ಕೇಂದ್ರ ಬಜೆಟ್: ಪರಿಣಿತರು ಏನೆನ್ನುತ್ತಾರೆ?
Team Udayavani, Feb 2, 2018, 8:22 AM IST
ಕೇಂದ್ರ ಬಜೆಟ್ ಪ್ರಗತಿಗೆ ಪೂರಕ
ಈ ಬಾರಿ ಕೇಂದ್ರ ಬಜೆಟ್ ಚುನಾವಣಾ ದೃಷ್ಟಿ ಹೊಂದಿರದ, ಪ್ರಗತಿಗೆ ಪೂರಕವಾದ ಬಜೆಟ್. ಆದರೆ ಸಮಗ್ರ ಉದ್ಯೋಗ ನೀತಿ ಇಲ್ಲದಿರುವುದು ಕೊರತೆ. ನಿಶ್ಚಿತವಾಗಿಯೂ ಕೃಷಿ ಕ್ಷೇತ್ರಕ್ಕೆ ಅನುಕೂಲಕರವಾಗಿದೆ. ಕೃಷಿ ಮಾರುಕಟ್ಟೆ ವ್ಯವಸ್ಥೆ ಸುಧಾರಣೆಗೆ ಒತ್ತು ನೀಡಲಾಗಿದೆ. ಗ್ರಾಮೀಣಾಭಿವೃದ್ಧಿಗೆ ಸಾಕಷ್ಟು ಹಣ ಮೀಸಲು ಇಡಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಗಮನ ನೀಡಲಾಗಿದೆ. ಆದರೆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿರುವ ಕಾಲಘಟ್ಟದಲ್ಲಿ ಉದ್ಯೋಗಾವಾಕಾಶಗಳ ಸೃಷ್ಟಿಗೆ ಒಂದು ಸ್ಪಷ್ಟ ಉದ್ಯೋಗ ನೀತಿಯನ್ನು ಘೋಷಿಸಬೇಕಿತ್ತು. ದೊಡ್ಡ ಶಿಕ್ಷಣ ನೀತಿಯೂ ಇಲ್ಲ. ಆರ್ಥಿಕ ಸಮೀಕ್ಷೆಯಲ್ಲಿ ಶಿಕ್ಷಣ, ಆರೋಗ್ಯ ಮತ್ತು ಕೃಷಿಗೆ ಒತ್ತು ನೀಡಬೇಕಾದ ಆವಶ್ಯಕತೆಯನ್ನು ಉಲ್ಲೇಖೀಸಲಾಗಿತ್ತು. ಹೀಗಾಗಿ ಗುಣಮಟ್ಟದ ಉನ್ನತ ಶಿಕ್ಷಣ ನೀತಿಯೊಂದು ಬಜೆಟ್‌ನಲ್ಲಿ ಇರಬೇಕಾಗಿತ್ತು.
ಪ್ರೊ| ಜಿ.ವಿ. ಜೋಶಿ, ರಾಜ್ಯ ಯೋಜನಾ ಮಂಡಳಿಯ ಮಾಜಿ ಸದಸ್ಯ
ಸಮತೋಲಿತ, ಪ್ರಗತಿಪರ ಬಜೆಟ್
ಸಮತೋಲಿತ ಹಾಗೂ ಪ್ರಗತಿಪರವಾದ ಬಜೆಟ್ ಅನ್ನು ಈ ಬಾರಿ ಮಂಡಿಸಲಾಗಿದೆ. ಸಾಮಾಜಿಕ ಅಗತ್ಯಗಳಿಗೆ ಅಗತ್ಯವಾದ ಎಲ್ಲ ವ್ಯವಸ್ಥೆಗಳನ್ನು ಬಜೆಟ್‌ನಲ್ಲಿ ತೋರಿಸಲಾಗಿದ್ದು, ಮೂಲಭೂತ ಸೌಕರ್ಯ ಒದಗಿಸುವಿಕೆ ಹಾಗೂ ಆರ್ಥಿಕ ಬೆಳವಣಿಗೆಗೆ ಹೆಚ್ಚು ಮಹತ್ವವನ್ನು ನೀಡಲಾಗಿದೆ. ಗ್ರಾಮಾಂತರ ಹಾಗೂ ಕೃಷಿಕ ಸಮುದಾಯಕ್ಕೆ ಭರಪೂರ ಯೋಜನೆಗಳನ್ನು ನೀಡಲಾಗಿದೆ. ಆರೋಗ್ಯ ವಿಮಾ ಯೋಜನೆಯನ್ನು ಕಲ್ಪಿಸಿರುವ ಆಮೂಲಾಗ್ರ ಬಜೆಟ್.
