ಥಳಿಸಿ ಸಾಮೂಹಿಕ ಹತ್ಯೆ ತಡೆಗೆ ಎರಡು ಸಮಿತಿ
Team Udayavani, Jul 24, 2018, 6:00 AM IST
ಹೊಸದಿಲ್ಲಿ/ಜೈಪುರ: ದೇಶಾದ್ಯಂತ ಹೆಚ್ಚುತ್ತಿರುವ ಥಳಿಸಿ ಸಾಮೂಹಿಕವಾಗಿ ಹತ್ಯೆ ಗೈಯುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ, ಇಂಥ ಪ್ರಕರಣಗಳ ತಡೆಗೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಲಹೆ ನೀಡಲು ಕೇಂದ್ರ ಸರಕಾರ ಎರಡು ಸಮಿತಿಗಳನ್ನು ರಚಿಸಿದೆ.
ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಉನ್ನತಾಧಿಕಾರದ ಸಚಿವರ ಸಮಿತಿ ಹಾಗೂ ಗೃಹ ಕಾರ್ಯದರ್ಶಿ ನೇತೃತ್ವದಲ್ಲಿ ನಾಲ್ವರು ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಇಂತಹ ಘಟನೆಗಳನ್ನು ನಿಯಂತ್ರಿಸಲು ಸೂಕ್ತ ಕಾನೂನು ರೂಪಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಲೋಕಸಭೆಯಲ್ಲಿ ಸಮಿತಿಗಳ ರಚನೆ ಬಗ್ಗೆ ವಿವರಣೆ ನೀಡಿದ ಗೃಹ ಸಚಿವ ರಾಜನಾಥ್ ಸಿಂಗ್, ಈ ಸಮಿತಿಗಳು 15 ದಿನಗಳಲ್ಲಿ ವರದಿ ನೀಡಲಿವೆ ಎಂದಿದ್ದಾರೆ. ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ನೇತೃತ್ವದ ಸಮಿತಿಯು ಸಾಮೂಹಿಕ ಹಿಂಸೆ ಮತ್ತು ಥಳಿಸಿ ಹತ್ಯೆಗೈಯುವ ಪ್ರಕರಣಗಳನ್ನು ತಡೆಯಲು ಕಾನೂನು ಕ್ರಮಗಳ ಸಲಹೆ ನೀಡಲಿದೆ. ಈ ಸಮಿತಿಯು ಸಚಿವರ ಸಮಿತಿಗೆ ವರದಿ ನೀಡಲಿದ್ದು, ಸಚಿವರ ಸಮಿತಿಯು ಪ್ರಧಾನಿ ನರೇಂದ್ರ ಮೋದಿಗೆ ವರದಿ ಮಾಡಲಿದೆ.
ಅಲ್ವಾರ್ ಥಳಿತ ಪ್ರಕರಣ ತನಿಖೆಗೆ ಆದೇಶ
ರಾಜಸ್ಥಾನದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಅಕºರ್ ಖಾನ್ ಅವರನ್ನು ಥಳಿಸಿ ಹತ್ಯೆಗೈದ ಪ್ರಕರಣ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಸಂಸತ್ತಲ್ಲೂ ವಿಷಯ ಪ್ರಸ್ತಾವಿಸಿದ ಕಾಂಗ್ರೆಸ್ ಸಂಸದ ಕರಣ್ ಸಿಂಗ್, ಗೋ ರಕ್ಷಕರು ಎಂದು ಹೇಳಿಕೊಳ್ಳುವವರು ಈ ಕೊಲೆಯ ಹಿಂದಿದ್ದಾರೆ ಎಂದು ಆರೋಪಿಸಿದರು. ಈ ಹೇಳಿಕೆಗೆ ಬಿಜೆಪಿ ಸಂಸದರು ಪ್ರತಿಭಟಿಸಿದ್ದಲ್ಲದೆ, ಆರೋಪಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲು ವಿಳಂಬ ಮಾಡಿದ ಪೊಲೀಸರ ಕ್ರಮಕ್ಕೆ ಬಿಜೆಪಿ ಸಂಸದರೂ ಆಕ್ಷೇಪ ವ್ಯಕ್ತಪಡಿಸಿದರು.
