Maldives ವಿರುದ್ಧ ಸಿಡಿದು ನಿಂತ ಸೆಲೆಬ್ರಿಟಿಗಳು

ಪ್ರಧಾನಿ ನರೇಂದ್ರ ಮೋದಿ ಅವಹೇಳನಕ್ಕೆ ಸಚಿನ್‌, ಸಲ್ಮಾನ್‌, ಶ್ರದ್ಧಾ ಕಪೂರ್‌ ಆಕ್ರೋಶ... ದ್ವೇಷಕ್ಕೆ ಪ್ರೋತ್ಸಾಹವೇಕೆ?

Team Udayavani, Jan 8, 2024, 5:18 AM IST

sachin-Tendulkar

ಹೊಸದಿಲ್ಲಿ/ಮಾಲೆ: ಪ್ರವಾಸೋದ್ಯಮವೇ ಆದಾ ಯದ ಮೂಲವಾಗಿರುವ ಭಾರತದ ನೆರೆಯ ದೇಶ ಮಾಲ್ದೀವ್ಸ್‌ ಪ್ರಧಾನಿ ನರೇಂದ್ರ ಮೋದಿಯವರನ್ನು ಅವಹೇಳನ ಮಾಡಿಕೊಂಡು ಭಾರೀ ಪ್ರಮಾಣದಲ್ಲಿ ಎಡವಟ್ಟು ಮಾಡಿಕೊಂಡಿದೆ. ದೇಶದ ಪ್ರಮುಖ ಬಾಲಿವುಡ್‌ ನಟ – ನಟಿಯರಾದ ಅಕ್ಷಯ ಕುಮಾರ್‌, ಸಲ್ಮಾನ್‌ ಖಾನ್‌, ಜಾನ್‌ ಅಬ್ರಹಾಂ, ಕಂಗನಾ ರಾಣಾವತ್‌, ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಅವರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲರೂ ಕೂಡ ಲಕ್ಷದ್ವೀಪ, ಸಿಂಧೂದುರ್ಗ ಸೇರಿದಂತೆ ಪ್ರಮುಖ ಸಮುದ್ರ ಕಿನಾರೆಗಳ ಮಹತ್ವವನ್ನು ಸಾರಿ ಹೇಳಿದ್ದಾರೆ.

ಬಾಲಿವುಡ್‌ ನಟ ಅಕ್ಷಯ ಕುಮಾರ್‌ ಟ್ವೀಟ್‌ ಮಾಡಿ “ಮಾಲ್ದೀವ್ಸ್‌ನ ಪ್ರಮುಖರು ಭಾರತದ ವಿರುದ್ಧ ದ್ವೇಷಮಯ ಮತ್ತು ಜನಾಂಗೀಯ ನಿಂದನೆಯ ಅಂಶಗಳನ್ನು ವ್ಯಕ್ತಪಡಿಸಿದ್ದಾರೆ. ಆ ದೇಶಕ್ಕೆ ಅತ್ಯಂತ ಹೆಚ್ಚು ಪ್ರವಾಸಿಗರನ್ನು ಕಳುಹಿಸುವ ಭಾರತದ ವಿರುದ್ಧವೇ ಇಂಥ ಕೀಳು ಅಭಿಪ್ರಾಯ ವ್ಯಕ್ತಪಡಿಸಿದ್ದು ಎಷ್ಟು ಸರಿ? ಮಾಲ್ದೀವ್ಸ್‌ ಭಾರತದ ಜತೆಗೆ ಉತ್ತಮ ಬಾಂಧವ್ಯ ಹೊಂದಿದೆ. ಇಂಥ ಅಪ್ರಚೋದನಾಕಾರಿ ಇರುವ ದ್ವೇಷವನ್ನು ನಾವೇಕೆ ಪ್ರೋತ್ಸಾಹಿಸಬೇಕು ಎಂದು ಪ್ರಶ್ನಿಸಿದ್ದಾರೆ. ನಾವೆಲ್ಲರೂ ನಮ್ಮ ದೇಶದ ಸುಂದರ ಸ್ಥಳಗಳಿಗೆ ಭೇಟಿ ನೀಡೋಣ ಎಂದು ಬರೆದುಕೊಂಡಿದ್ದಾರೆ.

