ಚಂದ್ರಯಾನ 2 ಶೇ. 95ಯಶಸ್ವಿ ಯಾಕೆ?
Team Udayavani, Sep 9, 2019, 5:45 AM IST
ಮಣಿಪಾಲ: ಚಂದ್ರಯಾನ-2
3.84 ಕಿ.ಮೀ. ಕ್ರಮಿಸಿ, ಇಳಿಯುವ ಕಡೆಯ ಕೆಲವೇ ಸೆಕೆಂಡುಗಳ ಅಂತರದಲ್ಲಿ ಸಂಪರ್ಕ ಕಡಿದು ಕೊಂಡಿತು. ಇದರಿಂದ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಇಳಿದಿರಬಹುದೇ? ಅದಕ್ಕೆ ಏನಾಗಿರಬಹುದು? ಎಂಬ ಪ್ರಶ್ನೆಗಳ ನಡುವೆಯೇ ಚಂದ್ರಯಾನ -2 ಶೇ.95ರಷ್ಟು ಯಶಸ್ವಿಯಾಗಿದೆ. ಈ ಯೋಜನೆ ಯಶಸ್ವಿಯಾಗಲು ಕಾರಣವಾದ ಅಂಶಗಳು ಇಲ್ಲಿವೆ.
ಆರ್ಬಿಟರ್ ಸೇಫ್
ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ಆರ್ಬಿಟರ್ (ಉಪಗ್ರಹ) ಕಾರ್ಯನಿರ್ವಹಿಸುತ್ತಿದೆ. ಇದು ಮಾಹಿತಿ ಸಂಗ್ರಹಿಸಲಿದೆ. ಆದರೆ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಯದುದ್ದರಿಂದ ಶೇ.5ರಷ್ಟು ವಿಫಲವಾಗಿದೆ.
ಐಡಿಎಸ್‌ಎನ್ ಸಂಪರ್ಕ
ಆರ್ಬಿಟರ್‌ನಲ್ಲಿನ 8 ಪೇಲೋಡ್‌ಗಳು ಮುಂದಿನ 1 ವರ್ಷ ಕಾಲ ಸಂಗ್ರಹಿಸಿದ ಮಾಹಿತಿ ಇಂಡಿ ಯನ್ ಡೀಪ್ ಸ್ಪೇಸ್ ನೆಟÌರ್ಕ್ (IDSN) ಜತೆ ಹಂಚಿಕೊಳ್ಳಲಿದೆ.
ಆಯುಸ್ಸು ವೃದ್ಧಿ ಸಾಧ್ಯತೆ
ಆರ್ಬಿಟರ್ ಕನಿಷ್ಠ 1 ವರ್ಷ ಚಂದ್ರನಲ್ಲಿ ಅಧ್ಯಯನ ನಡೆಸುವಂತೆ ರೂಪಿಸಲಾ ತ್ತು. ಆದರೆ ಇದರಲ್ಲಿರುವ ಇಂಧನ ಮತ್ತು ರಚನೆಯಲ್ಲಿನ ಗುಣಮಟ್ಟ ದಿಂದಾಗಿ ಆಯುಷ್ಯ 7ರಿಂದ 7.6 ಇರಬಹುದು ಎಂದು ಹೇಳಲಾಗಿದೆ.
8 ಪೇಲೋಡ್
2379 ಕೆ.ಜಿ. ತೂಕದ ಆರ್ಬಿಟರ್ 8 ಪೇಲೋಡ್‌ಗಳೊಂದಿಗೆ (ವಿವಿಧ ಸಂಶೋಧನ ಉಪಕರಣಗಳು) ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿದೆ. ಇದು ಅಮೂಲ್ಯ ಮಾಹಿತಿಗಳನ್ನು ಸಂಗ್ರಹಿಸಲಿದೆ. ಇದು ಚಂದ್ರನ ನೆಲದಿಂದ ಕೇವಲ 100 ಕಿ.ಮೀ. ದೂರದಲ್ಲಿ ಸುತ್ತುತ್ತಿದೆ. ವಿಕ್ರಮ್ ಮತ್ತು ಪ್ರಗ್ಯಾನ್ ಎರಡೂ ಸೇರಿ 6 ಪೇಲೋಡ್ ಹೊಂದಿದ್ದವು.
8 ಪೇಲೋಡ್‌ಗಳ ಕೆಲಸವೇನು?
