ಹಿಂದಿ ಹೇರಿಕೆಯತ್ತ ಕೇಂದ್ರದ ಮತ್ತೂಂದು ಹೆಜ್ಜೆ
Team Udayavani, Oct 9, 2017, 7:05 AM IST
ಹೊಸದಿಲ್ಲಿ: ಇತ್ತೀಚೆಗೆ ಹಲವು ಕ್ರಮಗಳ ಮೂಲಕ “ಹಿಂದಿ ಹೇರಿಕೆ’ಯ ಆರೋಪಕ್ಕೆ ಗುರಿಯಾಗಿದ್ದ ಕೇಂದ್ರ ಸರಕಾರ, ಇದೀಗ ಮತ್ತೆ ಸದ್ದಿಲ್ಲದೇ ತನ್ನ ಇರಾದೆಯನ್ನು ಪೂರೈಸುವತ್ತ ಹೊರಟಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ತ್ರಿಭಾಷಾ ಸೂತ್ರದ ಅಡಿಯಲ್ಲಿ ಜರ್ಮನ್, ಫ್ರೆಂಚ್ನಂತಹ ವಿದೇಶಿ ಭಾಷೆಗಳು ಇರು ವಂತಿಲ್ಲ. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಉಲ್ಲೇಖೀಸಿದ ಭಾಷೆಗಳನ್ನು ಮಾತ್ರವೇ ತ್ರಿಭಾಷೆಗಳೆಂದು ಪರಿಗಣಿಸಬೇಕು ಎಂದು ಸಿಬಿಎಸ್ಇಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸೂಚನೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.
ಪ್ರಸ್ತುತ ತ್ರಿಭಾಷಾ ಸೂತ್ರದಂತೆ, ಹಿಂದಿ ಭಾಷಿಕ ಪ್ರದೇಶದಲ್ಲಿ ಹಿಂದಿ ಜತೆಗೆ ಇಂಗ್ಲಿಷ್ ಬೋಧಿಸಬೇಕು ಮತ್ತು ಹಿಂದಿಯೇತರ ಭಾಷಿಕ ಪ್ರದೇಶಗಳಲ್ಲಿ ಮಾತೃಭಾಷೆಯ ಜತೆಗೆ ಹಿಂದಿ ಮತ್ತು ಇಂಗ್ಲಿಷ್ ಬೋಧಿಸಬೇಕು. ಆದರೆ 18 ಸಾವಿರಕ್ಕೂ ಹೆಚ್ಚು ಸಂಸ್ಥೆಗಳು ಹಿಂದಿ, ಇಂಗ್ಲಿಷ್ ಜತೆಗೆ ಜರ್ಮನ್, ಮ್ಯಾಂಡರಿನ್ ಅಥವಾ ಫ್ರೆಂಚ್ ಭಾಷೆಗಳನ್ನು 8ನೇ ತರಗತಿಯವರೆಗೆ ಬೋಧಿಸುತ್ತಿವೆ. ಮುಂದಿನ ವರ್ಷದಿಂದ ವಿದೇಶಿ ಭಾಷೆ ಕಲಿಯಲು ಆಸಕ್ತಿ ಇರುವ ವಿದ್ಯಾರ್ಥಿಗಳು ಅದನ್ನು ನಾಲ್ಕನೇ ಅಥವಾ ಐದನೇ ಭಾಷೆಯಾಗಿ ಪರಿಗಣಿಸಬೇಕು. ಈ ಬಗ್ಗೆ ಸಿಬಿಎಸ್ಇ ಜತೆ ಸಮಾಲೋಚನೆ ನಡೆಸಲಾಗಿದ್ದು, ಶೀಘ್ರದಲ್ಲೇ ಅಧಿಸೂಚನೆ ಹೊರಡಿಸುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.