ಎಂಪಿ ಲ್ಯಾಡ್ಸ್ ಪುನರಾರಂಭ
ಸಂಸದರ ಸ್ಥಳೀಯಾಭಿವೃದ್ಧಿ ನಿಧಿ ಮರುಸ್ಥಾಪನೆಗೆ ಕೇಂದ್ರ ಸಂಪುಟ ಸಭೆನಿರ್ಣಯ
Team Udayavani, Nov 11, 2021, 5:38 AM IST
ಹೊಸದಿಲ್ಲಿ: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ವರ್ಷದ ಎಪ್ರಿಲ್‌ನಲ್ಲಿ ರದ್ದುಗೊಂಡಿದ್ದ ಸಂಸತ್ ಸದಸ್ಯರ ಸ್ಥಳೀಯಾಭಿವೃದ್ಧಿ ನಿಧಿ (ಎಂಪಿ ಲ್ಯಾಡ್ಸ್) ಪುನಃಸ್ಥಾಪನೆಗೊಂಡಿದೆ. ಪ್ರಸಕ್ತ ವಿತ್ತೀಯ ವರ್ಷದ ಉಳಿದಿರುವ ತಿಂಗಳುಗಳಿಗೆ 2 ಕೋಟಿ ರೂ. ನೀಡಲಾಗುತ್ತದೆ. 2022-23ನೇ ಸಾಲಿನಿಂದ ಪೂರ್ಣ ಪ್ರಮಾಣದಲ್ಲಿ 5 ಕೋಟಿ ರೂ. ನೀಡುವ ಬಗ್ಗೆ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಭೆಯ ಬಳಿಕ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ ವಿವರಗಳನ್ನು ನೀಡಿದರು. ಸೋಂಕಿನ ಹಿನ್ನೆಲೆಯಲ್ಲಿ 2020ರ ಎಪ್ರಿಲ್‌ನಲ್ಲಿ ನಿಧಿ ರದ್ದುಗೊಳಿಸಿ, ಅದನ್ನು ಸರಕಾರದ ಏಕೀಕೃತ ನಿಧಿಗೆ ಸೇರ್ಪಡೆ ಮಾಡಲಾಗಿತ್ತು. ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದಿದ್ದ ಸಂಪುಟ ಸಭೆಯಲ್ಲಿ ಎಂಪಿ ಲ್ಯಾಡ್ಸ್ ಅನ್ನು ಪುನಃಸ್ಥಾಪಿಸಲು ನಿರ್ಣಯಿಸಲಾಯಿತು ಎಂದರು.
ಎಂಪಿ ಲ್ಯಾಡ್ಸ್ ಸ್ಥಗಿತ ಮಾಡಿದ್ದರಿಂದ ಸಂಸದರಿಗೆ ಸ್ಥಳೀಯವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳ ದಂಥ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಪಕ್ಷಬೇಧ ಮರೆತು ಬಹಳಷ್ಟು ಸಂಸದರು ಈ ನಿಧಿಯನ್ನು ಮತ್ತೆ ಸ್ಥಾಪಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿದ್ದರು.
ಪ್ರಸಕ್ತ ವರ್ಷದಲ್ಲಿ ಈಗಾಗಲೇ ಅಂದಾಜು ಅರ್ಧ ವರ್ಷ ಕಳೆದಿದ್ದು, ಹೀಗಾಗಿ 2 ಕೋಟಿ ರೂ. ಮಾತ್ರ ನೀಡಲಾಗುತ್ತಿದೆ. ಮುಂದಿನ ಆರ್ಥಿಕ ವರ್ಷದಿಂದ 2 ಕಂತುಗಳಲ್ಲಿ ತಲಾ 2.5 ಕೋಟಿ ರೂ.ಗಳಂತೆ 5 ಕೋಟಿ ರೂ.ಗಳನ್ನು ನೀಡಲಾಗುತ್ತದೆ ಎಂದು ಸಚಿವ ಠಾಕೂರ್ ತಿಳಿಸಿದರು.
ಪ್ರಸಕ್ತ ವಿತ್ತೀಯ ವರ್ಷದ ಉಳಿದ ಭಾಗಕ್ಕೆ 1,593 ಕೋಟಿ ರೂ. ಸಿಗಲಿದೆ. 2022-23ನೇ ಸಾಲಿನಿಂದ 2025-26ರ ವರೆಗೆ 17,417 ಕೋಟಿ ರೂ. ಕೇಂದ್ರ ಬೊಕ್ಕಸಕ್ಕೆ ವೆಚ್ಚವಾಗಲಿದೆ ಎಂದರು.
ಇದನ್ನೂ ಓದಿ:ಗ್ರಾಮೀಣ ಪ್ರದೇಶದಲ್ಲಿ 5ಜಿ ಸೌಲಭ್ಯ : ವಿಐ-ನೋಕಿಯಾ ಯಶಸ್ವಿ ಪ್ರಯೋಗ
ಆಹಾರ ಉತ್ಪನ್ನಗಳನ್ನು ಶತ ಪ್ರತಿಶತ ಮತ್ತು ಶೇ. 20ರಷ್ಟು ಸಕ್ಕರೆ ಉತ್ಪನ್ನಗಳನ್ನು ಸೆಣಬಿನ ಚೀಲಗಳಲ್ಲಿಯೇ ಪ್ಯಾಕ್ ಮಾಡಲು ನಿರ್ಧರಿಸಲಾಗಿದೆ. ಇದರಿಂದ 3.70 ಲಕ್ಷಕ್ಕೂ ಅಧಿಕ ಸೆಣಬು ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ.
ಪೆಟ್ರೋಲ್ ಮಿಶ್ರಣ ಉದ್ದೇಶಿತ ಎಥನಾಲ್ ಬೆಲೆ ಹೆಚ್ಚಳ
ಕೇಂದ್ರ ಸರಕಾರವು ಬುಧವಾರ ಪೆಟ್ರೋಲ್‌ನಲ್ಲಿ ಮಿಶ್ರಗೊಳಿಸುವುದಕ್ಕಾಗಿ ಕಬ್ಬಿನಿಂದ ಪಡೆ ಯಲಾದ ಎಥನಾಲ್‌ನ ಬೆಲೆಯನ್ನು ಪ್ರತೀ ಲೀಟರ್‌ಗೆ ರೂ. 1.47ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿದೆ. 2021-22ರ ಡಿಸೆಂಬರ್‌ನಿಂದ ಆರಂಭವಾಗುವ ಮಾರುಕಟ್ಟೆ ವರ್ಷಕ್ಕೆ ಅನ್ವಯವಾಗುವಂತೆ ಇದು ಜಾರಿಗೆ ಬರಲಿದೆ. ಪೆಟ್ರೋಲ್‌ನಲ್ಲಿ ಎಥನಾಲ್ ಹೆಚ್ಚಳವಾದರೆ ಇಂಧನ ತೈಲ ಆಮದು ಕಡಿಮೆಯಾಗಲಿದೆ ಯಲ್ಲದೆ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಪ್ರಯೋಜನವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
MUST WATCH
ಹೊಸ ಸೇರ್ಪಡೆ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Digital Arrest: ಡಿಜಿಟಲ್ ಅರೆಸ್ಟ್ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು
Emotions: ಭಾವನೆಗಳ ಬಸ್ ನಿಲ್ದಾಣ
Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.