ಅಯೋಧ್ಯೆ: ಅಲರ್ಟ್‌; ಭದ್ರತೆ ಹೆಚ್ಚಿಸಿ, ಸಾಮರಸ್ಯ ಕಾಪಾಡಲು ಕೇಂದ್ರದ ಸೂಚನೆ

ಯಾವುದೇ ಕ್ಷಣದಲ್ಲೂ ಬರಬಹುದು ಸುಪ್ರೀಂ ತೀರ್ಪು

Team Udayavani, Nov 8, 2019, 6:15 AM IST

cc-50

ಹೊಸದಿಲ್ಲಿ/ಅಯೋಧ್ಯೆ: ಯಾವುದೇ ದಿನ, ಯಾವುದೇ ಕ್ಷಣದಲ್ಲಾದರೂ ಅಯೋಧ್ಯೆಯ ಭೂವಿವಾದಕ್ಕೆ ಸಂಬಂಧಿಸಿದ ಐತಿಹಾಸಿಕ ಸುಪ್ರೀಂ ಕೋರ್ಟ್‌ ತೀರ್ಪು ಹೊರಬೀಳಲಿರುವ ಕಾರಣ ಎಲ್ಲ ರೀತಿಯ ಸನ್ನಿವೇಶಗಳನ್ನು ಸಮರ್ಥವಾಗಿ ಎದುರಿಸಲು ದೇಶ ಸಜ್ಜಾಗುತ್ತಿದೆ.

ತೀರ್ಪಿಗೆ ದಿನಗಣನೆ ಆರಂಭವಾದಾಗಿನಿಂದಲೇ ಉತ್ತರಪ್ರದೇಶ ಸಹಿತ ಕೆಲವು ರಾಜ್ಯಗಳಲ್ಲಿ ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಕ್ಕೆ ಪೂರಕವೆಂಬಂತೆ, ಗುರುವಾರ ಕೇಂದ್ರ ಸರಕಾರವೇ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಗಳಿಗೆ ಎಚ್ಚರದಿಂದಿರಿ ಎಂಬ ಸೂಚನೆಯ ಜತೆಗೆ ಭದ್ರತಾ ಸಲಹೆಗಳನ್ನು ರವಾನಿಸಿದೆ.

ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿ ಮತ್ತು ದೇಶದ ಎಲ್ಲೂ ಅಹಿತ ಕರ ಘಟನೆ ನಡೆಯದಂತೆ ನೋಡಿಕೊಳ್ಳಿ ಎಂದು ರಾಜ್ಯಗಳಿಗೆ ಕೇಂದ್ರ ಗೃಹ ಇಲಾಖೆ ಸೂಚಿಸಿದೆ. ಅಯೋಧ್ಯೆಯಲ್ಲಿ ಭದ್ರತೆಗಾಗಿ ಸುಮಾರು 4 ಸಾವಿರ ಅರೆಸೇನಾ ಸಿಬಂದಿಯನ್ನು ನಿಯೋಜಿಸಲಾಗುತ್ತಿದೆ. ತೀರ್ಪಿನ ಹಿನ್ನೆಲೆಯಲ್ಲಿ ಭಯೋತ್ಪಾದಕರು ಶಾಂತಿಗೆ ಭಂಗ ತರಲು ಯತ್ನಿಸುವ ಸಾಧ್ಯತೆಗಳಿರುವ ಕಾರಣ ಕೇಂದ್ರ ಸರಕಾರವು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಉತ್ತರಪ್ರದೇಶ ಉಗ್ರ ನಿಗ್ರಹ ದಳ ಮತ್ತು ಸ್ಥಳೀಯ ಗುಪ್ತಚರ ಘಟಕಗಳ ಅಧಿಕಾರಿಗಳನ್ನು ಅಯೋಧ್ಯೆಯಲ್ಲಿ ನಿಯೋಜಿಸಿದೆ.

ಶಾಂತಿಗೆ ಮನವಿ
ತೀರ್ಪಿನ ಬಳಿಕ ದಿಲ್ಲಿಯ ಹಜ್ರತ್‌ ನಿಜಾ ಮುದ್ದೀನ್‌ ದರ್ಗಾದ 20 ಮುಸ್ಲಿಂ ಮುಖಂಡರ ನಿಯೋಗವು ದೇಶಾದ್ಯಂತ ಸಂಚರಿಸಿ ಶಾಂತಿ ಕಾಪಾಡುವಂತೆ ಸಮುದಾಯಕ್ಕೆ ಮನವಿ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ರೈಲ್ವೇ ಪೊಲೀಸರು ಗುರುವಾರ ತಮ್ಮ ಎಲ್ಲ ವಲಯಗಳಿಗೂ 7 ಪುಟಗಳ ನಿರ್ದೇಶನಗಳನ್ನು ಕಳುಹಿಸಿಕೊಟ್ಟಿದ್ದಾರೆ.

