ವಿಕ್ರಮ್ ಲ್ಯಾಂಡರ್ ಜೊತೆ ಸಂವಹನಕ್ಕೆ ನಾಸಾ ಸಹಾಯ
Team Udayavani, Sep 13, 2019, 5:00 AM IST
ನವದೆಹಲಿ: ಸೆ.7ರಂದು ಚಂದ್ರನ ಮೇಲೆ ಇಳಿಯುವಾಗ ಇಸ್ರೋದ ಸಂವಹನ ಕಳೆದುಕೊಂಡಿರುವ ವಿಕ್ರಮ್ ಲ್ಯಾಂಡರ್ ಜೊತೆ ಸಂವಹನ ಸಾಧಿಸಲು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ನೆರವು ನೀಡುತ್ತಿದೆ. ತನ್ನ ಡೀಪ್ ಸ್ಪೇಸ್ ನೆಟ್ವರ್ಕ್‌ನಿಂದ ಸಂಕೇತಗಳನ್ನು ವಿಕ್ರಮ್ ಕಡೆಗೆ ಕಳುಹಿಸುತ್ತಿದ್ದು, ಈ ಸಂಕೇತಕ್ಕೆ ವಿಕ್ರಮ್ ಪ್ರತಿಕ್ರಿಯಿಸುವ ನಿರೀಕ್ಷೆ ವ್ಯಕ್ತಪಡಿಸಿದೆ.
ಸೆ 20-21 ರವರೆಗೂ ಈ ಭಾಗದಲ್ಲಿ ಸೂರ್ಯನ ಬೆಳಕು ಇರುವುದರಿಂದ ಅಲ್ಲಿಯವರೆಗೆ ಪ್ರಯತ್ನ ನಡೆಸಲಾಗುತ್ತದೆ ಎಂದು ಇಸ್ರೋದ ವಿಜ್ಞಾನಿಯೊಬ್ಬರು ಹೇಳಿದ್ದಾರೆ.
ಸೆರ್ಜೆ ಹರೋಶೆ ವಿಶ್ವಾಸ: ಈ ಮಧ್ಯೆ ಇಸ್ರೋ ಹೇಗಾದರೂ ವಿಕ್ರಮ್ ಜೊತೆಗೆ ಸಂವಹನ ನಡೆಸಲು ಯಶಸ್ವಿಯಾಗಲಿದೆ ಎಂದು ನೊಬೆಲ್ ಪುರಸ್ಕೃತ ಭೌತವಿಜ್ಞಾನಿ ಸೆರ್ಜೆ ಹರೋಶೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಮಸ್ಯೆಯನ್ನು ಇಸ್ರೋ ಪರಿಹರಿಸಲಿದೆ ಎಂದು ನಾನು ಭಾವಿಸುತ್ತೇನೆ. ಮುಂದಿನ ಬಾರಿ ಪ್ರಯೋಗದಲ್ಲಿ ಯಶಸ್ವಿಯಾಗಬೇಕು ಎಂದಾದರೆ, ಇಸ್ರೋ ಈ ಬಾರಿ ಕಲಿತುಕೊಳ್ಳಬೇಕಿದೆ. ವಿಕ್ರಮ್ ಲ್ಯಾಂಡರ್‌ನಲ್ಲಿ ಯಾವ ಸಮಸ್ಯೆಯಾಗಿದೆ ಎಂಬುದು ತಿಳಿದಿಲ್ಲ . ಆದರೆ ಕೊನೆಯ ಕ್ಷಣದವರೆಗೂ ಸರಿಯಾಗಿಯೇ ಕೆಲಸ ಮಾಡುತ್ತಿತ್ತು. ಮಾಧ್ಯಮದಲ್ಲಿ ಈ ಬಗ್ಗೆ ಭಾರಿ ನಿರೀಕ್ಷೆ ಮೂಡಿದ್ದರಿಂದ ಇಸ್ರೋಗೆ ಒತ್ತಡವೂ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.
ನಿರೀಕ್ಷೆಗಿಂತ ಉತ್ತಮ ಫಲಿತಾಂಶ: ಲ್ಯಾಂಡರ್ ಜೊತೆ ಸಂವಹನ ಕಳೆದುಕೊಂಡರೂ ಒಟ್ಟು ಚಂದ್ರಯಾನ ಯೋಜನೆಯಿಂದ ಉತ್ತಮ ಫಲಿತಾಂಶ ಸಾಧಿಸಲು ಇಸ್ರೋಗೆ ಸಾಧ್ಯವಿದೆ ಎಂದು ಇಸ್ರೋ ಮಾಜಿ ಮುಖ್ಯಸ್ಥ ಎ.ಎಸ್.ಕಿರಣ್ ಕುಮಾರ್ ಹೇಳಿದ್ದಾರೆ. ಅಂತಿಮ ಲ್ಯಾಂಡಿಂಗ್ ಚಟುವಟಿಕೆ ಹೊರತುಪಡಿಸಿ, ಇತರ ಎಲ್ಲ ಚಟುವಟಿಕೆಗಳೂ ಯಶಸ್ವಿಯಾಗಿ ನಡೆದಿವೆ. ಚಂದ್ರಯಾನ 1 ಕ್ಕೆ ಹೋಲಿಸಿದರೆ ಈ ಯೋಜನೆಯಲ್ಲಿ ಅತ್ಯಾಧುನಿಕ ಸಲಕರಣೆ ಅಳವಡಿಸಲಾಗಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.