ಪಠ್ಯಕ್ರಮ ಪರಿಷ್ಕರಣೆಗೆ ಇಬ್ಬರು ಕನ್ನಡಿಗರುಳ್ಳ ಹೊಸ ಸಮಿತಿ
Team Udayavani, Sep 23, 2021, 7:15 AM IST
ಹೊಸದಿಲ್ಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಪಠ್ಯಪುಸ್ತಕಗಳನ್ನು ರಚಿಸುವ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಕೌನ್ಸಿಲ್‌ನ (ಎನ್‌ಸಿಇಆರ್‌ಟಿ) ಪಠ್ಯ ಮತ್ತು ಪಠ್ಯಕ್ರಮವನ್ನು ಪರಿಷ್ಕರಿಸಲು ಕೇಂದ್ರ ಸರಕಾರ ಮುಂದಾಗಿದೆ.
ಕನ್ನಡಿಗರಾದ, ಇಸ್ರೋದ ಮಾಜಿ ಅಧ್ಯಕ್ಷ ಡಾ| ಕಸ್ತೂರಿ ರಂಗನ್ ಅವರು ಈ ಸಮಿ ತಿಯ ಅಧ್ಯಕ್ಷರಾಗಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಕರಡು ಸಮಿತಿಗೂ ಇವರೇ ಅಧ್ಯಕ್ಷರಾಗಿದ್ದರು. ಇವರಲ್ಲದೆ, ಮತ್ತೂಬ್ಬ ಕನ್ನಡಿಗ ಪ್ರೊ| ಟಿ.ವಿ. ಕಟ್ಟೀಮನಿ ಅವರು ಈ ಸಮಿತಿಯಲ್ಲಿದ್ದಾರೆ.
ಪ್ರಸ್ತುತ, ಕಟ್ಟೀಮನಿಯವರು ಆಂಧ್ರಪ್ರದೇಶದ ಬುಡಕಟ್ಟು ವಿಶ್ವವಿದ್ಯಾನಿಲಯದ ಕುಲಪತಿ ಗಳಾಗಿದ್ದಾರೆ. ಇವರೂ ಸೇರಿದಂತೆ ಒಟ್ಟು 12 ಸದಸ್ಯರು ಈ ಸಮಿತಿಯಲ್ಲಿದ್ದಾರೆ. ಸಿಬಿಎಸ್‌ಇ ಪಠ್ಯ ಮತ್ತು ಪಠ್ಯಕ್ರಮದ ರೂಪುರೇಷೆಗಳುಳ್ಳ ರಾಷ್ಟ್ರೀಯ ಪಠ್ಯಕ್ರಮ ಫ್ರೇಂವರ್ಕ್ (ಎನ್‌ಸಿಎಫ್) ಎಂಬ ಕರಡು ಪ್ರತಿಯನ್ನು ಸಿದ್ಧಗೊಳಿಸಿ, ಅದನ್ನು ಈ ಸಮಿತಿ ಸರಕಾರಕ್ಕೆ ಸಲ್ಲಿಸಲಿದೆ.
ಈ ಹಿಂದೆ, ಎನ್‌ಸಿಇಆರ್‌ಟಿ ಪಠ್ಯ ಮತ್ತು ಪಠ್ಯಕ್ರಮ 2005ರಲ್ಲಿ ಪರಿಷ್ಕೃತವಾಗಿತ್ತು. ಇದಕ್ಕೂ ಹಿಂದೆ, 1975, 1988 ಮತ್ತು 2000ನೇ ವರ್ಷದಲ್ಲಿ ಪರಿಷ್ಕೃತಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.