ವರ್ಕ್ ಫ್ರಂ ಹೋಂನಿಂದ ಕಛೇರಿಗೆ ಬಂದು ಕಾರ್ಯಾರಂಭ ಮಾಡಿದ ಕೇಂದ್ರ ಸಚಿವರು
Team Udayavani, Apr 14, 2020, 5:41 PM IST
ಹೊಸದಿಲ್ಲಿ: ಲಾಕ್‌ಡೌನ್ ಅವಧಿಯ ಹತ್ತೂಂಭತ್ತು ದಿನಗಳನ್ನು ಮನೆಗಳಲ್ಲೇ ಕಳೆದಿದ್ದ ಕೇಂದ್ರದ ಸಚಿವರು, ಸೋಮವಾರದಿಂದ ತಮ್ಮ ಕೆಲಸ ಕಾರ್ಯಗಳನ್ನು ಪುನರಾರಂಭಿಸಿದ್ದಾರೆ. ಪ್ರತಿಯೊಂದು ಸಚಿವಾಲಯಗಳು ತಮಗೆ ಸಂಬಂಧಿಸಿದ ಸಚಿವರೊಂದಿಗೆ, ಮೂರನೇ ಒಂದರಷ್ಟು ಸಿಬ್ಬಂದಿಯನ್ನಿಟ್ಟುಕೊಂಡು ಕೆಲಸ ಶುರು ಮಾಡಿವೆ.
ಪತ್ರಾಂಕಿತ ಅಧಿಕಾರಿಗಳ ಮೇಲ್ಪಟ್ಟ ಅಧಿಕಾರಿಗಳ ವೃಂದ, ಸಚಿವಾಲಯಗಳ ಸಹಾಯಕ ಸಿಬ್ಬಂದಿಯೂ ಇದರಲ್ಲಿ ಸೇರಿದ್ದಾರೆ. ಕೋವಿಡ್ ಸೋಂಕು ತಡೆಗೆ ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ.
ಸೋಮವಾರ ಕೆಲಸ ಆರಂಭಿಸಿದ ಕೇಂದ್ರ ಸಚಿವರಲ್ಲಿ ಪ್ರಮುಖರಾದವರೆಂದರೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಾಮಾಜಿಕ ನ್ಯಾಯ, ಸಬಲೀಕರಣ ಸಚಿವ ತಾವರ್‌ಸಿಂಗ್ ಗೆಹ್ಲೋಟ್, ಕ್ರೀಡಾ ಸಚಿವ ಕಿರಣ್ ರಿಜಿಜು, ಬುಡಕಟ್ಟು ಜನಾಂಗದ ಅಭಿವೃದ್ಧಿ ಸಚಿವ ಅರ್ಜುನ್ ಮುಂಡಾ, ಶಾನ್ಯ ರಾಜ್ಯಗಳ ಅಭಿವೃದ್ಧಿ, ಪ್ರಧಾನಿ ಕಚೇರಿ, ಸಿಬ್ಬಂದಿ, ಸಾರ್ವಜನಿಕ ಕುಂದು ಕೊರತೆ ಹಾಗೂ ಪಿಂಚಣಿ ಇಲಾಖೆಯ ಸಚಿವ ಜಿತೇಂದ್ರ ಸಿಂಗ್, ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.