ಕೊನೆಗೂ ಸಂಪರ್ಕಕ್ಕೆ ಸಿಗದ ವಿಕ್ರಮ್; ಚಂದ್ರನ ಅಂಗಳದಲ್ಲಿ -200 ಡಿಗ್ರಿ ಸೆಲ್ಸಿಯಸ್ ಶೀತಗಾಳಿ
Team Udayavani, Sep 20, 2019, 11:12 AM IST
ಬೆಂಗಳೂರು/ನವದೆಹಲಿ: ಬಹುನಿರೀಕ್ಷೆಯ ಚಂದ್ರಯಾನ-2ನ ವಿಕ್ರಮ್ ಲ್ಯಾಂಡರ್ ಸಂಪರ್ಕಕ್ಕೆ ಇಸ್ರೋ ಹಾಗೂ ನಾಸಾ ಯತ್ನಿಸಿ ವಿಫಲವಾಗಿದ್ದು, ಈ ಮೂಲಕ ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಶಾಶ್ವತವಾಗಿ ಕಾರ್ಯನಿರ್ವಹಿಸದೆ ಅಂತ್ಯಕಾಣಲಿದೆ ಎಂದು ವರದಿ ತಿಳಿಸಿದೆ.
ವಿಕ್ರಮ್ ಲ್ಯಾಂಡರ್ ಇಳಿಯಲಿದ್ದ ಚಂದ್ರನಲ್ಲಿ ಪ್ರದೇಶದಲ್ಲಿ ಬರೋಬ್ಬರಿ ಮೈನಸ್ 200ಡಿಗ್ರಿ ಸೆಲ್ಸಿಯಸ್ ಶೀತಗಾಳಿ ಬೀಸುತ್ತಿತ್ತು. ಒಂದು ವೇಳೆ ಸೆಪ್ಟೆಂಬರ್ 7ರಂದು ಚಂದ್ರಯಾನ-2ರ ವಿಕ್ರಮ್ ಇಳಿದಿದ್ದರು ಕೂಡಾ ಅದು ಭೂಮಿಯ ಜತೆಗಿನ ಸಂಪರ್ಕ ಕಡಿತವಾಗುತ್ತಿತ್ತು. ಚಂದ್ರನಲ್ಲಿನ ಭಾರೀ ಶೀತಗಾಳಿಯಿಂದ ಲ್ಯಾಂಡರ್ ನ ಕಾರ್ಯ ಸ್ಥಗಿತಗೊಳ್ಳುವುದಾಗಿ ವರದಿ ವಿವರಿಸಿದೆ.
ಪ್ರಸ್ತುತ ವಿಕ್ರಮ್ ಲ್ಯಾಂಡರ್ ನ ಸ್ಥಿತಿಗತಿ ಹೇಗಿದೆ ಎಂಬುದರ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಖಚಿತಪಡಿಸಬೇಕಾಗಿದೆ. ಆದರೆ ಕೊನೆಯ ದಿನಗಳಲ್ಲಿ ಬಾಹ್ಯಾಕಾಶ ಸಂಸ್ಥೆ ವಿಕ್ರಮ್ ಲ್ಯಾಂಡರ್ ಜತೆಗಿನ ಮರು ಸಂಪರ್ಕದ ಭರವಸೆಯನ್ನು ಕಳೆದುಕೊಂಡಿತ್ತು. ಇದರೊಂದಿಗೆ ಆರು ಚಕ್ರವನ್ನೊಳಗೊಂಡ ಪ್ರಗ್ಯಾನ್ ರೋವರ್ ಕಾರ್ಯ ಕೂಡಾ ಅಂತ್ಯಗೊಂಡಂತಾಗಿದೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದ್ದ ವಿಕ್ರಮ್ ಲ್ಯಾಂಡರ್ ಅನ್ನು ಮರು ಸಂಪರ್ಕಿಸುವ 14 ದಿನಗಳ ಗುಡುವು ಇಂದಿಗೆ ಮುಕ್ತಾಯವಾಗಲಿದೆ. ಆದರೆ ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-2ರ ಯೋಜನೆಯಲ್ಲಿ ಯಶಸ್ವಿ ಸಾಧಿಸುವಲ್ಲಿ ಇಸ್ರೋ ವಿಜ್ಞಾನಿಗಳು ದೃಢ ವಿಶ್ವಾಸ ಹೊಂದಿದ್ದಾರೆ.
ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-2ರ ಮಿಷನ್ ನಲ್ಲಿ ಎಲ್ಲರೂ ನಮ್ಮ ಜತೆ ಬೆಂಬಲ ವ್ಯಕ್ತಪಡಿಸಿ ಹುರಿದುಂಬಿಸಿದ್ದಕ್ಕೆ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದೆ. ಚಂದ್ರಯಾನ-2ರ ಆರ್ಬಿಟರ್ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅದನ್ನು ಅಪ್ ಗ್ರೇಡ್ ಮಾಡುವುದಾಗಿ ಇಸ್ರೋ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.