ಝೈಕೋವ್ ಡಿ ಲಸಿಕೆಗೆ 265 ರೂ.ದರ; ಕೇಂದ್ರ ಸರಕಾರದಿಂದ ದರ ನಿಗದಿ
12ರಿಂದ ಮೇಲ್ಪಟ್ಟವರಿಗೆ ನೀಡಿಕೆಗೆ ಕ್ರಮ
Team Udayavani, Nov 9, 2021, 6:20 AM IST
ಬೀಜಿಂಗ್/ಹೊಸದಿಲ್ಲಿ: ಮಕ್ಕಳಿಗಾಗಿ ಲಸಿಕೆ ನೀಡುವ ಉದ್ದೇಶದಿಂದ ಕೇಂದ್ರ ಸರಕಾರ ಝೈಡಸ್ ಕ್ಯಾಡಿಲಾದಿಂದ ಝೈಕೋವ್ ಡಿ ಲಸಿಕೆಯ 1 ಕೋಟಿ ಡೋಸ್‌ಗಳನ್ನು ಖರೀದಿಸಲಿದೆ.
ಪ್ರತಿ ಡೋಸ್‌ಗೆ 265 ರೂ. ಮತ್ತು ಜೆಟ್ ಆ್ಯಪ್ಲಿಕೇಟರ್ ಎಂಬ ವ್ಯವಸ್ಥೆಗೆ 93 ರೂ. ಸೇರಿಸಿ ಒಟ್ಟು 358 ರೂ. ಆಗಲಿದೆ. ಕೇಂದ್ರದ ಜತೆಗೆ ಲಸಿಕೆ ಖರೀದಿಯ ಬಗ್ಗೆ ಮಾತುಕತೆ ನಡೆಸಲಾಗಿದ್ದರೂ, ಇದುವರೆಗೆ ದರ ನಿಗದಿಯಾಗಿರಲಿಲ್ಲ. ಫಾರ್ಮಾ ಜೆಟ್ ಎಂಬ ಸೂಜಿ ರಹಿತ ವ್ಯವಸ್ಥೆಯ ಮೂಲಕ ಮಕ್ಕಳಿಗೆ ಮೂರು ಡೋಸ್ ಕೊರೊನಾ ಪ್ರತಿರೋಧಕ ಲಸಿಕೆ ನೀಡಲು ಉದ್ದೇಶಿಸ ಲಾಗಿದೆ. 12ರಿಂದ 17 ವರ್ಷ ವಯೋಮಿತಿಯವರಿಗೆ ಈ ಲಸಿಕೆ ನೀಡಲು ಉದ್ದೇಶಿಸಲಾಗಿದೆ.
ಕನಿಷ್ಠ ಕೇಸು: ದೇಶದಲ್ಲಿ ಭಾನುವಾರದಿಂದ ಸೋಮವಾರದ ಅವಧಿಯಲ್ಲಿ 11,451 ಹೊಸ ಕೇಸು ಮತ್ತು ಇದೇ ಅವಧಿಯಲ್ಲಿ 266 ಮಂದಿ ಅಸುನೀಗಿದ್ದಾರೆ. ದಿನವಹಿ ದೃಢಪಟ್ಟ ಸೋಂಕು ಪ್ರಕರಣ 262 ದಿನಗಳಲ್ಲಿಯೇ ಕನಿಷ್ಠದ್ದು. ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.98.24 ಆಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ವಿದೇಶ ಪ್ರಯಾಣ ಶುರು: ಈ ನಡುವೆ, ವರ್ಷಗಳ ಅನಂತರ ಅಮೆರಿಕ ತನ್ನ ಗಡಿಗಳನ್ನು ತೆರೆದಿದೆ. ಹೀಗಾಗಿ, 2 ಡೋಸ್ ಲಸಿಕೆ ಹಾಕಿಸಿಕೊಂಡ ಮತ್ತು ಕೊರೊನಾ ನೆಗೆಟಿವ್ ವರದಿ ಪಡೆದುಕೊಂಡ ಭಾರತೀಯರು ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳ ಪ್ರಜೆಗಳಿಗೆ ಆ ದೇಶಕ್ಕೆ ಪ್ರಯಾಣಿಸಲು ಸಾಧ್ಯವಾಗಲಿದೆ. ಜತೆಗೆ ಯು.ಕೆ., ಕೆನಡಾಕ್ಕೆ ತೆರಳಲಿರುವ ಭಾರತೀಯರಿಗೆ ಕೂಡ ಪ್ರಯಾಣಕ್ಕೆ ಅವಕಾಶ ದೊರಕಿದೆ.
