ರೈಲ್ವೆಯಲ್ಲಿ ಹುದ್ದೆಗಳ ಹೆಸರು ಬದಲಾವಣೆ ಜಾಮ್‌ದಾರನಲ್ಲ, ಸಹಾಯಕ!
Team Udayavani, Feb 6, 2019, 12:30 AM IST
ಹೊಸದಿಲ್ಲಿ: ರೈಲ್ವೆ ಇಲಾಖೆಯಲ್ಲಿ ಬ್ರಿಟಿಷರ ಕಾಲದಿಂದಲೂ ಜಾರಿಯಲ್ಲಿದ್ದ ಧೋಬಿ, ಚೌಕಿದಾರ, ಹಮಾಲ, ಬಿಸ್ತಿ, ಕ್ಲೀನರ್, ಖಲಾಸಿ, ಪ್ಯೂನ್, ಕುಕ್, ವೇಟರ್ ಹಾಗೂ ಪೋರ್ಟರ್ ಸೇರಿದಂತೆ ವಿವಿಧ ಹುದ್ದೆಗಳ ಹೆಸರನ್ನು ಬದಲಿಸಲಾಗಿದೆ. ಇವರೆಲ್ಲರನ್ನೂ ಸಹಾಯಕರು (ಅಸಿಸ್ಟೆಂಟ್) ಎಂದು ಕರೆಯಲಾಗಿದೆ. ಲಕ್ಷಾಂತರ ಕೆಲಸಗಾರರನ್ನು ಹಿಂದಿನಿಂದಲೂ ಅವರು ಮಾಡುತ್ತಿದ್ದ ಕೆಲಸದ ವಿಧಾನದ ಮೇಲೆ ಗುರುತಿಸಲಾಗುತ್ತಿತ್ತು. ಹಲವು ಸುತ್ತಿನ ಸಲಹೆ ಮತ್ತು ಚರ್ಚೆಯ ಅನಂತರ ಈ ಬದಲಾವಣೆ ಮಾಡಲು ಕಳೆದ ತಿಂಗಳು ರೈಲ್ವೆ ಮಂಡಳಿ ಅಧಿಸೂಚನೆ ಹೊರಡಿಸಿತ್ತು.
ಕೆಲವು ಹುದ್ದೆಗಳ ಹೆಸರು ದೇಶದಲ್ಲಿ ರೈಲ್ವೆ ಅಸ್ತಿತ್ವಕ್ಕೆ ಬಂದ 1853 ರಿಂದಲೂ ಚಾಲ್ತಿಯಲ್ಲಿದೆ. ಇನ್ನೂ ಕೆಲವು ಹುದ್ದೆಗಳು ಈಗ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಆದರೆ ಹುದ್ದೆಗಳ ಹೆಸರು ಮಾತ್ರ ಬದಲಾವಣೆಯಾಗಿದ್ದು, ಈ ಹುದ್ದೆಯಲ್ಲಿರುವವರು ಮಾಡುವ ಕೆಲಸದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈಗಿನ ಕಾಲದಲ್ಲಿ ಈ ಹೆಸರುಗಳಿಂದ ತಮ್ಮನ್ನು ಗುರುತಿಸಿಕೊಳ್ಳಲು ಉದ್ಯೋಗಿಗಳು ಮುಜುಗರಪಡುತ್ತಿದ್ದರು. ಇದು ನೌಕರರ ಘನತೆಗೆ ತಕ್ಕುದಾದ್ದಲ್ಲ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ಈಗ ಕುಕ್, ವೇಟರ್‌ಗಳನ್ನು ಕೇಟರಿಂಗ್ ಅಸಿಸ್ಟೆಂಟ್‌ಗಳು ಎಂದು ಗುರುತಿಸಲಾಗುತ್ತದೆ. ಅದೇ ರೀತಿ ವಾಶ್ ಬಾಯ್‌ಗಳು, ಚಪಾತಿ ಮೇಕರ್, ಟೀ/ಕಾಫಿ ಮೇಕರ್, ಬಿಯರರ್ ಮತ್ತು ಕ್ಲೀನರ್‌ಗಳನ್ನು ಕ್ಯಾಂಟೀನ್ ಅಸಿಸ್ಟೆಂಟ್ ಎಂದು ಕರೆಯಲಾಗುತ್ತದೆ. ಫರ್ರಾಶ್, ಲಿಫ್ಟರ್, ಫೈಂಡರ್, ರೆಕಾರ್ಡ್ ಸಾರ್ಟರ್, ಸಂದೇಶವಾಹಕ ಹುದ್ದೆಗಳೆಲ್ಲ ಈಗ ಅಸ್ತಿತ್ವ ಕಳೆದುಕೊಂಡಿದ್ದು, ಇವರನ್ನು ಸಾಮಾನ್ಯ ಸಹಾಯಕರು ಎಂದು ಕರೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Enforcement Directorate: ಕ್ರಿಮಿನಲ್ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.