1. ಟೆರೈನ್ ಮ್ಯಾಪಿಂಗ್ ಕೆಮರಾ 2 ಹೊಂದಿದ್ದು, ಚಂದ್ರನ ಮೇಲ್ಮೆ„ಯ ಪ್ರಾಥಮಿಕ ಅಧ್ಯಯನ ಪರಿಭ್ರಮಣೆಯ ಮಾಹಿತಿ ನೀಡಲಿದೆ. 3ಡಿ ಮ್ಯಾಪಿಂಗ್‌ಗೆ ಇದು ಸಹಕಾರಿ.
2. ಸಾಫ್ಟ್ ಎಕ್ಸ್ ರೇ ಸ್ಪೆಕ್ಟೋಮೀಟರ್: ಇದು ಚಂದ್ರನಲ್ಲಿನ ಫೂÉರೋಸೆಂಟ್ ಅನ್ನು ಅಳೆಯಲಿದೆ. ಚಂದ್ರನಲ್ಲಿರುವ ವಿವಿಧ ಲೋಹಗಳ ಮಾಹಿತಿಯನ್ನು ಒದಗಿಸಲಿದೆ.
3. ಸೌರ ಎಕ್ಸ್ ರೇ ಮಾನಿಟರ್: ಸೂರ್ಯನಿಂದ ಬರುವ ವಿಕಿರಣ ಅಧ್ಯಯನ ಮಾಡಲಿದೆ. ಇದು ಭೂಮಿ ಮತ್ತು ಚಂದ್ರನಲ್ಲಿನ ಬಿಸಿಲಿನ ಪ್ರಮಾಣದ ಅಧ್ಯಯನಕ್ಕೆ ನೆರವಗಲಿದೆ.
4. ಆರ್ಬಿಟರ್ ಹೈ ರೆಸಲ್ಯೂಷನ್ ಕೆಮರಾ (OಏRಇ) ಚಂದ್ರನ ಅತ್ಯುತ್ತಮ ಗುಣಮಟ್ಟದ ಚಿತ್ರವನ್ನು ಸಂಗ್ರಹಿಸಲಿದೆ. ಚಂದ್ರನಲ್ಲಿನ ಎತ್ತರ ತಗ್ಗುಗಳು ಅಳೆಯಬಹುದಾಗಿದೆ.
5. ಐಆರ್ ಸ್ಪೆಕ್ಟೋಮೀಟರ್ ಇಮೇಜಿಂಗ್ ವ್ಯವಸ್ಥೆ ಹೊಂದಿದ್ದು, ಚಂದ್ರನಲ್ಲಿನ ಖನಿಜಗಳು ಮತ್ತು ಅವುಗಳ ಸರ್ವೇಕ್ಷಣೆ ಮಾಡಲಿದೆ.
6. ಡ್ಯುಯಲ್ ಫ್ರೀಕ್ವೆನ್ಸಿ ಸಿಂಥೆಟಿಕ್ ಅಪಾರ್ಚರ್ ರಾಡಾರ್: ಪ್ರಮುಖ ಧ್ರುವಗಳಲ್ಲಿ ಹೈ ರೆಸಲ್ಯೂಷನ್ ಸರ್ವೇಕ್ಷಣೆ ಮಾಡಲಿದೆ. ನೀರು, ಮಂಜುಗಡ್ಡೆ ಪ್ರಮಾಣ ಅಳೆಯಲಿದೆ.
7. ಅಟಾ¾ಸಿ#ಯರಿಕ್ ಕಂಪೋಸಿಶನಲ್ ಎಕ್ಸ್ ಪ್ಲೋರರ್: ಚಂದ್ರನಲ್ಲಿನ ಭೂಗೋಳದಂತಹ ವ್ಯವಸ್ಥೆ ರಚನೆ ಹೇಗಿದೆ ಎಂಬುದರ ಅಧ್ಯಯನ ನಡೆಸಲಿದೆ.
8. ಡ್ಯುಯಲ್ ಫ್ರೀಕ್ವೆನ್ಸಿ ರೇಡಿಯೋ ಸೈನ್ಸ್ ವ್ಯವಸ್ಥೆ ಇದೆ. ಇದು ಚಂದ್ರನಲ್ಲಿ ಎಲೆಕ್ಟ್ರಾನ್‌ನ ಸಾಂದ್ರತೆಯನ್ನು ಅಧ್ಯಯನ ಮಾಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mumbai Coast: ಗೇಟ್‌ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್ ಭೇಟಿ: 21ರಿಂದ ಮೋದಿ ಪ್ರವಾಸ
GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.