ಅಮೂಲ್ಯ ಖನಿಜದ ಮೇಲೆ ಕೇಂದ್ರ ಕಣ್ಣು! ಹೊಸ ನಿಗಮ ಸ್ಥಾಪನೆಗೆ ಕೇಂದ್ರ ಸಂಪುಟ ಅಸ್ತು

Team Udayavani, Jan 30, 2025, 8:41 AM IST

ಅಮೂಲ್ಯ ಖನಿಜದ ಮೇಲೆ ಕೇಂದ್ರ ಕಣ್ಣು! ಹೊಸ ನಿಗಮ ಸ್ಥಾಪನೆಗೆ ಕೇಂದ್ರ ಸಂಪುಟ ಅಸು

ಹೊಸದಿಲ್ಲಿ: ಬಾಹ್ಯಾಕಾಶ ಮತ್ತು ಚಿಪ್‌ ತಯಾರಿಕ ಕ್ಷೇತ್ರದಲ್ಲಿ ಚೀನ ಪಾರಮ್ಯ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿರುವ ಅಮೂಲ್ಯ ಖನಿಜಗಳ ಅಭಿವೃದ್ಧಿಗೆ ವಿಶೇಷ ಯೋಜನೆ ಕೈಗೆತ್ತಿಕೊಂಡಿದೆ. ಮುಂದಿನ 7 ವರ್ಷಗಳ ಅವಧಿಯಲ್ಲಿ ಅಮೂಲ್ಯ ಖನಿಜಗಳ ಅಭಿವೃದ್ಧಿ ಮತ್ತು ಸ್ವಾವಲಂಬನೆಗಾಗಿ ಒಟ್ಟು 34,300 ಕೋಟಿ ರೂ. ವೆಚ್ಚದ ರಾಷ್ಟ್ರೀಯ ಅಮೂಲ್ಯ ಖನಿಜ ಯೋಜನೆ (ನ್ಯಾಶನಲ್‌ ಕ್ರಿಟಿಕಲ್‌ ಮಿನರಲ್‌ ಮಿಷನ್‌) ಜಾರಿಗೊಳಿಸಲು ತೀರ್ಮಾನಿಸಿದೆ.

ಈ ಬಗ್ಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿ‌ನಿ ವೈಷ್ಣವ್‌ ತಿಳಿಸಿದ್ದಾರೆ. ಕೇಂದ್ರ ಸರಕಾರಿ ಸ್ವಾಮ್ಯದ ಕಂಪೆನಿಗಳಿಂದ ದೇಶದ ವಿವಿಧ ಭಾಗಗಳಲ್ಲಿ ಮತ್ತು ಸಮುದ್ರ ವ್ಯಾಪ್ತಿಯಲ್ಲಿ ಅಮೂಲ್ಯ ಖನಿಜಗಳ ಅಭಿವೃದ್ಧಿ ಮತ್ತು ಸಂಶೋಧನೆಗಾಗಿ 18,000 ಕೋಟಿ ರೂ. ಮೊತ್ತವನ್ನು ಹೂಡಿಕೆ ಮಾಡುವ ಸಾಧ್ಯತೆ ಇದೆ. ಇದರ ಜತೆಗೆ ಕೇಂದ್ರ ಸರಕಾರದ ವತಿಯಿಂದ 16,300 ಕೋಟಿ ರೂ. ಮೊತ್ತವನ್ನು ವಿನಿಯೋಗ ಮಾಡಲಾಗುತ್ತದೆ.

ದೇಶದಲ್ಲಿ ಹಸುರು ಇಂಧನ ಹೊಂದುವ ನಿಟ್ಟಿನಲ್ಲಿ ಹಾಗೂ ಅಮೂಲ್ಯ ಖನಿಜಗಳನ್ನು ಇತರ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ಈ ಯೋಜನೆ ಜಾರಿಯಿಂದ ತಪ್ಪಿಸಲು ಸಾಧ್ಯವಿದೆ ಎಂದು ಸಚಿವ ವೈಷ್ಣವ್‌ ಹೇಳಿದ್ದಾರೆ. ಕೇಂದ್ರ ಸರಕಾರಿ ಸ್ವಾಮ್ಯದ ಕಂಪೆನಿಗಳು ಖಾಸಗಿ ಕಂಪೆನಿಗಳ ಕೈಜೋಡಿಸಿಕೊಂಡು ಅಮೂಲ್ಯ ಖನಿಜಗಳ ನಿಕ್ಷೇಪಗಳ ಬಗ್ಗೆ ಸಂಶೋಧನೆ ನಡೆಸಿ, ಅವುಗಳನ್ನು ಖರೀದಿಸಿ ವ್ಯಾಪಾರ ನಡೆಸುವುದಕ್ಕೂ ಹೊಸ ಯೋಜನೆಯಲ್ಲಿ ಪ್ರೋತ್ಸಾಹ ನೀಡಲಾಗಿದೆ. ದೇಶದಲ್ಲಿ ಅವುಗಳ ಸಂಗ್ರಹಕ್ಕೂ ಉತ್ತೇಜನ ಸಿಗಲಿದೆ ಎಂದು ಸಚಿವ ವೈಷ್ಣವ್‌ ತಿಳಿಸಿದ್ದಾರೆ.

