ಸೇವಾ ಶುಲ್ಕ ಸಿಂಧುವೇ? ಅಸಿಂಧುವೇ? ಹಾಗಾದರೆ ಏನಿದು ವಿವಾದ?
Team Udayavani, Jun 7, 2022, 11:45 AM IST
ಸೇವಾ ಶುಲ್ಕ ವಿಚಾರವಾಗಿ ಕೇಂದ್ರ ಸರಕಾರ ಮತ್ತು ಹೊಟೇಲ್ ಮಾಲಕರ ಸಂಘದ ನಡುವೆ ದೊಡ್ಡ ಜಗಳವೇ ಆಗುತ್ತಿದೆ. ಸೇವಾಶುಲ್ಕ ಹಾಕುವುದು ಕಾನೂನು ಬಾಹಿರ ಎಂದು ಕೇಂದ್ರ ಹೇಳಿದ್ದರೆ, ಹೊಟೇಲ್ ಸಂಘದವರು ಇದನ್ನು ಒಪ್ಪಿಕೊಳ್ಳುತ್ತಿಲ್ಲ. ಈ ಸೇವಾಶುಲ್ಕದಿಂದಲೇ ನಾವು ಹೊಟೇಲ್ ಸಿಬಂದಿಗೆ ವೇತನ ನೀಡುತ್ತಿದ್ದೇವೆ ಎಂಬ ವಾದ ಇವರದ್ದು. ಹಾಗಾದರೆ ಏನಿದು ವಿವಾದ?
ಕಾನೂನಿನ ಸಮ್ಮತಿ ಇದೆಯೇ?
ಕೇಂದ್ರ ಸರಕಾರದ ಪ್ರಕಾರ ಹೊಟೆಧೀಲ್‌ಗಳಲ್ಲಿ ಸೇವಾಶುಲ್ಕ ವಿಧಿಸುವುದು ಅಪರಾಧ. ಈ ಶುಲ್ಕದಿಂದಾಗಿ ಗ್ರಾಹಕರಿಗೆ ಹೊರೆಯಾಗುತ್ತದೆ ಎಂದೂ ಅದು ಹೇಳುತ್ತದೆ. ಈ ಸಂಬಂಧ ಕಾನೂನಿನಲ್ಲಿ ಯಾವುದೇ ಉಲ್ಲೇಖವಿಲ್ಲವಾದರೂ ಮುಂದೆ ತರುತ್ತೇವೆ ಎಂದು ಕೇಂದ್ರ ಹೇಳುತ್ತಿದೆ.
ಈಗ ಏಕೆ ಈ ವಿಚಾರ?
ಗ್ರಾಹಕರ ದೂರಿನ ಮೇರೆಗೆ ಇತ್ತೀಚೆಗಷ್ಟೇ ಕೇಂದ್ರ ಸರಕಾರ, ರಾಷ್ಟ್ರೀಯ ರೆಸ್ಟೋರೆಂಟ್ ಅಸೋಸಿಯೇಶನ್ ಆಫ್ ಇಂಡಿಯಾದ ಜತೆಗೆ ಒಂದು ಸಭೆ ನಡೆಸಿದೆ. ಈ ಸಂದರ್ಭದಲ್ಲಿ ಹೊಟೆಧೀಲ್‌ಗಳಲ್ಲಿ ವಿಧಿಸಲಾಗುತ್ತಿರುವ ಸೇವಾಶುಲ್ಕದ ಬಗ್ಗೆ ಚರ್ಚೆಯಾಗಿದೆ. ಸದ್ಯ ಗ್ರಾಹಕರಿಗೆ ವಿಧಿಸಲಾಗುವ ಬಿಲ್‌ಗೆ ಶೇ.10ರಷ್ಟು ಸೇವಾ ಶುಲ್ಕ ವಿಧಿಸಿ ವಸೂಲಿ ಮಾಡಿಕೊಳ್ಳಲಾಗುತ್ತಿದೆ. ಇದು ತಪ್ಪು ಎಂದಿದೆ.
ಹೊಟೇಲ್‌ಗಳವರ ವಾದವೇನು?
ಸೇವಾಶುಲ್ಕಕ್ಕೆ ಸಂಬಂಧಿಸಿದಂತೆ ಸದ್ಯ ದೇಶದಲ್ಲಿ ಯಾವುದೇ ಕಾನೂನು ಇಲ್ಲ. ಒಮ್ಮೆ ಸರಕಾರ ಕಾನೂನು ಜಾರಿ ಮಾಡಿದ ಮೇಲೆ ಇದು ಸರಿಯೋ ಅಥವಾ ತಪ್ಪೋ ಎಂಬುದು ನಿರ್ಧಾರವಾಗುತ್ತದೆ. ಅಲ್ಲಿಯವರೆಗೆ ಸೇವಾಶುಲ್ಕ ವಿಧಿಸುವುದು ಕಾನೂನು ಪ್ರಕಾರ ಸರಿಯಾಗಿಯೇ ಇದೆ ಎಂದು ಹೊಟೇಲ್ ಮಾಲಕರು ಹೇಳುತ್ತಾರೆ. ಅಲ್ಲದೆ ಈಗಾಗಲೇ ಕೊರೊನಾ ಸಮಸ್ಯೆಯಿಂದ ನಾವು ನಲುಗಿದ್ದೇವೆ. ಈಗ ಸೇವಾಶುಲ್ಕದ ವಿಚಾರದಲ್ಲಿ ಹೊಟೇಲ್‌ನವರನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ. ಸೇವಾಶುಲ್ಕದಿಂದಾಗಿಯೇ ಸಿಬಂದಿ ಉತ್ತಮ ವೇತನ ಮತ್ತು ಪ್ರೋತ್ಸಾಹಕ ಧನ ಪಡೆಯುತ್ತಿದ್ದಾರೆ ಎಂದು ಹೇಳುತ್ತಾರೆ.
ಗ್ರಾಹಕರ ಒಪ್ಪಿಗೆ ಅಗತ್ಯವೇ?
ಕೇಂದ್ರ ಸರಕಾರ ಹೇಳುವ ಪ್ರಕಾರ, ಸೇವಾಶುಲ್ಕ ನೀಡುವುದು ಗ್ರಾಹಕರಿಗೆ ಬಿಟ್ಟ ವಿಚಾರ. ಒಂದು ವೇಳೆ ಗ್ರಾಹಕ ತಾನು ಸೇವಾಶುಲ್ಕ ನೀಡಲ್ಲ ಎಂದರೆ ಬಲವಂತವಾಗಿ ಪಡೆದುಕೊಳ್ಳುವಂತಿಲ್ಲ. ಆತ ಇಚ್ಚಿಸಿದರೆ ಮಾತ್ರ ಪಡೆಯಬಹುದು ಎಂದಿದೆ. 2017ರಲ್ಲೇ ಈ ಸಂಬಂಧ ನಿಯಮ ಜಾರಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.