ಶೀಘ್ರ ಸರಕಾರಿ ಬ್ಯಾಂಕ್ ಪೂರ್ಣ ಖಾಸಗೀಕರಣ? ಪಿಎಸ್‌ಬಿಗಳಿಂದ ನಿರ್ಗಮಿಸಲು ಸರಕಾರ ಸಿದ್ಧತೆ
ಅಧಿವೇಶನದಲ್ಲಿ ಮಸೂದೆ ಮಂಡನೆಗೆ ಚಿಂತನೆ
Team Udayavani, Jun 29, 2022, 7:25 AM IST
ಹೊಸದಿಲ್ಲಿ: ಸದ್ಯದಲ್ಲೇ ದೇಶದ ಎಲ್ಲ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಶತ ಪ್ರತಿಶತ ಖಾಸಗೀಕರಣ ಗೊಳ್ಳಲಿವೆಯೇ?
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರಕಾರವು ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಅನುವು ಮಾಡುವಂಥ ತಿದ್ದುಪಡಿ ಮಸೂದೆ ಮಂಡಿಸಲು ಚಿಂತನೆ ನಡೆಸಿ ರುವುದೇ ಈ ಪ್ರಶ್ನೆ ಮೂಡಲು ಕಾರಣ.
ಈ ತಿದ್ದುಪಡಿಗೆ ಒಪ್ಪಿಗೆ ಲಭಿಸಿದರೆ ಸರಕಾರವು ಬ್ಯಾಂಕ್‌ಗಳ ಒಡೆತನ ದಿಂದ ಸಂಪೂರ್ಣ ನಿರ್ಗಮಿಸಲಿದೆ ಎಂದು ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಆಂಗ್ಲ ಪತ್ರಿಕೆ ವರದಿ ಮಾಡಿದೆ.
ಕಾಯ್ದೆ ಏನು ಹೇಳುತ್ತದೆ?
ಬ್ಯಾಂಕಿಂಗ್ ಕಂಪೆನಿಗಳ (ಸಂಸ್ಥೆಗಳ ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ 1970ರ ಪ್ರಕಾರ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಕೇಂದ್ರ ಸರಕಾರವು ಕನಿಷ್ಠ ಶೇ. 51ರಷ್ಟು ಷೇರುಗಳನ್ನು ಹೊಂದಿರ ಬೇಕು. ಇತ್ತೀಚೆಗೆ ಪಿಎಸ್‌ಬಿಗಳ ಖಾಸಗೀ ಕರಣದ ಸಮಯದಲ್ಲಿ ಸರಕಾರವು ಕನಿಷ್ಠ ಶೇ. 26ರಷ್ಟು ಷೇರುಗಳನ್ನಾದರೂ ಹೊಂದಿತ್ತು. ಆದರೆ ಅನಂತರ ಈ ಪ್ರಮಾಣ ಕಡಿಮೆಯಾಗುತ್ತ ಬಂದಿದೆ.
ಈಗ ಸರಕಾರವು ಬ್ಯಾಂಕಿಂಗ್ ಕಾನೂನು ತಿದ್ದುಪಡಿ ಮಸೂದೆಯನ್ನು ಮುಂಗಾರು ಅಧಿವೇಶನದಲ್ಲಿ ಮಂಡಿ ಸಲು ಸಿದ್ಧತೆ ನಡೆಸಿದೆ. ಅದರಲ್ಲಿ ಬ್ಯಾಂಕಿಂಗ್ ಕಂಪೆನಿಗಳ ಕಾಯ್ದೆ 1970 ಮತ್ತು 1980 ಹಾಗೂ ಬ್ಯಾಂಕಿಂಗ್ ನಿಯಮಗಳ ಕಾಯ್ದೆ 1949ಕ್ಕೆ ತಿದ್ದುಪಡಿ ತರುವ ಪ್ರಸ್ತಾವವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.