ವತಿಕಾ ಪೈಅಧ್ಯಕ್ಷರು, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ
ರೈಲು-ಸುರಕ್ಷೆಗೆ ಆದ್ಯತೆ
ಬಜೆಟ್‌ನಲ್ಲಿ ಕರಾವಳಿ ಭಾಗದ ರೈಲ್ವೇ ಅಗತ್ಯಗಳಿಗೆ ಎಷ್ಟು ಅನುದಾನ ನೀಡಿದ್ದಾರೆ ಎಂಬ ವಿವರ ಇನ್ನಷ್ಟೇ ನಮಗೆ ದೊರಕಬೇಕಿದೆ. ಆದರೆ ಒಟ್ಟು ರೈಲ್ವೇ ಇಲಾಖೆಯ ಮೇಲೆ ಪರಿಣಾಮವನ್ನು ಗಮನಿಸಿದಾಗ ಆಶಾದಾಯಕ ಬಜೆಟ್ ಆಗಿ ಮೂಡಿಬಂದಿದೆ. ಬೆಂಗಳೂರಿನ ರೈಲ್ವೇ ಯೋಜನೆಗೆ ಬೃಹತ್ ಮೊತ್ತ ನಿಗದಿಪಡಿಸಿದ್ದು ಒಂದೆಡೆಯಾದರೆ, ರೈಲ್ವೇ ನಿಲ್ದಾಣದಲ್ಲಿ ಸುರಕ್ಷೆಗಾಗಿ ಸಿಸಿಟಿವಿ ಅಳವಡಿಕೆ, ಎಸ್ಕಲೇಟರ್ ಅಳವಡಿಕೆ, ಮಾನವರಹಿತ ರೈಲ್ವೇ ಗೇಟ್ ವ್ಯವಸ್ಥೆ ಸೇರಿದಂತೆ ಹಲವು ಸುರಕ್ಷಾ ಕ್ರಮಗಳಿಗೆ ಹೆಚ್ಚಿನ ಒತ್ತು ನೀಡಿರುವುದು ಗಮನಾರ್ಹ ಅಂಶವಾಗಿದೆ.
ಹನುಮಂತ ಕಾಮತ್, ರೈಲ್ವೇ ಹೋರಾಟಗಾರರು, ಮಂಗಳೂರು.
ಸಣ್ಣ ಕೈಗಾರಿಕೆಗಳಿಗೆ ಆಶಾದಾಯಕ
ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ ಪೂರಕವಾಗುವಂತೆ ಸುಲಭದಲ್ಲಿ ಸಾಲ ಲಭಿಸುವ ಬಗ್ಗೆ ಬಜೆಟ್‌ನಲ್ಲಿ ಒತ್ತು ನೀಡಿರುವುದು ಸ್ವಾಗತಾರ್ಹ. ತೆರಿಗೆ ವ್ಯವಸ್ಥೆಯಲ್ಲೂ ಆಮೂಲಾಗ್ರವಾಗಿ ಸುಧಾರಣೆಯಾಗಿರುವುದು ಉತ್ತಮ ಬೆಳವಣಿಗೆ. ಜತೆಗೆ ಕೈಗಾರಿಕಾ ಕ್ಷೇತ್ರಕ್ಕೆ ಪೂರಕವಾಗಿ ರಸ್ತೆ ಅಭಿವೃದ್ಧಿಗೆ ಗಮನ ನೀಡಿದ್ದು ಖುಷಿ ತಂದಿದೆ. ಫುಡ್ ಪಾರ್ಕ್ ಬಗ್ಗೆ ಉಲ್ಲೇಖ ಮಾಡಿರುವುದು ಸ್ವಾಗತಾರ್ಹ. ಕೆಲವು ಬೇಡಿಕೆ ಈಡೇರಿಸಬೇಕಿತ್ತಾದರೂ ಸದ್ಯ ಆಶಾದಾಯಕ ಬಜೆಟ್ ಅನ್ನು ಮಂಡಿಸಲಾಗಿದೆ. ಗೌರವ್ ಹೆಗ್ಡೆ, ಅಧ್ಯಕ್ಷರು, ಕೆನರಾ ಸಣ್ಣ ಕೈಗಾರಿಕೆಗಳ ಸಂಘ.