ರಾಹುಲ್ ವರ್ಸಸ್ ಗೋಯಲ್: ಇನ್ನೊಂದೆಡೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಬಿಜೆಪಿ ವಿರುದ್ಧ ಹರಿಹಾಯ್ದಿದ್ದು, ಕೇವಲ 6 ಕಿ.ಮೀ ದೂರದಲ್ಲಿರುವ ಆಸ್ಪತ್ರೆಗೆ ಸಂತ್ರಸ್ತನನ್ನು ಕರೆದೊಯ್ಯಲು 3 ತಾಸು ಯಾಕೆ ವಿಳಂಬವಾಯಿತು? ಯಾಕೆಂದರೆ ಅವರು ಚಹಾ ಕುಡಿಯುತ್ತ ಕುಳಿತಿದ್ದರು. ಇದು ಮೋದಿಯ ನವ ಭಾರತ. ಇಲ್ಲಿ ಮಾನವೀಯತೆಯ ಬದಲಿಗೆ ದ್ವೇಷವಿದೆ. ಇಲ್ಲಿ ಜನರನ್ನು ಥಳಿಸಿ ಸಾಯಿಸಲಾಗುತ್ತದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಗೋಯೆಲ್, ಅಲ್ವಾರ್ ಘಟನೆಯಲ್ಲಿ ಕಠಿನ ಹಾಗೂ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವುದಾಗಿ ರಾಜ್ಯ ಭರವಸೆ ನೀಡಿದೆ. ಎಂದು ಹೇಳಿದ್ದಾರೆ.
ನಡೆದಿದ್ದೇನು?
ಕಳೆದ ಶನಿವಾರ ಹರ್ಯಾಣದ ಮೇವತ್ ಜಿಲ್ಲೆಯ ಡೈರಿ ಮಾಲಕ ಅಕºರ್ ಖಾನ್‌ರನ್ನು ಜಾನುವಾರು ಕಳ್ಳಸಾಗಣೆ ಆರೋಪದಲ್ಲಿ ರಾಜಸ್ಥಾನದ ಅಲ್ವಾರ್‌ನಲ್ಲಿ ಏಳು ಜನರ ಗುಂಪು ಥಳಿಸಿತ್ತು. ಘಟನೆ ಮಧ್ಯರಾತ್ರಿ ನಡೆದಿದ್ದು, ಪೊಲೀಸರು ಬೆಳಗಿನ ಜಾವ 3 ಗಂಟೆಗೆ ಸ್ಥಳಕ್ಕೆ ತಲುಪಿದ್ದರು. ಖಾನ್‌ನನ್ನು ನೇರವಾಗಿ ಪೊಲೀಸರು ಆಸ್ಪತ್ರೆಗೆ ಕೊಂಡೊಯ್ಯದೇ, ಅಲ್ಲಿದ್ದ ಜಾನುವಾರುಗಳನ್ನು ಕಳುಹಿಸಲು ವಾಹನ ವ್ಯವಸ್ಥೆ ಮಾಡಿ, ಚಹಾ ಕುಡಿದು ಹೊರಟಿದ್ದರು. ಇದರಿಂದಾಗಿ 6 ಕಿ.ಮೀ. ದೂರದಲ್ಲಿರುವ ಆಸ್ಪತ್ರೆಗೆ ತೆರಳಲು 3 ತಾಸು ವಿಳಂಬವಾಗಿತ್ತು. ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆಯೇ ಆಂತರಿಕ ರಕ್ತಸ್ರಾವದಿಂದ ಅಕ್ಬರ್ ಸಾವನ್ನಪ್ಪಿದ್ದರು. ಘಟನೆ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ವಿಳಂಬವಾಗಿರುವುದಕ್ಕೆ ಪೊಲೀಸರ ಮೇಲೂ ಕ್ರಮ ಕೈಗೊಳ್ಳಲಾಗಿದೆ.
ಮಹಿಳೆ ಥಳಿಸಿ ಹತ್ಯೆ: 12 ಮಂದಿ ಬಂಧನ
ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಭೋಶ್ ಗ್ರಾಮದಲ್ಲಿ ಮಕ್ಕಳ ಕಳ್ಳತನದ ಶಂಕೆಯ ಮೇಲೆ ಮಹಿಳೆಯನ್ನು ಜನರು ಥಳಿಸಿ ಸಾಮೂಹಿಕವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ 12 ಜನರನ್ನು ಬಂಧಿಸಲಾಗಿದೆ. 25ರಿಂದ 30 ವರ್ಷದ ಮಹಿಳೆ ಮಾನಸಿಕ ಅಸ್ವಸ್ಥೆಯಂತೆ ಕಾಣಿಸುತ್ತಿದ್ದಳು. ಇನ್ನೂ ಆಕೆಯ ಗುರುತು ಪತ್ತೆಯಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ
Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ
ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್ ವಿರುದ್ಧ ತಿರುಗಿ ಬಿದ್ದ ಸಂತರು
Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಗೆ
Chandigarh: ಅಂಬೇಡ್ಕರ್ ಕುರಿತು ವಿವಾದ: ಚಂಡೀಗಢ ಪಾಲಿಕೆಯಲ್ಲಿ ತಳ್ಳಾಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
Bus Service launch: ಮಂಗಳೂರು, ಕುಂದಾಪುರಕ್ಕೆ “ಅಂಬಾರಿ ಉತ್ಸವ’
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
Rohit Sharma: ತನುಷ್ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ
Central Office: 49 ಹೊಸ ತಾಲೂಕಿಗೆ “ಪ್ರಜಾ ಸೌಧ’ ಸಂಕೀರ್ಣ ಯಾವಾಗ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.