ಚಬಾಹರ್ ಬಂದರು ಲೋಕಾರ್ಪಣೆ: ಪಾಕ್, ಚೀನಗೆ ತಕ್ಕ ಪಾಠ
Team Udayavani, Dec 4, 2017, 11:11 AM IST
ಟೆಹರಾನ್: ಭಾರತ, ಇರಾನ್ ಹಾಗೂ ಅಫ್ಘಾನಿಸ್ಥಾನಗಳ ನಡುವಿನ ವಾಣಿಜ್ಯ ವ್ಯವಹಾರಗಳಿಗೆ ಹೊಸ ಆಯಾಮ ಕಲ್ಪಿಸುವ ಆಧುನಿಕ ಚಬಾಹರ್ ಬಂದರಿನ ಮೊದಲ ಹಂತವನ್ನು ಇರಾನ್ ಅಧ್ಯಕ್ಷ ಹಸನ್ ರೌಹಾನಿ ರವಿವಾರ ಉದ್ಘಾಟಿಸಿದರು. ಈ ಸಮಾರಂಭದಲ್ಲಿ 27 ರಾಷ್ಟ್ರಗಳ ಗಣ್ಯರು ಭಾಗವಹಿಸಿದ್ದರು. ಇರಾನ್, ಭಾರತ, ಅಫ್ಘಾನಿಸ್ಥಾನ, ಕತಾರ್, ಪಾಕಿಸ್ಥಾನದ ಹಲವಾರು ಅಧಿ ಕಾರಿಗಳು ಈ ಸಮಾರಂಭಕ್ಕೆ ಸಾಕ್ಷಿಯಾದರು. 2016ರ ಮೇ ತಿಂಗಳಿನಲ್ಲಿ ಇರಾನ್‌ನ ಟೆಹರಾನ್‌ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಅಘಾನಿಸ್ಥಾನ, ಇರಾನ್ ಜತೆ ತ್ರಿಪಕ್ಷೀಯ ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅದರ ಫಲವಾಗಿಯೇ ಈ ಹಿಂದೆ ಅಲ್ಪ ಸಾಮ ರ್ಥ್ಯದ ಬಂದರು ಈಗ ಅಭಿವೃದ್ಧಿಗೊಂಡು ದೊಡ್ಡ ಬಂದರಾಗಿ ಮಾರ್ಪಟ್ಟಿದೆ.
ಭಾರತಕ್ಕೇನು ಲಾಭ?
ಅಫ್ಘಾನಿಸ್ಥಾನ, ಇರಾನ್ ಸೇರಿದಂತೆ ಮಧ್ಯ ಏಷ್ಯಾ ದೊಂದಿಗೆ ವ್ಯಾಪಾರ ವಹಿವಾಟು ನಡೆಸಲು ಭಾರತಕ್ಕೆ ಮತ್ತೂಂದು ಮುಕ್ತ ಮಾರ್ಗ ಸಿಕ್ಕಂತಾಗಿದೆ. ಈವರೆಗೆ ಭೂಮಾರ್ಗದ ಮೂಲಕ ಅಫ್ಘಾನಿಸ್ಥಾನ, ಇರಾನ್‌ಗೆ ಭಾರತವು ತನ್ನ ಸಾಮಗ್ರಿಗಳನ್ನು ಪಾಕಿಸ್ಥಾನದ ಮೂಲಕವೇ ಸರಬರಾಜು ಮಾಡ ಬೇಕಿತ್ತು. ಇನ್ನು ಮುಂದೆ ಪಾಕಿಸ್ಥಾನದ ಹಂಗಿಲ್ಲದೆ ಭಾರತ ನೇರವಾಗಿ ಇರಾನ್, ಅಫ್ಘಾನಿಸ್ಥಾನಗಳಿಗೆ ತನ್ನ ಸರಕನ್ನು ಭಾರತ ತಲುಪಿಸಬಹುದು. ಅತ್ತ, ಇರಾನ್ ಹಾಗೂ ಅಫ್ಘಾನಿಸ್ಥಾನಗಳಿಗೆ ಭಾರತ ಸೇರಿದಂತೆ ಪೂರ್ವ ಏಷ್ಯಾ ಜತೆಗಿನ ವಾಣಿಜ್ಯ ವ್ಯವಹಾರಗಳಿಗೆ ಪಾಕಿಸ್ಥಾನವನ್ನು ಅವಲಂಬಿಸ ಬೇಕಿಲ್ಲ. ಹಾಗಾಗಿಯೇ, ಹೊಟ್ಟೆ ಉರಿದುಕೊಂಡಿದ್ದ ಪಾಕಿಸ್ಥಾನ, ಈ ಯೋಜನೆಗೆ ಅಪಸ್ವರ ತೆಗೆದಿತ್ತು. ಈ ಊಳಿಗೆ ಚೀನ ಸಹ ದನಿಗೂಡಿಸಿತ್ತು. ಇದರ ನಡುವೆಯೂ ಈ ಯೋಜನೆ ಜಾರಿಯಾಗಿರುವುದು ಇವರಿಬ್ಬರಿಗೂ ಭಾರತ ಸಡ್ಡು ಹೊಡೆದಂತಾಗಿದೆ.
ತಿಳಿಯಲೇಬೇಕಾದ ವಿಚಾರ
ಉದ್ಘಾಟನೆಗೊಂಡಿರುವ ಚಬಾಹರ್ ಬಂದರಿನ ಮೊದಲ ಹಂತಕ್ಕೆ ಶಾಹೀದ್ ಬೆಹಸ್ತಿ ಬಂದರು ಎಂದು ಹೆಸರು. ಮೊದಲ ಹಂತದ ಯೋಜನೆಗೆ ಖರ್ಚಾಗಿರುವ ಭಾರತದ ಪಾಲು ಅಂದಾಜು 3,226 ಕೋಟಿ ರೂ. ಶಾಹೀದ್ ಬೆಹಸ್ತಿಯ ಹಡಗು ನಿಲ್ಲಿಸುವ ಎರಡು ಬರ್ತ್‌ಗಳು 10 ವರ್ಷಗಳವರೆಗೆ ಭಾರತದಿಂದಲೇ ನಿರ್ವಹಣೆ. ತನ್ನ ಸಹಭಾಗಿತ್ವದ ಅಂತಾರಾಷ್ಟ್ರೀಯ ಬಂದರು ನಿರ್ವಹಣೆಗಾಗಿಯೇ ಇಂಡಿಯಾ ಗ್ಲೋಬಲ್ ಪೋರ್ಟ್ಸ್ ಲಿಮಿಟೆಡ್ (ಐಜಿಪಿಎಲ್) ಸ್ಥಾಪನೆ
6,452 ಕೋಟಿ ರೂ. ಮೊದಲ ಹಂತದ ಅಭಿವೃದ್ಧಿ ಯೋಜನೆಗೆ ಖರ್ಚಾಗಿರುವ ಹಣ.
3,226 ಕೋಟಿ ರೂ. ಬಂದರು ಅಭಿವೃದ್ಧಿಯಲ್ಲಿ ಭಾರತ ಮಾಡಿರುವ ಹೂಡಿಕೆ
8.5 ಮಿ. ಟನ್ ನಿರೀಕ್ಷಿಸಲಾಗಿರುವ ವಾರ್ಷಿಕ ಸರಕು ಸಾಗಣೆ
549 ಕೋಟಿ ರೂ. ಬಂದರಿನ ಮೊದಲೆರಡು ಬರ್ತ್‌ಗಳ ನಿರ್ವಹಣೆಗೆ ಭಾರತ ಮಾಡಬೇಕಿರುವ ಖರ್ಚು
148 ಕೋಟಿ ರೂ. ಮೊದಲ ಹಂತದ ಬಂದರಿನಿಂದ ಭಾರತ ನಿರೀಕ್ಷಿಸಿರುವ ವಾರ್ಷಿಕ ಆದಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.