ಆಗಸ್ಟ್‌ನಲ್ಲಿ ಚಂದ್ರಯಾನ-3
Team Udayavani, Feb 4, 2022, 8:20 AM IST
ಹೊಸದಿಲ್ಲಿ: ಮೂರನೇ ಚಂದ್ರಯಾನಕ್ಕೆ ಭಾರತ ಸಜ್ಜಾಗಿದೆ. ಇದೇ ಆಗಸ್ಟ್‌ನಲ್ಲಿ ಚಂದ್ರಯಾನ-3 ಉಡಾವಣೆ ಮಾಡುವುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನ ಕೇಂದ್ರ (ಇಸ್ರೋ) ಘೋಷಿಸಿದೆ.
ಚಂದ್ರಯಾನ ವಿಳಂಬ ಕುರಿತು ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ ಬಾಹ್ಯಾಕಾಶ ಇಲಾಖೆಯು ಚಂದ್ರಯಾನ-3ರ ದಿನಾಂಕವನ್ನು ಬಹಿರಂಗಪಡಿಸಿದೆ.
ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಕೊನೆಯ ಕ್ಷಣದ ಸಾಫ್ಟ್ ಲ್ಯಾಂಡಿಂಗ್ ವೇಳೆ ವಿಫಲವಾಗಿತ್ತು. ಇದಾದ ಎರಡು ವರ್ಷಗಳ ಬಳಿಕ ಈಗ ಈ ಯೋಜನೆಯಲ್ಲಿ ಕಲಿತ ಪಾಠಗಳು ಮತ್ತು ಜಾಗತಿಕ ತಜ್ಞರ ಸಲಹೆಗಳನ್ನು ಆಧರಿಸಿ ಚಂದ್ರಯಾನ-3ರ ಕೆಲಸ ಆರಂಭಿಸಲಾಗಿದೆ. ಅಗತ್ಯ ಪರೀಕ್ಷೆಗಳೆಲ್ಲ ಪೂರ್ಣಗೊಂಡಿದ್ದು, ಆಗಸ್ಟ್‌ನಲ್ಲಿ ಉಡಾವಣೆ ಮಾಡಲಾಗುವುದು ಎಂದು ಇಲಾಖೆ ಮಾಹಿತಿ ನೀಡಿದೆ.
ಇಸ್ರೋದಿಂದ 19 ಯೋಜನೆಗಳು:
ಕೊರೊನಾದಿಂದಾಗಿ ಹಲವು ಯೋಜನೆಗಳಿಗೆ ಅಡ್ಡಿ ಉಂಟಾಯಿತು. ಚಂದ್ರಯಾನ-3 ಕೂಡ ವಿಳಂಬವಾಯಿತು ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ| ಜಿತೇಂದ್ರ ಸಿಂಗ್ ಹೇಳಿದ್ದಾರೆ. ಪ್ರಸಕ್ತ ವರ್ಷ 19 ಉಡಾವಣೆಗಳನ್ನು ನಡೆಸಲು ಬಾಹ್ಯಾಕಾಶ ಇಲಾಖೆ ಚಿಂತನೆ ನಡೆಸಿದೆ. ಇಸ್ರೋ 8 ಉಡಾವಣ ವಾಹನಗಳು, 7 ಬಾಹ್ಯಾಕಾಶ ನೌಕೆಗಳು, 4 ತಂತ್ರಜ್ಞಾನ ಪ್ರದರ್ಶಕ ಮಿಷನ್‌ಗಳನ್ನು ಪೂರ್ಣಗೊಳಿಸಲು ನಿರ್ಧರಿಸಿದೆ. 2022ರ ಮೊದಲ ಉಡಾವಣೆಯು ದ್ವಿತೀಯ ವಾರದಲ್ಲೇ ನಡೆಯಲಿದೆ. ಆಗ ಭೂಪರಿವೀಕ್ಷಣ ಉಪಗ್ರಹ ರಿಸ್ಯಾಟ್-1ಎ ಉಡಾವಣೆಯಾಗಲಿದೆ ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.