ಆರ್‌ಬಿಐ ಸ್ವಾಧೀನಕ್ಕೆ ಯತ್ನಿಸುತ್ತಿರುವ ಮೋದಿ ಸರಕಾರ: ಚಿದಂಬರಂ
Team Udayavani, Nov 8, 2018, 4:06 PM IST
ಹೊಸದಿಲ್ಲಿ : ಕೇಂದ್ರದಲ್ಲಿನ ಮೋದಿ ಸರಕಾರ 2019ರ ಲೋಕಸಭಾ ಚುನಾವಣೆಗೆ ಮುನ್ನ ಭಾರತೀಯ ರಿಸರ್ವ್ ಬ್ಯಾಂಕನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಇಂದು ಗುರುವಾರ ಆರೋಪಿಸಿದ್ದಾರೆ.
ಒಂದೊಮ್ಮೆ ಮೋದಿ ಸರಕಾರ ಆರ್‌ಬಿಐ ಅನ್ನು ತನ್ನ ವಶಕ್ಕೆ ತೆಗೆದುಕೊಂಡದ್ದೇ ಆದಲ್ಲಿ ಅದು ದೇಶಕ್ಕೆ ಮತ್ತು ದೇಶದ ಆರ್ಥಿಕತೆಗೆ ವಿನಾಶಕಾರಿಯಾದೀತು ಎಂದು ಚಿದಂಬರಂ ಎಚ್ಚರಿಸಿದ್ದಾರೆ.
ಮೋದಿ ಸರಕಾರ ಮತ್ತು ಆರ್‌ಬಿಐ ನಡುವಿನ ಜಟಾಪಟಿ ಈಚೆಗೆ ಬಹಿರಂಗವಾಗುತ್ತಲೇ ಚಿದಂಬರಂ ಅವರು, “ಮೋದಿ ಸರಕಾರ ಆರ್‌ಬಿಐ ಸ್ವಾಯತ್ತೆಯನ್ನು ಹೊಸಕಿ ಹಾಕಲು ಯತ್ನಿಸುತ್ತಿದೆ’ ಎಂದು ಆರೋಪಿಸಿದ್ದರು.
”ಕೇಂದ್ರ ಸರಕಾರ ಈ ಹಿಂದೆ ಯಾವತ್ತೂ ಸಾರ್ವಜನಿಕ ಮತ್ತು ಆರ್ಥಿಕತೆ ಹಿತಾಸಕ್ತಿ ಕಾಪಿಡುವ ನೆಪದಲ್ಲಿ ಆರ್‌ಬಿಐ ಗೆ ನಿರ್ದೇಶ ನೀಡುವ ತನ್ನ ಕಾನೂನು ಅಧಿಕಾರವನ್ನು ಪ್ರಯೋಗಿಸಿದ್ದೇ ಇಲ್ಲ; ಈಗ ಮೋದಿ ಸರಕಾರ ಅದನ್ನು ಮಾಡುತ್ತಿದೆ ಎಂದು ಚಿದಂಬರಂ ಟೀಕಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.