ರೈಲ್ವೇ ಭದ್ರತಾ ಪಡೆಯ (ಆರ್‌ಪಿಎಫ್) ಎಲ್ಲ ಸಿಬಂದಿಯ ರಜೆಗಳನ್ನೂ ರದ್ದು ಮಾಡಲಾಗಿದ್ದು, ಎಲ್ಲರೂ ರೈಲುಗಳನ್ನು ಎಸ್ಕಾರ್ಟ್‌ ಮಾಡುವ ಕೆಲಸದಲ್ಲಿ ತೊಡಗಿಕೊಳ್ಳುವಂತೆ ಸೂಚಿಸಲಾಗಿದೆ. ಪ್ಲಾಟ್‌ಫಾರಂಗಳು, ರೈಲು ನಿಲ್ದಾಣಗಳು, ಯಾರ್ಡ್‌ಗಳು, ಪಾರ್ಕಿಂಗ್‌ ಸ್ಥಳ, ಸೇತುವೆಗಳು ಹಾಗೂ ಸುರಂಗಗಳಲ್ಲಿ ಮಾತ್ರವಲ್ಲದೆ, ತಯಾರಿಕಾ ಘಟಕ, ವರ್ಕ್‌ ಶಾಪ್‌ಗ್ಳಲ್ಲೂ ಭದ್ರತೆ ಬಿಗಿಗೊಳಿ ಸುವಂತೆ ಆದೇಶಿಸಲಾಗಿದೆ. ಅಲ್ಲದೆ, ಸಂಭಾವ್ಯ ಹಿಂಸಾಚಾರದ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿ, ಅಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸುವಂತೆ ಸೂಚಿಸಲಾಗಿದೆ.

ಉ.ಪ್ರದೇಶದಲ್ಲಿ ಏನೇನು ಕ್ರಮ?
-ಉತ್ತರಪ್ರದೇಶ ಸರಕಾರವು ಈ ತಿಂಗಳ ಅಂತ್ಯದವರೆಗೆ ಪೊಲೀಸ್‌ ಹಾಗೂ ಆಡಳಿತಾತ್ಮಕ ಇಲಾಖೆಯ ಎಲ್ಲ ಫೀಲ್ಡ್‌ ಆಫೀಸರ್‌ಗಳ ರಜೆಗಳನ್ನು
ರದ್ದು ಮಾಡಿದೆ.

-ಇಲ್ಲಿನ ಅಂಬೇಡ್ಕರ್‌ ನಗರ ಜಿಲ್ಲೆಯಲ್ಲಿನ ವಿವಿಧ ಕಾಲೇಜುಗಳಲ್ಲಿ 8 ತಾತ್ಕಾಲಿಕ ಜೈಲುಗಳನ್ನು ನಿರ್ಮಿಸಲಾಗಿದೆ.

– ಎಲ್ಲ ರಾಜಕೀಯ ಪಕ್ಷಗಳ ಹಾಗೂ ಧರ್ಮಗಳ ಮುಖಂಡರು ಜನತೆಗೆ ಸಂಭ್ರಮಾಚರಣೆ ನಡೆಸದಂತೆ ಕರೆ ನೀಡಿವೆ

– ಸಾಮಾಜಿಕ ಮಾಧ್ಯಮಗಳ ಮೇಲೂ ಹದ್ದಿನ ಕಣ್ಣಿಡಲಾಗಿದೆ.

– ಭಾರೀ ಪ್ರಮಾಣದಲ್ಲಿ ಭದ್ರತಾ ಪಡೆಗಳು ಹಾಗೂ ಗುಪ್ತಚರ ಜಾಲವನ್ನು ನಿಯೋಜನೆ ಮಾಡಲಾಗಿದೆ.

– ಸಂವಿಧಾನ ಪೀಠದಲ್ಲಿರುವ ನ್ಯಾ| ಅಶೋಕ್‌ ಭೂಷಣ್‌ ಅವರ ಮನೆಯು ಉತ್ತರ ಪ್ರದೇಶದ ಅಶೋಕ್‌ ನಗರ ದಲ್ಲಿರುವ ಕಾರಣ ಅವರ ನಿವಾಸಕ್ಕೆ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ.