ಭಾರತದಲ್ಲಿಯೇ ಇದೆ

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಟ್ವೀಟ್‌ ಮಾಡಿ “ಸುಂದರವಾಗಿರುವ ಮತ್ತು ಶುಚಿಯಾಗಿರುವ ಲಕ್ಷದ್ವೀಪದ ಬೀಚ್‌ಗಳಲ್ಲಿ ಪ್ರಧಾನಿಯವರನ್ನು ನೋಡಲು ಖುಷಿಯಾಗುತ್ತಿದೆ. ನಮ್ಮ ದೇಶದಲ್ಲಿಯೇ ಅತ್ಯಂತ ಸುಂದರವಾದ ಸ್ಥಳಗಳು ಇವೆ’ ಎಂದು ಬರೆದುಕೊಂಡಿದ್ದಾರೆ.

ಬಾಲಿವುಡ್‌ ನಟಿ ಶ್ರದ್ಧಾ ಕಪೂರ್‌ ಕೂಡ ಮಾಲ್ದೀವ್ಸ್‌ ಸಚಿವರ ಹೇಳಿಕೆ ವಿರುದ್ಧ ಗರಂ ಆಗಿದ್ದಾರೆ. “ಲಕ್ಷದ್ವೀಪದ ಬೀಚ್‌ಗಳು ಯಾವತ್ತಿದ್ದರೂ ಸುಂದರ. ಅವುಗಳು ಸ್ಥಳೀಯ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ನಾನು ಲಕ್ಷದ್ವೀಪದ ಬೀಚ್‌ಗೆ ತೆರಳಲು ಶೀಘ್ರವೇ ಬುಕ್‌ ಮಾಡಲಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಜನಾಂಗೀಯ ನಿಂದನೆ

ಮಾಲ್ದೀವ್ಸ್‌ನ ಸಚಿವರ ಹೇಳಿಕೆಯನ್ನು ಜನಾಂಗೀಯ ನಿಂದನೆ ಎಂದು ಬಾಲಿವುಡ್‌ ನಟಿ ಕಂಗನಾ ರಾಣಾವತ್‌ ಟೀಕಿಸಿ ದ್ದಾರೆ. “ಮಾಲ್ದೀವ್ಸ್‌ನಲ್ಲಿ ಇರುವವರೆಲ್ಲರೂ ಮುಸ್ಲಿಂ ಫೋಬಿಯಾದಿಂದ ಬಳಲುತ್ತಿದ್ದಾರೆ. ಲಕ್ಷದ್ವೀಪದಲ್ಲಿ ಮುಸ್ಲಿಂ ಸಮುದಾಯದವರು ಶೇ.98 ಮಂದಿ ಇದ್ದರೂ ಮಾಲ್ದೀವ್ಸ್‌ನಂಥವರಂತೆ ವರ್ತಿಸುತ್ತಿಲ್ಲ. ಹೀಗಾಗಿ ಇದೊಂದು ಜನಾಂಗೀಯ ನಿಂದನೆಯ ಹೇಳಿಕೆಯಾಗಿದೆ’ ಎಂದು ಬರೆದುಕೊಂಡಿದ್ದಾರೆ.
ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಬೀಚ್‌ನಲ್ಲಿ ಕ್ರಿಕೆಟ್‌ ಆಡುವ ಫೋಟೋ ಟ್ವೀಟ್‌ ಮಾಡಿ “ನಮ್ಮ ದೇಶದಲ್ಲಿ ಅತ್ಯಂತ ಸುಂದರ ವಾಗಿರುವ ಸಮುದ್ರ ಕಿನಾರೆಗಳು ಮತ್ತು ಉತ್ತಮ ದ್ವೀಪಗಳು ಇವೆ. ಅತಿಥಿ ದೇವೋಭವ ಎನ್ನುವ ತಣ್ತೀದಂತೆ ನಾವು ಪ್ರವಾಸಿಗರನ್ನು ಸ್ವಾಗತಿಸುತ್ತೇವೆ. ನಮ್ಮ ದೇಶದಲ್ಲಿ ಶೋಧಿಸಿ ತೆಗೆಯಬೇಕಾದ ಇನ್ನೂ ಅನೇಕ ಸುಂದರ ಸ್ಥಳಗಳು ಇವೆ’ ಎಂದು ಬರೆದುಕೊಂಡಿದ್ದಾರೆ. ಜತೆಗೆ ಮಹಾರಾಷ್ಟ್ರದ ಸಿಂಧೂದುರ್ಗಕ್ಕೆ ಭೇಟಿ ನೀಡಿದ್ದನ್ನೂ ಅದರಲ್ಲಿ ನೆನಪಿಸಿಕೊಂಡಿದ್ದಾರೆ.