ಜನಸಾಮಾನ್ಯರಿಗೆ ನಿರಾಶೆ
ಸಹಕಾರಿ ರಂಗಕ್ಕೆ ಹೊಸ ಕೊಡುಗೆ ಇಲ್ಲ. ಜಿಎಸ್‌ಟಿ, ನೋಟ್ ಬ್ಯಾನ್‌ನಿಂದ ಏನಾದರೂ ಬಜೆಟ್ ಕೊಡುಗೆ ಇರಬಹುದೆಂದು ಕೊಂಡವರಿಗೆ ಏನೂ ಇಲ್ಲ. ರೈತ ವರ್ಗಕ್ಕೆ ಮುಂದಿನ ದಿನಗಳಲ್ಲಿ ಒತ್ತು ಸಿಗಬಹುದು. ಕಾರ್ಮಿಕ ವರ್ಗಕ್ಕೆ ಅಂಥದ್ದೇನೂ ಇಲ್ಲ. ಸಾಮಾನ್ಯ ಜನರು ಆದಾಯ ತೆರಿಗೆ ಮಿತಿ 5 ಲ.ರೂ.ಗೆ ಏರಿಸಬಹುದೆನ್ನುವ ಆಶಾಭಾವನೆಯಲ್ಲಿದ್ದರು. ಆದರೆ 50 ಸಾವಿರ ಮಾತ್ರ ಏರಿಸಲಾಗಿದೆ. ಚುನಾವಣಾ ದೃಷ್ಟಿಯಿಂದ ಬ್ಯಾಲೆನ್ಸಿಂಗ್ ಆಗಿ ನೀಡಿದ ಬಜೆಟ್‌ನಂತಿದೆ.
ಬಿ. ಜಯಕರ ಶೆಟ್ಟಿ ಇಂದ್ರಾಳಿ, ಹಿರಿಯ ಸಹಕಾರಿ ಧುರೀಣ.
“ಸೀ ಪ್ಲೇನ್’ ಕರಾವಳಿಗೂ ಲಾಭ
ಸಮುದ್ರದ ಮೇಲೆ ಕಾರ್ಯ ನಿರ್ವಹಿಸುವ ಸೀ ಪ್ಲೇನ್ ಯೋಜನೆಯನ್ನು ಪ್ರಸ್ತುತ ಬಜೆಟ್‌ನಲ್ಲಿ ಘೋಷಿಸಲಾಗಿರುವುದು ಕರಾವಳಿಯ ಪ್ರವಾಸೋದ್ಯಕ್ಕೆ ಅತ್ಯಂತ ಪೂರಕ ಅಂಶವಾಗಿದೆ. ಜತೆಗೆ ಪ್ರವಾಸೀ ತಾಣಗಳಿಗೆ ಪೂರ್ಣ ರೀತಿಯಲ್ಲಿ ರಸ್ತೆ ನಿರ್ಮಿಸಿಕೊಡುವ ಯೋಜನೆಯ ಪ್ರಕಟನೆಯೂ ಸ್ವಾಗತಾರ್ಹ. ಪುರಾತನ ಸ್ಥಳಗಳ ಮೂಲ ಚೆಲುವು ಉಳಿಸಿಕೊಂಡು ಮೇಲ್ದರ್ಜೆಗೇರಿಸಲು ಉದ್ದೇಶಿಸಿರುವುದು ಕೂಡ ಆಶಾದಾಯಕ ಬೆಳವಣಿಗೆಯಾಗಿದೆ.