ವಿಎಚ್‌ಪಿಯಿಂದ ಕೆತ್ತನೆ ಕೆಲಸ ಸ್ಥಗಿತ
ಅಯೋಧ್ಯೆಯ ನಿರ್ಮಾಣ್‌ ಕಾರ್ಯಶಾಲಾದಲ್ಲಿ 1990ರಿಂದಲೂ ನಿರಂತರವಾಗಿ ನಡೆಯುತ್ತಾ ಬಂದಿ ರುವ ಶಿಲೆಗಳು ಹಾಗೂ ಮಾರ್ಬಲ್‌ಗ‌ಳ ಕೆತ್ತನೆ ಕೆಲಸವನ್ನು ಈಗ ಸ್ಥಗಿತಗೊಳಿಸಲಾಗಿದೆ. ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ, 3 ದಶಕಗಳಲ್ಲೇ ಮೊದಲ ಬಾರಿಗೆ ಕೆತ್ತನೆ ಕಾರ್ಯ ನಿಲ್ಲಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್‌ ವಕ್ತಾರ ಶರದ್‌ ಶರ್ಮಾ ಅವರು ಹೇಳಿದ್ದಾರೆ.

ಅನಗತ್ಯ ಹೇಳಿಕೆ ಬೇಡ: ಪ್ರಧಾನಿ ಮೋದಿ
ಅಯೋಧ್ಯೆ ವಿಚಾರದಲ್ಲಿ ಯಾರೂ ಅನಗತ್ಯ ಹೇಳಿಕೆ ನೀಡಬಾರದು ಮತ್ತು ದೇಶದಲ್ಲಿ ಸಾಮರಸ್ಯ ಕಾಪಾಡಲು ಸಹಕರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಸೂಚಿಸಿದ್ದಾರೆ. ಸಚಿವರ ಮಂಡಳಿ ಸಭೆಯಲ್ಲಿ ಈ ಕುರಿತು ಸಲಹೆ ನೀಡಿರುವ ಅವರು, ದೇಶದಲ್ಲಿ ಸೌಹಾರ್ದ ಕಾಪಾಡುವುದು ಎಲ್ಲರ ಹೊಣೆಗಾರಿಕೆಯಾಗಿದೆ ಎಂದಿದ್ದಾರೆ.

ಕರ್ನಾಟಕದಲ್ಲೂ ಕಟ್ಟೆಚ್ಚರ
ಕೇಂದ್ರ ಗೃಹ ಇಲಾಖೆಯ ನಿರ್ದೇಶನದ ಮೇರೆಗೆ ರಾಜ್ಯದಲ್ಲೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಭಾಸ್ಕರ ರಾವ್‌ ಅವರೂ ಭದ್ರತೆ ಬಿಗಿಗೊಳಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅರೆಸೇನಾ ಪಡೆಗಳು ಮತ್ತು ರ್ಯಾಪಿಡ್‌ ಆ್ಯಕ್ಷನ್‌ ಫೋರ್ಸ್‌ನ ಸಿಬಂದಿಯನ್ನೂ ಭದ್ರತೆಗೆ ನಿಯೋಜಿಸಲಾಗುತ್ತಿದೆ. ತುರ್ತು ಸಂದರ್ಭ ಹೊರತುಪಡಿಸಿ ಪೊಲೀಸರ ಎಲ್ಲ ರಜೆಗಳನ್ನು ರದ್ದು ಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಜತೆಗೆ ಸಮಾಜದ ಎಲ್ಲ ಸಮುದಾಯಗಳ ನಾಯಕರ ಜತೆಗೂ ಸಭೆ ನಡೆಸಲಾಗಿದೆ ಎಂದಿದ್ದಾರೆ.

ತೀರ್ಪನ್ನು ಎರಡೂ ಕಡೆಯವರು ಒಪ್ಪಿಕೊಳ್ಳಬೇಕು. ಸಂಭ್ರಮಾಚರಣೆಯಾಗಲಿ, ಪ್ರತಿಭಟನೆಯಾಗಲಿ ನಡೆಯಬಾರದು. ತೀರ್ಪು ನೀಡುವವರೂ ಮನುಷ್ಯರೇ ಆಗಿರುತ್ತಾರೆ. ಹಾಗಾಗಿ ಸಣ್ಣಪುಟ್ಟ ಲೋಪಗಳು ಆಗಲೂಬಹುದು.
-ನ್ಯಾ| ಸಂತೋಷ್‌ ಹೆಗ್ಡೆ , ನಿವೃತ್ತ ಲೋಕಾಯುಕ್ತ

ಟಾಪ್ ನ್ಯೂಸ್

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

Modi-Tour

Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ರಾಜ್ಯಸಭೆ ಬಹುಮತದತ್ತ ಬಿಜೆಪಿ ಚಿತ್ತ

1-ree

Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.