ವಿಮಾನ, ರಸ್ತೆಗಳ ಜತೆ ಸಾಗರಮಾಲಾ
Team Udayavani, Feb 2, 2019, 12:40 AM IST
ಗ್ರಾಮೀಣ ರಸ್ತೆಗೆ 19,000 ಕೋಟಿ ರೂ.
ಗ್ರಾಮೀಣ ಭಾಗದಲ್ಲಿ ರಸ್ತೆಗಳ ನಿರ್ಮಾಣ ಪ್ರಮಾಣ ಮೂರು ಪಟ್ಟು ವೃದ್ಧಿಯಾಗಿದೆ. 2019-20ನೇ ಸಾಲಿನಲ್ಲಿ ಯೋಜನೆಗೆ 19,000 ಕೋಟಿ ರೂ. ಮೀಸಲಿಡಲಾಗಿದೆ (ಕಳೆದ ವರ್ಷ (15,500 ಕೋಟಿ). 17.84 ಲಕ್ಷ ಜನವಸತಿ ಪ್ರದೇಶಗಳ ಪೈಕಿ 15.80 ಲಕ್ಷ ಜನವಸತಿ ಪ್ರದೇಶಗಳನ್ನು ಈಗಾಗಲೇ ಪ್ರಮುಖ ಪಕ್ಕಾ ರಸ್ತೆಗಳಿಗೆ ಸಂಪರ್ಕಿಸಲಾಗಿದೆ. ಮಕ್ಕಳು ಶಾಲೆ ತಲುಪಲು ಹಲವು ಕಿ.ಮೀ. ನಡೆದು ಹೋಗಬೇಕಿದ್ದ ಸ್ಥಿತಿ ಈಗ ಬದಲಾಗಿದೆ. ಉತ್ತಮ ರಸ್ತೆ ಪರಿಣಾಮ, ಶಾಲಾ ವಾಹನಗಳು ಮನೆ ಬಾಗಿಲಿಗೇ ಬರುತ್ತಿವೆ. 2014-18ರ ಅವಧಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 1.53 ಕೋಟಿ ಮನೆಗಳನ್ನು ನಿರ್ಮಿಸಿಕೊಡಲಾಗಿದೆ.
ವಿಮಾನ ನಿಲ್ದಾಣ 100ಕ್ಕೂ ಹೆಚ್ಚು
ಎನ್‌ಡಿಎ ಸರ್ಕಾರದ ಮಹತ್ವಾಕಾಂಕ್ಷಿ ‘ಉಡಾನ್’ ಯೋಜನೆಯಿಂದಾಗಿ ಇಂದು ಸಾಮಾನ್ಯ ನಾಗರಿಕನೂ ವಿಮಾನದಲ್ಲಿ ಪ್ರಯಾಣಿಸುವಂತಾಗಿದೆ. ಸಿಕ್ಕಿಂನ ಪಕ್ಯಾಂಗ್‌ನಲ್ಲಿ ವಿಮಾನ ನಿಲ್ದಾಣ ಆರಂಭಿಸುವುದರೊಂದಿಗೆ ದೇಶದಲ್ಲಿನ ನಿಲ್ದಾಣಗಳ ಸಂಖ್ಯೆ 100ನ್ನು ದಾಟಿದೆ. ಕಳೆದ ಐದು ವರ್ಷಗಳಲ್ಲಿ ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದೆ. ಇದೇ ವೇಳೆ ಸಾಕಷ್ಟು ಉದ್ಯೋಗಗಳೂ ಸೃಷ್ಟಿಯಾಗಿವೆ.
ಜಗತ್ತಲ್ಲೇ ವೇಗದ ಹೆದ್ದಾರಿ ನಿರ್ಮಾಣ
ದೇಶದಲ್ಲಿ ದಿನವೊಂದಕ್ಕೆ 27 ಕಿ.ಮೀ ಉದ್ದದ ಹೆದ್ದಾರಿ ನಿರ್ಮಾಣವಾಗುತ್ತಿದ್ದು, ಜಗತ್ತಿನಲ್ಲೆ ಅತ್ಯಂತ ವೇಗವಾಗಿ ಹೆದ್ದಾರಿ ಅಭಿವೃದ್ಧಿಪಡಿಸುತ್ತಿರುವ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇದರೊಂದಿಗೆ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ದೆಹಲಿ ಸುತ್ತಲ ಪೂರ್ವ ಪೆರಿಫೆರಲ್ ಹೆದ್ದಾರಿ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಬೋಗಿಬೀಲ್ ರೈಲು ಕಂ ರಸ್ತೆ ಸೇತುವೆ ರೀತಿಯ ಯೋಜನೆಗಳನ್ನು ಎನ್‌ಡಿಎ ಸರ್ಕಾರ ಪೂರ್ಣಗೊಳಿಸಿದೆ.
ಜಲಮಾರ್ಗದಲ್ಲಿ ಸಾಗರಮಾಲಾ
ಜಲ ಮಾರ್ಗದಲ್ಲಿ ಆಮದು ಮತ್ತು ರಫ್ತು ಕಾರ್ಗೋಗಳ ತ್ವರಿತ ನಿರ್ವಹಣೆಗಾಗಿ, ಮಹತ್ವಾಕಾಂಕ್ಷಿ ಸಾಗರಮಾಲಾ ಯೋಜನೆಯಡಿ ದೇಶದ ಕರಾವಳಿ ಭಾಗದಲ್ಲಿ ಹಲವು ಬಂದರು ಅಭಿವೃದ್ಧಿ ಪಡಿಸಲಾಗಿದೆ. ಇದೇ ಮೊದಲ ಬಾರಿ ಕೋಲ್ಕತಾ ಮತ್ತು ವಾರಾಣಸಿ ನಡುವಿನ ಒಳನಾಡಿನ ಜಲಮಾರ್ಗದ ಮೂಲಕ ಸರಕು ಕಂಟೈನರ್‌ಗಳ ಸಾಗಣೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
MUST WATCH
ಹೊಸ ಸೇರ್ಪಡೆ
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.