CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ
ವಿದ್ಯಾರ್ಥಿಗಳ ಶೈಕ್ಷಣಿಕ ಹೊರೆ ಇಳಿಸಲು ಈ ಕ್ರಮ
Team Udayavani, Nov 15, 2024, 6:40 AM IST
ಹೊಸದಿಲ್ಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯು 2025ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿ ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ಹಲವು ಮಹತ್ವದ ಬದಲಾವಣೆಗಳನ್ನು ಪರಿಚಯಿಸುವ ಸಾಧ್ಯತೆಗಳಿವೆ. ಈ ಪೈಕಿ ಪಠ್ಯಕ್ರಮವನ್ನು ಶೇ. 10ರಿಂದ ಶೇ. 15ರಷ್ಟು ಕಡಿತಗೊಳಿಸುವುದು, ಆಂತರಿಕ ಅಂಕ ಹೆಚ್ಚಿಸುವ ಪ್ರಸ್ತಾವ ಸೇರಿದೆ.
ಸಿಬಿಎಸ್‌ಇ ಭೋಪಾಲ್ ಪ್ರಾದೇಶಿಕ ಮುಖ್ಯಸ್ಥ ವಿಕಾಸ್ ಅಗರ್ವಾಲ್ ಅವರು ಇಂದೋರ್‌ನಲ್ಲಿ ಶಾಲಾ ಪ್ರಾಂಶುಪಾಲರ ಜತೆಗೆ ನಡೆಸಿದ ಸಭೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವುದರ ಜತೆಗೆ ಅಗತ್ಯ ವಿಷಯಗಳಲ್ಲಿನ ಅಧ್ಯಯನ ಹೆಚ್ಚಿಸಿ, ಕೇಂದ್ರೀಕರಿಸಲು ಸಹಾಯವಾಗುವಂತೆ ಸುಧಾರಣೆಗಳನ್ನು ಕೈಗೊಳ್ಳಲು ಸಿಬಿಎಸ್‌ಇ ಯೋಜಿಸುತ್ತಿದೆ ಎಂದಿದ್ದಾರೆ. ಆದರೆ ಈ ಪ್ರಸ್ತಾವಗಳ ಬಗ್ಗೆ ಸಿಬಿಎಸ್‌ಇ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಅಗರ್ವಾಲ್ ನೀಡಿದ ಮಾಹಿತಿ ಪ್ರಕಾರ ಪಠ್ಯಕ್ರಮ ಕಡಿತದ ಜತೆಗೆ ವಿದ್ಯಾರ್ಥಿಗಳ ನಿರಂತರ ಕಲಿಕೆಗೆ ಪ್ರೋತ್ಸಾಹಿಸಲು ಪ್ರಸಕ್ತ ಶೇ. 20ರಷ್ಟಿರುವ ಆಂತರಿಕ ಅಂಕಗಳನ್ನು ಶೇ. 40ಕ್ಕೆ ಹೆಚ್ಚಿಸಿ, ಶೇ. 60ರಷ್ಟು ಅಂಕವನ್ನು ಅಂತಿಮ ಬೋರ್ಡ್ ಪರೀಕ್ಷೆಗೆ ಮೀಸಲಿರಿಸಲು ಯೋಜಿಸಲಾಗಿದೆ. ಈ ಮೂಲಕ ಪ್ರಾಜೆಕ್ಟ್, ಅಸೈನ್‌ಮೆಂಟ್ಸ್, ಆವರ್ತಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಅಭಿವೃದ್ಧಿ, ಕೌಶಲ ಪ್ರದರ್ಶನಕ್ಕೆ ಒತ್ತು ನೀಡಲಾಗುತ್ತದೆ.
ಇದಲ್ಲದೆ ಪರೀಕ್ಷಾ ಮಾದರಿಯನ್ನೂ ಪರಿಷ್ಕರಿಸಲು ಯೋಜಿಸಲಾಗಿದ್ದು, 2025ರ ಬೋರ್ಡ್ ಪರೀಕ್ಷೆಗಳಲ್ಲಿ ಬರೀ ಸೈದ್ಧಾಂತಿಕ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ರೂಪಿಸುವುದರ ಬದಲಿಗೆ 2020ರ ರಾಷ್ಟ್ರೀಯ ಶಿಕ್ಷಣ ನೀತಿಗೆ ಹೊಂದಾಣಿಕೆಯಾಗುವಂತೆ ಶೇ. 50ರಷ್ಟು ಪ್ರಶ್ನೆಗಳನ್ನು ಪ್ರಾಯೋಗಿಕ ಜ್ಞಾನ, ಕೌಶಲ ಶಿಕ್ಷಣಕ್ಕೆ ಸಂಬಂಧಿಸಿದಂತೆ ರೂಪಿಸಲಾಗುತ್ತದೆ ಎಂದು ಅಗರ್ವಾಲ್ ಹೇಳಿದ್ದಾರೆ.
ಜತೆಗೆ ಆಯ್ದ ವಿಷಯಗಳಿಗೆ ಡಿಜಿಟಲ್ ಮೌಲ್ಯಮಾಪನ ಹಾಗೂ ವಿದ್ಯಾರ್ಥಿಗಳ ವಿಶ್ಲೇಷಣಾತ್ಮಕ ಸಾಮರ್ಥ್ಯಕ್ಕೆ ಒತ್ತು ನೀಡಲು ಇಂಗ್ಲಿಷ್ ಸಾಹಿತ್ಯ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ತೆರೆದ ಪುಸಕ್ತ ಪರೀಕ್ಷೆಗಳನ್ನು ನಡೆಸುವ ಬಗ್ಗೆಯೂ ಚರ್ಚಿಸಲಾಗಿದೆ. 2025-26ನೇ ಶೈಕ್ಷಣಿಕ ವರ್ಷದಲ್ಲಿ ವಾರ್ಷಿಕ ಎರಡು- ಅವಧಿಯ ಬೋರ್ಡ್ ಪರೀಕ್ಷೆಗಳನ್ನು ನಡೆಸಲೂ ಮಂಡಳಿ ನಿರ್ಧರಿಸಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Service Variation: ಸರಕಾರಿ ಬಸ್ ಸೇವೆಯಲ್ಲಿ ವ್ಯತ್ಯಯ: ಪ್ರಯಾಣಿಕರ ಪರದಾಟ
Mangaluru: ಕಡಲತಡಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಸಕಲ ಸಿದ್ಧತೆ
Kundapura: ಸರಕಾರಿ ಕಾಲೇಜಿನ ಎನ್‌ವಿಆರ್ ಕೆಮರಾ ಕಳವು
Manipal: ‘ಉದಯವಾಣಿ’ ಸದಭಿರುಚಿಯ ಓದುಗರ ಸೃಷ್ಟಿಸಿದೆ: ಜಯಪ್ರಕಾಶ್
Belthangady: ಕಾರು-ದ್ವಿಚಕ್ರ ವಾಹನ ಅಪಘಾತ: ಗಾಯಾಳಾಗಿದ್ದ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.