ಇದನ್ನೂ ಓದಿ:12ರ ವರೆಗೂ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ
ಇನ್ನೊಂದು ವರ್ಷ ಚೀನ ಬಂದ್?
“ಹೆಚ್ಚಾಗುತ್ತಿರುವ ಡೆಲ್ಟಾ ರೂಪಾಂತರಿ ಕೇಸುಗಳಿಂದಾಗಿ ಇನ್ನೂ ಒಂದು ವರ್ಷ ಕಾಲ ಚೀನ ಬಂದ್ ಆಗಲಿರುವ ಸಾಧ್ಯತೆ ಇದೆ’ ಹೀಗೆಂದು ಆಕ್ಸ್‌ಫರ್ಡ್ ವಿವಿಯ ಸಾಂಕ್ರಾ ಮಿಕ ರೋಗ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಚೆಂಗ್ ಝೆಂಗ್‌ಮಿಗ್ ಅಭಿಪ್ರಾಯಪಟ್ಟಿದ್ದಾರೆ. ಸರಿಯಾದ ರೀತಿಯಲ್ಲಿ ಬೂಸ್ಟರ್ ಡೋಸ್ ಕೂಡ ಅಲ್ಲಿ ನೀಡಲು ಸಾಧ್ಯವಾಗಿಲ್ಲ. ಜತೆಗೆ ಈಗಾಗಲೇ ಲಸಿಕೆ ಪಡೆದುಕೊಂಡವರಲ್ಲಿಯೂ ಕೂಡ ಅದು ಹೆಚ್ಚು ಪರಿಣಾಮಕಾರಿಯಾಗಿಲ್ಲ ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಚೀನದ ಹಲವು ಭಾಗಗಳಲ್ಲಿ ಡೆಲ್ಟಾ ರೂಪಾಂತರಿ ಹೆಚ್ಚಾಗಿ ದೃಢವಾಗತೊಡಗಿದೆ. ಹೀಗಾಗಿ ಕೆಲವು ಸ್ಥಳಗಳಲ್ಲಿ ಹಠಾತ್ ಲಾಕ್‌ಡೌನ್, ಸಾಮೂಹಿಕ ಕೊರೊನಾ ಪತ್ತೆ ಪರೀಕ್ಷೆ ನಡೆಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Kerala: ಅಂಗಿ ತೆಗೆದು ದೇಗುಲ ಪ್ರವೇಶ ಪದ್ಧತಿಗೆ ಕೊಕ್?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
Katapady: ಕುಂತಳನಗರ ಭಾರತಿ ಹಿ. ಪ್ರಾ. ಶಾಲೆ; ಶತಮಾನೋತ್ಸ ವ ಸಮಾರಂಭಕ್ಕೆ ಚಾಲನೆ
ಶ್ರೀಕ್ಷೇತ್ರ ಪೇಟೆಬೆಟ್ಟು ಕಟಪಾಡಿ- ಜ.4,5: ಬಬ್ಬುಸ್ವಾಮಿ, ಪರಿವಾರ ದೈವಗಳ ನೇಮೋತ್ಸವ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Kadaba: ಕರ್ತವ್ಯದ ಬಿಡುವಿನಲ್ಲಿ ಮೊಬೈಲ್‌ನಲ್ಲೇ ಓದಿ ಎಸ್‌ಐ ಆದ ಪೊಲೀಸ್ ಚಾಲಕ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.