ಮೋದಿ ವಿರುದ್ಧ ಪದ ಬಳಕೆ ಖಂಡನಾರ್ಹ

ಮೊಹಮ್ಮದ್‌ ನಶೀದ್‌: ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಮ್ಮ ದೇಶದ ಮೂವರು ಸಚಿವರು ಬಳಕೆ ಮಾಡಿದ ಭಾಷೆಯ ವಿರುದ್ಧ ಮಾಲ್ದೀವ್ಸ್‌ ಮಾಜಿ ಅಧ್ಯಕ್ಷ ಮೊಹಮ್ಮದ್‌ ನಶೀದ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸರಕಾರದಲ್ಲಿ ಸಚಿವೆಯಾಗಿದ್ದುಕೊಂಡು ಪ್ರಮುಖ ಮಿತ್ರ ರಾಷ್ಟ್ರದ ಪ್ರಧಾನಿಯೊಬ್ಬರ ವಿರುದ್ಧ ತುತ್ಛ ಭಾಷೆ ಪ್ರಯೋಗ ಮಾಡಿದ್ದು ಖಂಡನೀಯ. ಭಾರತ ಯಾವತ್ತೂ ಮಾಲ್ದೀವ್ಸ್‌ನ ಭದ್ರತೆ, ಆರ್ಥಿಕಾಭಿವೃದ್ಧಿ ಕ್ಷೇತ್ರದಲ್ಲಿ ಪ್ರಧಾನ ಪಾಲುದಾರ ರಾಷ್ಟ್ರ. ನಮ್ಮ ದೇಶದ ಸರಕಾರ ಅವಹೇಳನಕಾರಿ ಹೇಳಿಕೆಯಿಂದ ದೂರ ಸರಿಯಬೇಕು ಎಂದು ಆಗ್ರಹಿಸಿದ್ದರು.

ಲಕ್ಷದ್ವೀಪ ಯಾವತ್ತೂ ಹೋಗುವ ಸ್ಥಳವಾಗಿದೆ. ನಮ್ಮ ದೇಶ ಇತರ ರಾಷ್ಟ್ರಗಳ ಪ್ರವಾಸಿಗರನ್ನು ಅತಿಥಿ ದೇವೋಭವ ಎಂದು ಗೌರವದಿಂದ ಸ್ವಾಗತಿಸುವ ಸಂಪ್ರದಾಯ ಹೊಂದಿದೆ.
ಜಾನ್‌ ಅಬ್ರಹಾಂ, ಬಾಲಿವುಡ್‌ ನಟ

ಲಕ್ಷದ್ವೀಪದ ಬೀಚ್‌ಗಳು ಯಾವತ್ತಿದ್ದರೂ ಸುಂದರ. ಅವುಗಳು ಸ್ಥಳೀಯ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ನಾನು ಲಕ್ಷದ್ವೀಪದ ಬೀಚ್‌ಗೆ ತೆರಳಲು ಶೀಘ್ರವೇ ಬುಕ್‌ ಮಾಡಲಿದ್ದೇನೆ.
ಶ್ರದ್ಧಾ ಕಪೂರ್‌, ಬಾಲಿವುಡ್‌ ನಟಿ

ನಮ್ಮ ದೇಶದಲ್ಲಿ ಅತ್ಯಂತ ಸುಂದರವಾಗಿರುವ ಸಮುದ್ರ ಕಿನಾರೆಗಳು ಮತ್ತು ಉತ್ತಮ ದ್ವೀಪಗಳು ಇವೆ. ಅತಿಥಿ ದೇವೋಭವ ಎನ್ನುವ ತಣ್ತೀದಂತೆ ನಾವು ಪ್ರವಾಸಿಗರನ್ನು ಸ್ವಾಗತಿಸುತ್ತೇವೆ. ನಮ್ಮ ದೇಶದಲ್ಲಿ ಶೋಧಿಸಿ ತೆಗೆಯಬೇಕಾದ ಇನ್ನೂ ಅನೇಕ ಸುಂದರ ಸ್ಥಳಗಳು ಇವೆ.
ಸಚಿನ್‌ ತೆಂಡೂಲ್ಕರ್‌, ಮಾಜಿ ಕ್ರಿಕೆಟಿಗ

ಮಾಲ್ದೀವ್ಸ್‌ಗೆ ಭೇಟಿ ನೀಡುವ ಪ್ರವಾಸಿಗರು
ಪ್ರವಾಸಿಗರ ಸಂಖ್ಯೆ ದೇಶ
2. 9 ಲಕ್ಷ ಭಾರತ
2 ಲಕ್ಷ ರಷ್ಯಾ
1.87 ಲಕ್ಷ ಚೀನ