ದೇಶದಲ್ಲಿಯೇ ಖನಿಜ ನಿಕ್ಷೇಪ ಪತ್ತೆಯಾದರೆ ಅದನ್ನು ತೆಗೆಯುವ ನಿಟ್ಟಿನಲ್ಲಿ ಅಗತ್ಯವಾಗಿರುವ ಕಾನೂನು ಪ್ರಕ್ರಿಯೆಗಳನ್ನು ತ್ವರಿತವಾಗಿ ಮುಕ್ತಾಯಗೊಳಿಸಲೂ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.

ದೇಶಕ್ಕೆ ಅನುಕೂಲವೇನು?: ದೇಶದಲ್ಲಿ ಚಿಪ್‌ ತಯಾರಿಕೆ, ಸೌರ ಇಂಧನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಕೇಂದ್ರ ಸರಕಾರಕ್ಕೆ ಭಾರೀ ಪ್ರಮಾಣದಲ್ಲಿ ಅಮೂಲ್ಯ ಖನಿಜಗಳು ಬೇಕಾಗುತ್ತವೆ. ಚೀನಕ್ಕೆ ಸಡ್ಡು ಹೊಡೆದಿರುವ ತೈವಾನ್‌ನ ಚಿಪ್‌ ತಯಾರಿಕ ಕಂಪೆನಿಗಳನ್ನೂ ದೇಶಕ್ಕೆ ಆಹ್ವಾನಿಸಲು ಮುಂದಾಗಿರುವ ಕೇಂದ್ರ ಸರಕಾರ ಅದಕ್ಕೆ ತಕ್ಕಂತೆ ಸೌಲಭ್ಯಗಳನ್ನೂ ಒದಗಿಸಿಕೊಡಬೇಕಾಗಿದೆ. ಹೀಗಾಗಿ ಕೇಂದ್ರ ಸರಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

ಚೀನದ್ದೇ ಪಾರಮ್ಯ: ಜಗತ್ತಿನಲ್ಲಿ ಸೌರ ಫ‌ಲಕಗಳ ಉತ್ಪಾದನೆಯಲ್ಲಿ ಶೇ.72 ಚೀನದ ಉತ್ಪಾದನೆಯೇ ಅಧಿಕ. ಶೇ.69 ಲೀಥಿಯಂ ಬ್ಯಾಟರಿ, ಗಾಳಿಯಿಂದ ವಿದ್ಯುತ್‌ ಉತ್ಪಾದಿಸುವುದಕ್ಕೆ ಬೇಕಾಗುವ ಶೇ.45 ಟರ್ಬೈನ್‌ಗಳು ಆ ದೇಶದಲ್ಲಿಯೇ ಆಗುತ್ತದೆ. ಇದಲ್ಲದೆ ಜಗತ್ತಿನ ಅಪರೂಪದ ಖನಿಜಗಳ ನಿಕ್ಷೇಪಗಳೂ ಅಲ್ಲಿಯೇ ಇವೆ.

ಏನಿದು ಅಮೂಲ್ಯ ಖನಿಜ?
ದೇಶದ ಅರ್ಥ ವ್ಯವಸ್ಥೆಯಲ್ಲಿ ಪ್ರಧಾನಪಾತ್ರ ವಹಿಸ ಲಿರುವ ಖನಿಜಗಳಿವು. ಸೌರ ಫ‌ಲಕಗಳ ನಿರ್ಮಾ ಣ, ಚಿಪ್‌ ತಯಾರಿಕೆಯಲ್ಲಿ ಅವುಗಳು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಇದರ ಜತೆಗೆ ಅವು ಗಳ ಲಭ್ಯತೆಯೂ ಕೂಡ ಅತ್ಯಂತ ಸೀಮಿತ ಪ್ರದೇಶ ದಲ್ಲಿ ಇದೆ. ಹೀಗಾಗಿ ಅವುಗಳನ್ನು ಅಮೂಲ್ಯ ಖನಿಜಗಳು ಎಂದು ಪರಿಗಣಿಸಲಾಗಿದೆ.

