IT ಪ್ಲಾಟ್ ಫಾರ್ಮ್ ಗಳಿಗೆ ಕೇಂದ್ರದ ಅನುಮತಿ ಕಡ್ಡಾಯ
Team Udayavani, Mar 4, 2024, 8:30 AM IST
ಹೊಸದಿಲ್ಲಿ: ಇತ್ತೀಚೆಗೆ ಗೂಗಲ್ನ “ಜೆಮಿನಿ’ ಎಐ ವೇದಿಕೆ ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ಆಕ್ಷೇಪಾರ್ಹ ಮಾಹಿತಿಯನ್ನು ನೀಡಿದ ಬೆನ್ನಲ್ಲೇ ಹೊಸ ಎಐ ವೇದಿಕೆಗಳಿಗೆ ಕೇಂದ್ರ ಸರಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಪರೀಕ್ಷಾ ಹಂತದಲ್ಲಿರುವ ಯಾವುದೇ ಕೃತಕ ಬುದ್ದಿಮತ್ತೆ ವೇದಿಕೆಯನ್ನು ಶುರು ಮಾಡುವ ಮುನ್ನವೇ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕೇಂದ್ರ ಸರಕಾರದಿಂದ ಅನುಮತಿ ಪಡೆದು ಕೊಳ್ಳುವುದು ಕಡ್ಡಾಯ ಎಂದು ಕೇಂದ್ರ ಸರಕಾರ ತಿಳಿಸಿದೆ.
ಈ ಕುರಿತಾಗಿ ಮಾತನಾಡಿರುವ ಕೇಂದ್ರ ಐಟಿ ಸಚಿವ ರಾಜೀವ್ ಚಂದ್ರ ಶೇಖರ್, “ಡಿಸೆಂಬರ್ನಲ್ಲಿ ನಾವು ಈ ಮೊದಲು ಈ ವೇದಿಕೆಗಳಿಗೆ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದ್ದೆವು. ಐಟಿ ನಿಯಮದ ಪ್ರಕಾರ ಎಐ ಬಳಕೆ ಮಾಡುವ ವೇದಿಕೆಗಳು ಸಾರ್ವಜನಿ ಕವಾಗಿ ಮಾಹಿತಿಗಳನ್ನು ನೀಡುವಾಗ ಎಚ್ಚರಿಕೆ ವಹಿಸಬೇಕು’ ಎಂದು ತಿಳಿಸಿ ದ್ದಾರೆ. ಅಲ್ಲದೇ ಈ ವೇದಿಕೆಗಳು ಪರೀಕ್ಷೆ ಯಲ್ಲಿವೆ ಎಂಬ ಕಾರಣಕ್ಕೆ ಅವುಗಳನ್ನು ಶಿಕ್ಷೆಯಿಂದ ಹೊರಗಿಡಲಾಗುವುದಿಲ್ಲ. ಇದು ಕ್ರಿಮಿನಲ್ ಅಪರಾಧವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: “ಗಾಡ್ಸ್ ವೈಫ್ಸ್ ಮೆನ್ಸ್ ಸ್ಲೇವ್ಸ್”, ಸಾಕ್ಷ್ಯಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿಯ ಗರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.