ಸಿಇಯುಟಿ: ಎರಡನೇ ದಿನವೂ ಮುಂದುವರಿದ ಸಮಸ್ಯೆ
Team Udayavani, Aug 18, 2022, 8:52 PM IST
ನವದೆಹಲಿ: ಸಿಇಯುಟಿ-ಯುಜಿ ನಾಲ್ಕನೇ ಹಂತದ ಪರೀಕ್ಷೆ ದೇಶದಲ್ಲಿ ನಡೆಯುತ್ತಿದ್ದು, ಬುಧವಾರದಂತೆಯೇ ಗುರುವಾರವೂ ಅನೇಕ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಸಮಸ್ಯೆ ಉಂಟಾಗಿದೆ.
ಕೊನೇ ಕ್ಷಣದಲ್ಲಿ ಸಿಇಯುಟಿ ಪರೀಕ್ಷಾ ಕೇಂದ್ರಗಳನ್ನೇ ಬದಲಾಯಿಸಲಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. “ನಾನು ಪರೀಕ್ಷಾ ಕೇಂದ್ರವಾಗಿ ಆಯ್ಕೆ ಮಾಡಿದ್ದೇ ಬೇರೆ. ಮೊದಲಿಗೆ ನನಗೆ ನನ್ನ ಆಯ್ಕೆಯ ನಗರದಲ್ಲೇ ಪರೀಕ್ಷಾ ಕೇಂದ್ರ ತೋರಿಸಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಪ್ರವೇಶ ಪತ್ರದಲ್ಲಿ 150ಕಿ.ಮೀ. ದೂರದ ಕೇಂದ್ರವನ್ನು ಕೊಡಲಾಗಿದೆ’ ಎಂದು ದೂರಿದ್ದಾರೆ ಅಭ್ಯರ್ಥಿ ನೇಹಾ. ಬುಧವಾರ ಸಂಜೆಯವರೆಗೂ ಇದ್ದ ಪರೀಕ್ಷಾ ಕೇಂದ್ರಗಳನ್ನು ಪರೀಕ್ಷೆಯ ದಿನ ಬೆಳಗ್ಗೆ ಬದಲಾಯಿಸಲಾಗಿದೆ ಎಂದು ಅನೇಕ ಅಭ್ಯರ್ಥಿಗಳು ದೂರಿದ್ದಾರೆ.
ಬುಧವಾರ ಕೂಡ 13 ಪರೀಕ್ಷಾ ಕೇಂದ್ರಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ 8,600 ಅಭ್ಯರ್ಥಿಗಳಿಗೆ ತೊಂದರೆಯಾಗಿತ್ತು. ಆ ಅಭ್ಯರ್ಥಿಗಳಿಗೆ ಆ.25ರಂದು ಮರುಪರೀಕ್ಷೆ ಮಾಡುವುದಾಗಿ ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ತಿಳಿಸಿದೆ. ಸಿಯುಇಟಿ ನಾಲ್ಕನೇ ಹಂತದ ಪರೀಕ್ಷೆ ಆ.17ರಿಂದ 20ರವರೆಗೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
MUST WATCH
ಹೊಸ ಸೇರ್ಪಡೆ
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.