ಪ್ರವಾಸೋದ್ಯಮದಿಂದ ಮಾಲ್ದೀವ್ಸ್‌ಗೆ ಆದಾಯ
7,349.10 ಕೋ.ರೂ.
2023 ಸೆಪ್ಟಂಬರ್‌ ಅಂತ್ಯಕ್ಕೆ

6,951.50 ಕೋ.ರೂ. 2022ರ 2ನೇ ತ್ತೈಮಾಸಿಕದಲ್ಲಿ

ದೇಶದಲ್ಲೇ ಹೊಸ ಪ್ರವಾಸಿ ತಾಣಕ್ಕಾಗಿ ಜಾಲತಾಣಗಳಲ್ಲಿ ಅಭಿಯಾನ ಶುರು

ಮಾಲ್ದೀವ್ಸ್‌ನ ಮೂವರು ಸಚಿವರು ಹೊಣೆ ಗೇಡಿನದ ಹೇಳಿಕೆ ನೀಡುತ್ತಿದ್ದಂತೆಯೇ ಜಾಲ ತಾಲತಾಣಗಳಲ್ಲಿ ಭಾರತದ ನೆರೆಯ ದೇಶದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ದೇಶದಲ್ಲಿ ಇರುವ ಅತ್ಯುತ್ತಮ ಸಮುದ್ರ ಕಿನಾರೆಗಳನ್ನು ಶೋಧಿಸಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಲವರು ಜಾಲತಾಣ ಗಳಲ್ಲಿ ಹೊಸ ಪ್ರಯತ್ನ ನಡೆಸಿ ದ್ದಾರೆ. ಇದರ ಜತೆಗೆ ಪ್ರಮುಖ ಕ್ರಿಕೆಟಿಗರೂ ಕೂಡ ದೇಶದ ಪ್ರವಾಸೋದ್ಯಮಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ದೇಶವಾಸಿಗಳಿಗೆ ಬೆಂಬಲ ನೀಡಿದ್ದಾರೆ.

ಮಾಜಿ ಕ್ರಿಕೆಟಿಗರಾದ ವೆಂಕಟೇಶ್‌ ಪ್ರಸಾದ್‌, ಸುರೇಶ್‌ ರೈನಾ ಅವರು ದೇಶದ ಸಮುದ್ರ ಕಿನಾರೆಗಳು ಮತ್ತು ಪ್ರವಾಸೋದ್ಯಮ ಸ್ಥಳಗಳನ್ನು ಹೆಚ್ಚಿನ ರೀತಿಯಲ್ಲಿ ಗುರುತಿಸುವಂತೆ ಮಾಡಬೇಕು ಎಂದಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು ದೇಶದಲ್ಲಿ ಇದುವರೆಗೆ ಪ್ರವಾಸಿಗಾಗಿ ತೆರೆದುಕೊಳ್ಳದ ಸಮುದ್ರ ಕಿನಾರೆಗಳನ್ನು ಶೋಧಿಸಬೇಕು. ನಮ್ಮ ದೇಶದ ಪ್ರವಾಸಿಗ ರಿಂದಲೇ ಆದಾಯ ಪಡೆದು ಕೊಳ್ಳುವ ಮಾಲ್ದೀವ್ಸ್‌ ನಾಯ ಕರ ನಿಲುವು ಖಂಡನೀಯ ಎಂದಿದ್ದಾರೆ. ವೆಂಕಟೇಶ್‌ ಪ್ರಸಾದ್‌ ಕೂಡ ಸಚಿವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ, “ಮಾಲ್ದೀವ್ಸ್‌ನಂಥ ಬಡ ದೇಶ ಪ್ರವಾಸೋದ್ಯಮವನ್ನೇ ಅವಲಂಬಿಸಿದೆ. ಶೇ.15 ಮಂದಿ ಭಾರತೀಯರೇ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ ಎಂಬುದನ್ನು ಆ ದೇಶದ ಸರಕಾರ ಮರೆಯಬಾರದು’ ಎಂದಿದ್ದಾರೆ. ಎಕ್ಸ್‌ಪ್ಲೋರ್‌ ಇಂಡಿಯನ್‌ ಐಲ್ಯಾಂಡ್ಸ್‌ ಎಂಬ ಹ್ಯಾಶ್‌ಟ್ಯಾಗ್‌ನಲ್ಲಿ ಈ ಅಂಶ ಟ್ರೆಂಡಿಂಗ್‌ ಆಗಿದೆ.

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.