ಚಿದು ಕುಟುಂಬಕ್ಕೇ ಚಾರ್ಜ್
Team Udayavani, May 12, 2018, 8:27 AM IST
ಚೆನ್ನೈ: ವಿದೇಶಗಳಲ್ಲಿ ಹೊಂದಿರುವ ಆಸ್ತಿ ವಿವರ ನೀಡದೇ ಇರುವುದಕ್ಕೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ, ಪತ್ನಿ ನಳಿನಿ ಚಿದಂಬರಂ, ಪುತ್ರ ಕಾರ್ತಿ ಚಿದಂಬರಂ, ಸೊಸೆ ಶ್ರೀನಿಧಿ ವಿರುದ್ಧ ಆದಾಯ ತೆರಿಗೆ ಇಲಾಖೆ ಆರೋಪಪಟ್ಟಿ ಸಲ್ಲಿಸಿದೆ. ಕಪ್ಪುಹಣ (ಘೋಷಣೆ ಮಾಡದೇ ಇರುವ ವಿದೇಶಿ ಆದಾಯ ಮತ್ತು ಆಸ್ತಿ) ಮತ್ತು ತೆರಿಗೆ ಹೇರುವ ಕಾಯ್ದೆ 2015ರ ಅನ್ವಯ ಮಾಜಿ ಸಚಿವರು ಸೇರಿದಂತೆ ಪೂರ್ಣ ಕುಟುಂಬದ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ಚಿದಂಬರಂ ಪತ್ನಿ ನಳಿನಿ ಚಿದಂಬರಂ ಕೇಂಬ್ರಿಜ್‌ನಲ್ಲಿ ಹೊಂದಿರುವ 5.37 ಕೋಟಿ ರೂ., ಪುತ್ರ ಕಾರ್ತಿ ಹೊಂದಿರುವ 80 ಲಕ್ಷ ರೂ., ಸೊಸೆ ಶ್ರೀನಿಧಿ ಅಮೆರಿಕದಲ್ಲಿ ಹೊಂದಿರುವ 3.28 ಕೋಟಿ ರೂ. ಮೌಲ್ಯದ ಆಸ್ತಿ ವಿವರಗಳನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿಲ್ಲ ಎಂದು ಆರೋಪಿಸಲಾಗಿದೆ.
ಇದರ ಜತೆಗೆ ಸದ್ಯ ಕಾರಾಗೃಹದಲ್ಲಿರುವ ಕಾರ್ತಿ ಚಿದಂಬರಂ ಸಹ ಮಾಲಕತ್ವ ಹೊಂದಿರುವ ಚೆಸ್ ಗ್ಲೋಬಲ್ ಅಡ್ವೆ„ಸರಿ ಎಂಬ ಸಂಸ್ಥೆಯ ತೆರಿಗೆ ಮಾಹಿತಿಯನ್ನೂ ಸಲ್ಲಿಸಿಲ್ಲ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ. ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಕಳುಹಿಸ ಲಾಗಿದ್ದರೂ ಅವರು ಸಹಕರಿಸಿರಲಿಲ್ಲ. 2015ರಲ್ಲಿ ಈ ಕಾಯ್ದೆ ಜಾರಿಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್ಎಸ್ಎಸ್ ಕಾರಣ: ಶರದ್ ಪವಾರ್
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್ಪೋರ್ಟ್ ಎಷ್ಟು ಸದೃಢ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.