ಪಂಜಾಬ್ ಕಾಂಗ್ರೆಸ್ ಗೆ ಶಾಕ್ ಮೇಲೆ ಶಾಕ್ : ಹಲವು ನಾಯಕರು ಬಿಜೆಪಿಗೆ
Team Udayavani, Jun 4, 2022, 5:48 PM IST
ಚಂಡೀಗಢ : ಪಂಜಾಬ್ ನಲ್ಲಿ ವಿಧಾನಸಭಾ ಚುನಾವಣೆ ಮುಗಿದು ಆಮ್ ಆದ್ಮಿ ಸರಕಾರ ಅಧಿಕಾರಕ್ಕೆ ಬಂದಿದ್ದರೂ ರಾಜಕೀಯ ನಾಯಕರ ಪಕ್ಷಾಂತರ ಮುಂದುವರೆದಿದ್ದು, ಶನಿವಾರ ಹಲವು ಪ್ರಮುಖ ಕಾಂಗ್ರೆಸ್ ನಾಯಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಕಾಂಗ್ರೆಸ್ ಮುಖಂಡರಾದ ರಾಜ್ ಕೆ. ವರ್ಕಾ, ಗುರುಪ್ರೀತ್ ಎಸ್. ಕಂಗರ್, ಬಲ್ಬೀರ್ ಸಿಧು, ಕೇವಲ್ ಎಸ್ ಧಿಲ್ಲೋನ್, ಸುಂದರ್ ಶಾಮ್ ಅರೋರಾ, ಕಮಲಜೀತ್ ಎಸ್ ಧಿಲ್ಲೋನ್, ಮತ್ತು ಶಿರೋಮಣಿ ಅಕಾಲಿ ದಳದ ನಾಯಕರಾದ ಬೀಬಿ ಮೊಹಿಂದರ್ ಕೌರ್ ಜೋಶ್ ಮತ್ತು ಸರೂಪ್ ಚಂದ್ ಸಿಂಗ್ಲಾ, ಮೊಹಾಲಿ ಮೇಯರ್ ಅಮರ್ಜಿತ್ ಎಸ್ ಸಿಧು ಅವರೊಂದಿಗೆ ಪಕ್ಷದ ಕಚೇರಿಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಮುಖ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಹಿರಿಯ ನಾಯಕ ಸುನೀಲ್ ಜಾಖಡ್ ಅವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ನಾನು 30-32 ವರ್ಷದಿಂದ ಕಾಂಗ್ರೆಸ್‌ನಲ್ಲಿದ್ದೆ. ಈಗ ನನಗೆ 60 ವರ್ಷ ವಯಸ್ಸಾಗಿದೆ, ಪಕ್ಷಕ್ಕಾಗಿ ನನ್ನ ರಕ್ತ ಮತ್ತು ಬೆವರಿನಿಂದ ಕೆಲಸ ಮಾಡಿದ್ದೇನೆ, ಆದರೆ ಕಾಂಗ್ರೆಸ್ ತನ್ನ ಕಾರ್ಯಕರ್ತರನ್ನು ಗುರುತಿಸುವುದಿಲ್ಲ. ಮೋದಿ ಜಿ ಮತ್ತು ಅಮಿತ್ ಶಾ ಜಿ ಕೆಲಸ ಮಾಡುವ ರೀತಿ, ಅವರು ತಮ್ಮ ಕಾರ್ಯಕರ್ತರಿಗೆ ಮನ್ನಣೆ ನೀಡುತ್ತಾರೆ ಎಂದು ಬಲ್ಬೀರ್ ಸಿಂಗ್ ಸಿಧು ಹೇಳಿದ್ದಾರೆ.
ಅನುಭವಿ ನಾಯಕರು ಮತ್ತು ಕಾರ್ಯಕರ್ತರು ಪಕ್ಷವನ್ನು ಏಕೆ ತೊರೆಯುತ್ತಿದ್ದಾರೆ ಎಂಬುದನ್ನು ಕಾಂಗ್ರೆಸ್ ನೋಡಬೇಕು. ಅವರು ದೇಶಕ್ಕೆ ನಿಷ್ಠೆಯನ್ನು ಪ್ರತಿಜ್ಞೆ ಮಾಡಲು ಮತ್ತು ಪಕ್ಷದ ನ್ಯೂನತೆಗಳನ್ನು ತೆಗೆದುಹಾಕಲು ಸಾಧ್ಯವಾಗದಿದ್ದರೆ, ಅವರು ಪ್ರತಿಪಕ್ಷದ ಸ್ಥಾನಮಾನವನ್ನು ಕಳೆದುಕೊಳ್ಳಬಹುದು ಎಂದು ಬಿಜೆಪಿ ನಾಯಕ ಸುನೀಲ್ ಜಾಖಡ್ ಹೇಳಿದರು.
ಮೇ 29 ರಂದು ಮಾನ್ಸಾ ಜಿಲ್ಲೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಕುಟುಂಬ ಸದಸ್ಯರು ಚಂಡೀಗಢದಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahakumbh Mela: ಮಕರ ಸಂಕ್ರಾಂತಿಯಂದು ಮಹಾಕುಂಭದಲ್ಲಿ ಸಾಧು ಸಂತರ ಶಾಹಿ ಸ್ನಾನ
V Narayanan: ಇಸ್ರೋ ನೂತನ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ನಾರಾಯಣನ್ ಅಧಿಕಾರ ಸ್ವೀಕಾರ
Lok Sabha result:ಜುಕರ್‌ಬರ್ಗ್ ಸುಳ್ಳು ಬಯಲು ಮಾಡಿದ ಅಶ್ವಿನಿ ವೈಷ್ಣವ್
Mahakumbh; ಕುಂಭದಲ್ಲಿ ಒಂದೇ ದಿನ 1.5 ಕೋಟಿ ಜನ ಪುಣ್ಯ ಸ್ನಾನ
Ladakh ಗಡಿಯ ಬಳಿ ಚೀನಾ ಯುದ್ಧಾಭ್ಯಾಸ: ಭಾರತ ಸೇನೆ ಅಲರ್ಟ್
MUST WATCH
ಹೊಸ ಸೇರ್ಪಡೆ
Mahakumbh Mela: ಮಕರ ಸಂಕ್ರಾಂತಿಯಂದು ಮಹಾಕುಂಭದಲ್ಲಿ ಸಾಧು ಸಂತರ ಶಾಹಿ ಸ್ನಾನ
Bengaluru: ಸಿಲಿಂಡರ್ ಸ್ಫೋ*ಟ; ಮಗು ಸೇರಿ ಐವರಿಗೆ ಗಾಯ
Bengaluru: ಗಣರಾಜ್ಯೋತವ ವೇಳೆ ಬಾಂ*ಬ್ ಸ್ಪೋ*ಟ ಹುಸಿ ಕರೆ; ಆರೋಪಿ ಸೆರೆ
Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು?
V Narayanan: ಇಸ್ರೋ ನೂತನ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ನಾರಾಯಣನ್ ಅಧಿಕಾರ ಸ್ವೀಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.