹು ಆಯ್ಕೆಗಳು ಸಿಗುತ್ತವೆ.
- ಪ್ರಶ್ನೆಗಳು ಕೌಶಲ ಆಧರಿತ ಮತ್ತು ಸಾಮರ್ಥ್ಯ ಆಧರಿತವಾಗಿದ್ದು, ವಿದ್ಯಾರ್ಥಿಗಳು ವಿಮಶಾìತ್ಮಕವಾಗಿ ಚಿಂತನೆ ನಡೆಸಲು ಅವಕಾಶ ಕಲ್ಪಿಸಲಾಗುತ್ತದೆ. ಅವರು ತಾವು ಕಲಿತಿದ್ದನ್ನು ಬೇರೆ ಬೇರೆ ರೀತಿಯಲ್ಲಿ ಆಲೋಚಿಸಿ, ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಈ ಉತ್ತರಗಳು ಪುಸ್ತಕದಲ್ಲಿ ಸಿಗುವುದಿಲ್ಲ.
- 3, 5, 8ನೇ ತರಗತಿಯಲ್ಲಿ ವಿದ್ಯಾರ್ಥಿಗಳ ಮೌಲ್ಯಮೌಪನ ಸರ್ವೇ ನಡೆಸಲಾಗುತ್ತದೆ.
- ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಶಿಕ್ಷಕರು, ಹೆತ್ತವರು, ಸಮಾನ ಸ್ಕಂಧ ವಿದ್ಯಾರ್ಥಿಗಳ ಗುಂಪು ಮೌಲ್ಯಮಾಪನ ಮಾಡಲಿದೆ. ಜತೆಗೆ ಆಯಾ ವಿದ್ಯಾರ್ಥಿಯೂ ತನ್ನನ್ನು ತಾನೇ ಮೌಲ್ಯಮಾಪನ ಮಾಡುವ ಅವಕಾಶವಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.