![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Jun 6, 2021, 4:11 PM IST
ನವದೆಹಲಿ : ಫಲಾನುಭವಿಗಳ ಮನೆ ಬಾಗಿಲಿಗೆ ಉಚಿತ ಪಡಿತರ ಯೋಜನೆಗೆ ತಡೆಯೊಡ್ಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕೇಜ್ರಿವಾಲ್ ಮಾಡಿರುವ ಆರೋಪಕ್ಕೆ ಕೇಂದ್ರ ಸರ್ಕಾರ ತಿರುಗೇಟು ನೀಡಿದೆ.
ಇಂದು ದೆಹಲಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ ಸೇರಿದಂತೆ ಹಲವು ನಾಯಕರು, ಕೇಜ್ರಿವಾಲ್ ಸರ್ಕಾರ ಮಾಡಿರುವ ಆರೋಪಕ್ಕೆ ಪ್ರತ್ಯುತ್ತರ ನೀಡಿದರು. ಕೇಂದ್ರ ಸರ್ಕಾರ 80 ಕೋಟಿ ಜನರಿಗೆ ಉಚಿತವಾಗಿ ಪಡಿತರ ನೀಡಿದೆ. ದೆಹಲಿಯ 72 ಲಕ್ಷ ಜನರು ಈ ಸೌಲಭ್ಯ ಪಡೆದಿದ್ದಾರೆ ಎಂದು ಹೇಳಿದರು.
ಇನ್ನು ಇಂದು ಮಧ್ಯಾಹ್ನ ಮಾಧ್ಯಮಗಳ ಎದುರು ಕೇಂದ್ರ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ , ‘ಮುಖ್ಯಮಂತ್ರಿ ಘರ್ ಘರ್ ರೇಷನ್ ಯೋಜನಾ’ ಹೆಸರಿನಡಿ ಬಡವರ ಮನೆ ಬಾಗಿಲಿಗೆ ಉಚಿತವಾಗಿ ಪಡಿತರ ತಲುಪಿಸುವ ಯೋಜನೆಗೆ ನೀವು ತಡೆ ನೀಡಿದಿರಿ. ನಂತರ ಈ ಯೋಜನೆಗೆ ನಾವು ಯಾವುದೆ ಹೆಸರು ಇಡುವುದು ಬೇಡ ಎನ್ನುವ ತೀರ್ಮಾನ ತೆಗೆದುಕೊಂಡೆವು. ಅವಾಗಲೂ ನೀವು ಈ ಮಹತ್ವಾಕಾಂಕ್ಷೆ ಯೋಜನೆಗೆ ಅಡ್ಡಿ ಮಾಡಿದಿರಿ. ಕೇಂದ್ರ ಸರ್ಕಾರದ ಅನುಮತಿ ಇಲ್ಲದೆ ಯೋಜನೆ ಜಾರಿ ಇಲ್ಲ ಎಂದು ಕಾರಣ ನೀಡಿದಿರಿ.
ಈ ಯೋಜನೆಗೆ ಅನುಮತಿ ಕೋರಿ ಕಳೆದ ಕೆಲ ತಿಂಗಳುಗಳಿಂದ 5 ಬಾರಿ ಪತ್ರ ಬರೆದಿದ್ದೇನೆ. ಕೇಂದ್ರದಿಂದ ಇನ್ನು ಯಾವ ರೀತಿಯ ಅನುಮತಿ ಪಡೆಯಬೇಕೆ ಎಂದು ? ಕೇಜ್ರಿವಾಲ್ ಪ್ರಶ್ನಿಸಿದ್ದರು.
You seem to have an Ad Blocker on.
To continue reading, please turn it off or whitelist Udayavani.