ಅಧಿಕಾರಿಗಳು ವಿದೇಶಿ ಗಿಫ್ಟ್ ಸ್ವೀಕರಿಸಲು ಅಸ್ತು
Team Udayavani, Sep 22, 2021, 6:55 AM IST
ಹೊಸದಿಲ್ಲಿ: ಐಎಎಸ್, ಐಪಿಎಸ್, ಐಎಫ್ಒಎಸ್ ಅಧಿಕಾರಿಗಳು ಇನ್ನು ಮುಂದೆ ವಿದೇಶಿ ಗಣ್ಯರು ನೀಡಿದ ಉಡುಗೊರೆಗಳನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಬಹುದು. ಇದಕ್ಕೆ ಸಂಬಂಧಿಸಿದ 50 ವರ್ಷಗಳಷ್ಟು ಹಳೆಯ ನಿಯಮಕ್ಕೆ ಕೇಂದ್ರ ಸರಕಾರ ತಿದ್ದುಪಡಿ ತಂದಿದೆ.
ಅಖೀಲ ಭಾರತ ಸೇವೆಯ ನಿಯಮಗಳು, 1968 ಪ್ರಕಾರ, ಯಾವುದೇ ಐಪಿಎಸ್, ಐಎಎಸ್ ಮತ್ತು ಐಎಫ್ಒಎಸ್ ಅಧಿಕಾರಿ 5 ಸಾವಿರ ರೂಪಾಯಿಗಿಂತ ಹೆಚ್ಚು ಮೌಲ್ಯದ ಉಡುಗೊರೆ ಸ್ವೀಕರಿಸುವಂತಿರಲಿಲ್ಲ.
ವಿದೇಶಿ ಗಣ್ಯರು ಅಥವಾ ಸ್ಥಳೀಯವಾಗಿ ಆಡಳಿತಾತ್ಮಕ ಸಂಬಂಧ ಹೊಂದಿದವರಿಂದಲೂ ಉಡುಗೊರೆ ಸ್ವೀಕರಿಸುವುದು ನಿಷಿದ್ಧ. ಆದರೆ ಇದೀಗ ಆ ಕಾಯ್ದೆಯಲ್ಲಿ ತಿದ್ದುಪಡಿ ತರಲು ನಿರ್ಧರಿಸಲಾಗಿದ್ದು, ಅಧಿಕಾರಿಗಳು ವಿದೇಶಿ ಗಣ್ಯರಿಂದ ಉಡುಗೊರೆ ಸ್ವೀಕರಿಸಲು ಅನುಮತಿ ನೀಡಲಾಗಿದೆ. ಆದರೆ ಉಡುಗೊರೆಯ ಮೌಲ್ಯ 25 ಸಾವಿರ ರೂ. ಮೀರಿದ್ದರೆ ಮಾತ್ರ ಅದನ್ನು ಸರಕಾರದ ಗಮನಕ್ಕೆ ತರಬೇಕು ಎಂದು ಹೊಸ ನಿಯಮ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…