ಯತೀಶ್ ಬೈಕಂಪಾಡಿ, ಪಣಂಬೂರು ಬೀಚ್ ಅಭಿವೃದ್ಧಿ ಪ್ರಮುಖ
ಶೇರು ಮಾರುಕಟ್ಟೆ ಕುಸಿಯಲಿದೆ
ಕೃಷಿಗೆ ಉತ್ತೇಜನ, ಹಿರಿಯ ನಾಗರಿಕರಿಗೆ ಕೊಡುಗೆ ಇದೆ. ಶೇರು ಖರೀದಿಸಿ ಒಂದು ವರ್ಷದ ಅನಂತರ ಮಾರಿದರೆ ಒಂದು ಲಕ್ಷ ರೂ. ಮೊತ್ತಕ್ಕೆ ಶೇ.10 ಟ್ಯಾಕ್ಸ್ ವಿಧಿಸಿರುವುದರಿಂದ ಶೇರು ಮಾರುಕಟ್ಟೆ ಕುಸಿತವಾಗಲಿದೆ. ಕಂಪೆನಿಗಳಿಗೆ ಲಾಭದಾಯಕ.
ರೇಖಾ ದೇವಾನಂದ್, ಅಧ್ಯಕ್ಷರು, ಸಿಎ ಸಂಸ್ಥೆ ಉಡುಪಿ ಶಾಖೆ.
ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಜನರ ಆಶಯ ಹಾಗೂ ಬಜೆಟ್ ಪ್ರಸ್ತಾಪ ಬೇರೆ ಬೇರೆಯಾಗಿದೆ. ಶಾಲಾ ಶಿಕ್ಷಣಕ್ಕೆ ನಿರೀಕ್ಷಿತ ಮಟ್ಟದಲ್ಲಿ ಒತ್ತು ಸಿಕ್ಕಿಲ್ಲ. ಬಜೆಟ್ ಘೋಷಣೆಯಲ್ಲೇ ಸಾಕಷ್ಟು ಮಿಥ್ಯೆಗಳಿವೆ. ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡುವ ಬಗ್ಗೆ ಉಲ್ಲೇಖೀಸಲಾಗಿದೆ. ದೇಶದಲ್ಲಿ 1.19 ಕೋಟಿ ಮಕ್ಕಳು ಶಾಲಾ ಶಿಕ್ಷಣದಿಂದ ಹೊರಗಿದ್ದಾರೆ. ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ತರಲು ವಿಶೇಷ ಯೋಜನೆ ಹಾಗೂ ನಿರ್ದಿಷ್ಟ ಅನುದಾನ ಹಂಚಿಕೆ ಮಾಡಿಲ್ಲ. ಪೂರ್ವ ಪ್ರಾಥಮಿಕ ತರಗತಿಯಿಂದ 12ನೇ ತರಗತಿ ತನಕ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ತರುವುದಾಗಿ ಹೇಳಿದ್ದಾರೆ. ಆದರೆ, ಆರ್‌ಟಿಇ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಸ್ಪಷ್ಟತೆ ಇಲ್ಲ. ಶಿಕ್ಷಣ ಗುಣಮಟ್ಟದ ಭರವಸೆ ನೀಡಿದ್ದು, ಕಾರ್ಯಕ್ರಮ ಅನುಷ್ಠಾನದ ಬಗ್ಗೆ ತಿಳಿಸಿಲ್ಲ. ಸರ್ಕಾರಿ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿ ತೆರೆಯಲು ಬೇಕಾದ ಅನುದಾನ ಹಾಗೂ ಮೂಲಭೂತ ಸೌಕರ್ಯದ ಬಗ್ಗೆ ತಿಳಿಸಿಲ್ಲ. ಹಾಗೆಯೇ 11 