ಎಥೆನಾಲ್‌ ಖರೀದಿ ಬೆಲೆ ಏರಿಕೆಗೆ ಅನುಮತಿ
ಸರಕಾರಿ ತೈಲ ಕಂಪೆನಿಗಳಿಂದ ಎಥೆನಾಲ್‌ ಖರೀದಿ ಮಾಡುವ ಬೆಲೆಯನ್ನು 1.39 ರೂ.ಗೆ ಪರಿಷ್ಕರಿಸಲು ಕೇಂದ್ರ ಸಂಪುಟ ಸಭೆ ಬುಧವಾರ ಒಪ್ಪಿಕೊಂಡಿದೆ. ಈ ನಿರ್ಧಾರದ ಹಿನ್ನೆಲೆಯಲ್ಲಿ ಪ್ರತೀ ಲೀಟರ್‌ ಎಥೆನಾಲ್‌ಗೆ ಈಗಿನ 56.78 ರೂ.ಗಳಿಂದ 57.97 ರೂ.ಗೆ ಖರೀದಿಯಾಗಲಿದೆ. ಪ್ರಸಕ್ತ ವರ್ಷದ ಅ.31ರ ವರೆಗೆ ಈ ದರ ಅನ್ವಯವಾಗಲಿದೆ. ಪೆಟ್ರೋಲ್‌ಗೆ ಎಥೆನಾಲ್‌ ಮಿಶ್ರಣ ಯೋಜನೆಯ ಅನ್ವಯ ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಈ ಖರೀದಿ ನಡೆಸಲಿವೆ. ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು 2013-14ನೇ ಸಾಲಿನಲ್ಲಿ 38 ಕೋಟಿ ಲೀಟರ್‌ ಎಥೆನಾಲ್‌ ಖರೀದಿ ಮಾಡಿದ್ದರೆ, 2023-24ನೇ ಸಾಲಿನಲ್ಲಿ ಅದರ ಪ್ರಮಾಣ 708 ಕೋಟಿಗೆ ಏರಿಕೆಯಾಗಿದೆ.

ದೇಶದಲ್ಲಿ ಅಮೂಲ್ಯ ಖನಿಜ
ಲೀಥಿಯಂ, ನಿಕ್ಕೆಲ್‌, ಕೋಬಾಲ್ಟ್ , ತಾಮ್ರ, ಅಲ್ಯು ಮಿನಿಯಂ, ಗ್ರಾಫೈಟ್‌, ಗ್ಯಾಲಿಯಂ, ಟೈಟಾ ನಿ ಯಂ, ಆ್ಯಂಟಿಮೊನಿ, ಬೆರಿಲಿಯಂ, ನಯೋಬಿ ಯಂ, ಜಮೀನಿಯಂ, ಹಾಫಿ°ಯಂ, ಇಂಡಿಯಂ.

ಟಾಪ್ ನ್ಯೂಸ್

Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್‌.ಎಂ. ರೇವಣ್ಣUdupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್‌.ಎಂ. ರೇವಣ್ಣ

Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್‌.ಎಂ. ರೇವಣ್ಣ

Mangaluru: ಪಿಡಬ್ಲ್ಯುಡಿ ಆಸ್ತಿ ಮೂಲಕ ಆದಾಯ ಗಳಿಕೆ: ಸಚಿವ ಸತೀಶ್‌ ಜಾರಕಿಹೊಳಿ

Mangaluru: ಪಿಡಬ್ಲ್ಯುಡಿ ಆಸ್ತಿ ಮೂಲಕ ಆದಾಯ ಗಳಿಕೆ: ಸಚಿವ ಸತೀಶ್‌ ಜಾರಕಿಹೊಳಿ

Mangaluru: ವಿದ್ಯುತ್‌ ದರ ಏರಿಕೆಗೆ ಪ್ರಸ್ತಾವ; ಗ್ರಾಹಕರಿಂದ ಆಕ್ಷೇಪ

Mangaluru: ವಿದ್ಯುತ್‌ ದರ ಏರಿಕೆಗೆ ಪ್ರಸ್ತಾವ; ಗ್ರಾಹಕರಿಂದ ಆಕ್ಷೇಪ

Bhubaneswar college sparks big protest

Bhubaneswar: ನೇಪಾಲಿ ವಿದ್ಯಾರ್ಥಿನಿ ಆತ್ಮಹ*ತ್ಯೆ, ಭಾರೀ ಪ್ರತಿಭಟನೆ

Mulki ರೈಲು ನಿಲ್ದಾಣ ಕಾಮಗಾರಿ: ಫೆ.21 ರಂದು ರೈಲು ವಿಳಂಬ

Mulki ರೈಲು ನಿಲ್ದಾಣ ಕಾಮಗಾರಿ: ಫೆ.21 ರಂದು ರೈಲು ವಿಳಂಬ

Ranji Trophy: ಸೆಮಿಫೈನಲ್‌ನಲ್ಲಿ ಪಾರ್ಥ್ ದಾಳಿಗೆ ಕುಸಿದ ಮುಂಬಯಿ

Ranji Trophy: ಸೆಮಿಫೈನಲ್‌ನಲ್ಲಿ ಪಾರ್ಥ್ ದಾಳಿಗೆ ಕುಸಿದ ಮುಂಬಯಿ

WPL 2025: Mumbai register 5th consecutive win against Gujarat

WPL 2025: ಗುಜರಾತ್‌ ವಿರುದ್ಧ ಮುಂಬೈಗೆ ಸತತ 5ನೇ ಜಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bhubaneswar college sparks big protest

Bhubaneswar: ನೇಪಾಲಿ ವಿದ್ಯಾರ್ಥಿನಿ ಆತ್ಮಹ*ತ್ಯೆ, ಭಾರೀ ಪ್ರತಿಭಟನೆ

Kumbh stampede: Ashutosh sinha protest against the government

Kumbh stampede: ಸರ್ಕಾರದ ವಿರುದ್ಧ “ಅಸ್ಥಿ ಕುಡಿಕೆ’ ಪ್ರತಿಭಟನೆ

Augusta scam broker Michael granted bail after 6 years in custody

Augusta scam: 6 ವರ್ಷಗಳ ಕಸ್ಟಡಿ ಬಳಿಕ ಅಗಸ್ಟಾ ಹಗರಣ ದಲ್ಲಾಳಿ ಮೈಕೆಲ್‌ಗೆ ಜಾಮೀನು

TTD-Donate

TTD: ತಿರುಪತಿ ದೇಗುಲದ ಉಚಿತ ಅನ್ನಪ್ರಸಾದ ಟ್ರಸ್ಟ್‌ಗೆ ಮುಂಬೈ ವ್ಯಕ್ತಿ 11ಕೋಟಿ ರೂ.ದೇಣಿಗೆ!

ಮಹಾಕುಂಭ ‘ಮೃತ್ಯುಕುಂಭ’ ವಾಗಿ ಮಾರ್ಪಟ್ಟಿದೆ… ಯೋಗಿ ಸರ್ಕಾರದ ವಿರುದ್ಧ  ಮಮತಾ ವಾಗ್ದಾಳಿ

ಮಹಾಕುಂಭ ‘ಮೃತ್ಯುಕುಂಭ’ ವಾಗಿ ಮಾರ್ಪಟ್ಟಿದೆ… ಯೋಗಿ ಸರ್ಕಾರದ ವಿರುದ್ಧ ಮಮತಾ ವಾಗ್ದಾಳಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-191: “ಡಿಸಿಶನ್‌ ಮೇಕರ್‌ ನೀನಲ್ಲ’ ಎಂಬ ಶ್ರೀಕೃಷ್ಣ

Udupi: ಗೀತಾರ್ಥ ಚಿಂತನೆ-191: “ಡಿಸಿಶನ್‌ ಮೇಕರ್‌ ನೀನಲ್ಲ’ ಎಂಬ ಶ್ರೀಕೃಷ್ಣ

Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್‌.ಎಂ. ರೇವಣ್ಣUdupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್‌.ಎಂ. ರೇವಣ್ಣ

Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್‌.ಎಂ. ರೇವಣ್ಣ

Mangaluru: ಪಿಡಬ್ಲ್ಯುಡಿ ಆಸ್ತಿ ಮೂಲಕ ಆದಾಯ ಗಳಿಕೆ: ಸಚಿವ ಸತೀಶ್‌ ಜಾರಕಿಹೊಳಿ

Mangaluru: ಪಿಡಬ್ಲ್ಯುಡಿ ಆಸ್ತಿ ಮೂಲಕ ಆದಾಯ ಗಳಿಕೆ: ಸಚಿವ ಸತೀಶ್‌ ಜಾರಕಿಹೊಳಿ

Mangaluru: ವಿದ್ಯುತ್‌ ದರ ಏರಿಕೆಗೆ ಪ್ರಸ್ತಾವ; ಗ್ರಾಹಕರಿಂದ ಆಕ್ಷೇಪ

Mangaluru: ವಿದ್ಯುತ್‌ ದರ ಏರಿಕೆಗೆ ಪ್ರಸ್ತಾವ; ಗ್ರಾಹಕರಿಂದ ಆಕ್ಷೇಪ

Bhubaneswar college sparks big protest

Bhubaneswar: ನೇಪಾಲಿ ವಿದ್ಯಾರ್ಥಿನಿ ಆತ್ಮಹ*ತ್ಯೆ, ಭಾರೀ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.