ಆಧಾರ್ ಆಧಾರಿತ ಡಿಎಲ್ಗೆ ಕೇಂದ್ರ ಅಸ್ತು
Team Udayavani, Mar 5, 2021, 7:00 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಆಧಾರ್ ದೃಢೀಕೃತ ಚಾಲನಾ ಪರವಾನಿಗೆ (ಡ್ರೈವಿಂಗ್ ಲೈಸನ್ಸ್) ಸೌಲಭ್ಯವನ್ನು ಜಾರಿಗೊಳಿಸಲು ಕೇಂದ್ರ ಸರಕಾರ ಗುರುವಾರ ಒಪ್ಪಿಗೆ ನೀಡಿದೆ. ಈ ಕುರಿತಂತೆ ಕೇಂದ್ರ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ. ಮೂರು ವಾರಗಳ ಹಿಂದೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಸಂಬಂ ಧಿಸಿದ ಕೆಲವು ಸೇವೆಗಳನ್ನು ಆಧಾರ್ ವ್ಯಾಪ್ತಿಗೆ ತರುವಂತೆ ಕೇಂದ್ರ ಸಾರಿಗೆ ಇಲಾಖೆ, ಕರಡು ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಿತ್ತು. ಈಗ ಈ ಕುರಿತಂತೆ ಆದೇಶವನ್ನು ಹೊರಡಿಸಿದೆ.
ಸಾರ್ವಜನಿಕರು ಆನ್ಲೈನ್ ಮೂಲಕವೇ ಆಧಾರ್ ದೃಢೀಕರಣ ಮಾಡುವ ಮೂಲಕ ಈ ಸೇವೆಗಳನ್ನು ಪಡೆಯ ಬಹುದಾಗಿದೆ. ಇದರಿಂದ, ಪದೇಪದೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಹೋಗುವುದನ್ನು ತಪ್ಪಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. ಹೊಸ ಆದೇಶದಂತೆ ವಾಹನಗಳ ನೋಂದಣಿ, ಚಾಲನಾ ಕಲಿಕೆ ಪರವಾನಿಗೆ, ಚಾಲನಾ ಪರವಾನಿಗೆ ನವೀಕರಣ, ಚಾಲನಾ ಪರವಾನಿಗೆಯಲ್ಲಿ ವಿಳಾಸ ಬದಲಾವಣೆ, ಅಂತಾರಾಷ್ಟ್ರೀ ಯ ಚಾಲನಾ ಪರವಾನಿಗೆ, ತಾತ್ಕಾಲಿಕ ನೋಂದಣಿಗೆ ಅರ್ಜಿ ಸಲ್ಲಿಸುವಿಕೆ, ಶಾಶ್ವತ ನೋಂದಣಿಗೆ ಅರ್ಜಿ ಸಲ್ಲಿಸುವಿಕೆ, ಆರ್ಸಿ ಪ್ರತಿ ಪಡೆಯುವುದು, ಚಾಲನಾ ಪರವಾನಿಗೆಯನ್ನು ಮರಳಿ ಒಪ್ಪಿಸುವುದು ಸೇರಿದಂತೆ ಸುಮಾರು 18 ಆರ್ಟಿಒ ಆಧಾರಿತ ಸೌಲಭ್ಯಗಳನ್ನು ಆಧಾರ್ ಮೂಲಕ ದೃಢೀಕರಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.