ಮತ್ತು 12ನೇ ತರಗತಿಯನ್ನು ಕಾಯ್ದೆ ವ್ಯಾಪ್ತಿಗೆ ಸೇರಿಸಲು ಬೇಕಾದಷ್ಟು ಅನುದಾನ ಮೀಸಲಿಟ್ಟಿಲ್ಲ. ಕೇವಲ ಘೋಷಣೆ ಮಾಡಿರುವುದರಿಂದ ಏನೂ ಪ್ರಯೋಜನವಾಗದು, ಅನುಷ್ಠಾನ ಅಗತ್ಯವಿದೆ. ಶೈಕ್ಷಣಿಕ ಗುಣಾತ್ಮಕತೆಯ ಬಗ್ಗೆ ಹೇಳಿದ್ದಾರೆ. ಶಿಕ್ಷಕರ ನೇಮಕಾತಿ ಮಾಡಿಕೊಳ್ಳದೇ ಯಾವುದೇ ರೀತಿಯಲ್ಲೂ ಗುಣಮಟ್ಟ ಸುಧಾರಣೆ ಸಾಧ್ಯವಿಲ್ಲ. ದೇಶದಲ್ಲಿ 9 ಲಕ್ಷ ಶಿಕ್ಷಕರ ಹುದ್ದೆ ಖಾಲಿ ಇದೆ. 6.60 ಲಕ್ಷ ಶಿಕ್ಷಕರು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹುದ್ದೆಗಳ ಕಾಯಂ ನೇಮಕಾತಿ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ.
ನಿರಂಜನಾರಾಧ್ಯ, ಶಿಕ್ಷಣ ತಜ್ಞ
ರೈಲ್ವೇ ಅಭಿವೃದ್ಧಿಗೆ ಒತ್ತು
ರೈಲ್ವೇ ಅಭಿವೃದ್ಧಿಗೆ 1.21 ಲಕ್ಷ ಕೋ.ರೂ. ಮೀಸಲಿಟ್ಟಿರುವುದು ಉತ್ತಮ. 350 ಹೊಸ ರೈಲ್ವೇ ಲೈನ್, 25 ಸಾವಿರ ನಿಲ್ದಾಣಗಳಲ್ಲಿ ಎಸ್ಕಲೇಟರ್ ಅಳವಡಿಕೆ, ರಿಸರ್ವೇಶನ್ ಇಲ್ಲದೆ ಪ್ರಯಾಣಿಕರಿಗೆ ಸೀಟು ಕಾಯ್ದಿರಿಸುವ ಬೋಗಿ, ಮಹಿಳೆ ಯರಿಗೆ ಶೇ. 30 ಸೀಟು ಮೀಸಲು, ಪತ್ರಕರ್ತರಿಗೆ ರಿಯಾಯಿತಿ ದರದಲ್ಲಿ ಟಿಕೆಟು ಕಾಯ್ದಿರಿಸುವಿಕೆ. ಟಿಕೆಟು ದರ ಏರಿಕೆ ಇಲ್ಲ. ಅಭಿವೃದ್ಧಿ ಪರ ಬಜೆಟ್ ಇದಾಗಿದೆ.
ಕೆ. ರಾಮಚಂದ್ರ ಆಚಾರ್ಯ, ರೈಲ್ವೇ ಯಾತ್ರಿ ಸಂಘ.
ದೂರದೃಷ್ಟಿಯ ಬಜೆಟ್
ಕಂಪೆನಿಗಳಿಗೆ ಆಶಾದಾಯಕ ವಲ್ಲದಿದ್ದರೂ ಬಡವರಿಗೆ, ಹಳ್ಳಿಗರಿಗೆ ಲಾಭವಾಗುವ ಬಜೆಟ್. ಮೂಲಸೌಕರ್ಯಗಳಿಗೆ ಹೆಚ್ಚಿನ
ಒತ್ತು ಕೊಟ್ಟಿದ್ದಾರೆ. ಶೇರು ಮಾರುಕಟ್ಟೆಯಲ್ಲಿ ತೊಡಗಿಸುವವರಿಗೆ ಕರ ವಿಧಿಸಿರುವುದು ಉತ್ತಮ. ಸಮಗ್ರ ದೂರದೃಷ್ಟಿ ಇರುವ ಬಜೆಟ್ ಇದು.
ಕೃಷ್ಣ ರಾವ್ ಕೊಡಂಚ, ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.