ಉ.ಪ್ರ ಬೋರ್ಡ್ ಪರೀಕ್ಷೆ : ಚೀಟಿಂಗ್ ಮಾಫಿಯಾ ವಿರುದ್ಧ NSA ಕೇಸು
Team Udayavani, Jan 8, 2019, 9:49 AM IST
ಲಕ್ನೋ : ಬೋರ್ಡ್ ಪರೀಕ್ಷೆಗಳಲ್ಲಿ ವಂಚನೆ ಮಾಡುವವರು ಮತ್ತು ಅವರಿಗೆ ಕುಮ್ಮಕ್ಕು ನೀಡುವವರನ್ನು ಅತ್ಯಂತ ಕಠಿನವಾದ ರಾಷ್ಟ್ರೀಯ ಭದ್ರತಾ ಕಾಯಿದೆಯಡಿ (ಎನ್‌ಎಸ್‌ಎ) ಶಿಕ್ಷಿಸಲಾಗುವುದು ಎಂದು ಉತ್ತರ ಪ್ರದೇಶ ಸರಕಾರ ಇಂದು ಹೇಳಿದೆ.
ಪರೀಕ್ಷೆ ಎದುರಿಸುವ ಸಹಸ್ರಾರು ಮಕ್ಕಳ ಭವಿಷ್ಯವನ್ನು ಉಳಿಸಲು ಬೋರ್ಡ್ ಪರೀಕ್ಷೆಗಳಲ್ಲಿ ವಂಚನೆ ನಡೆಸುವ ಮತ್ತು ಅವರಿಗೆ ಕುಮ್ಮಕ್ಕು ನೀಡುವವರ ವಿರುದ್ಧ ಎನ್‌ಎಸ್‌ಎ ಅಡಿ ಕಠಿನ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಈಗ ಒದಗಿದೆ; ಸರಕಾರ ಆ ಪ್ರಕಾರ ನಡೆದುಕೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಎಚ್ಚರಿಕೆ ನೀಡಿದರು.
ಪರೀಕ್ಷೆಗಳಲ್ಲಿ ಉತ್ತರ ಪತ್ರಿಕೆಯನ್ನು ಬದಲಾಯಿಸುವುದು, ಸಮೂಹ ನಕಲು ಮಾಡುವುದರ ವಿರುದ್ಧ ಇನ್ನು ಮುಂದೆ ಮುಲಾಜಿಲ್ಲದೆ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದವರು ಹೇಳಿದರು. ಉತ್ತರ ಪ್ರದೇಶದಲ್ಲಿ ಬೋರ್ಡ್ ಪರೀಕ್ಷೆಗಳು ಫೆ.7ರಂದು ಪ್ರಾರಂಭವಾಗಲಿದ್ದು 16 ಕೆಲಸದ ದಿನಗಳಲ್ಲಿ ಅದು ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚೆನ್ನೈ ಲೈಂಗಿಕ ಕಿರುಕುಳ ಕೇಸ್: ಎಸ್‌ಐಟಿ ತನಿಖೆಗೆ ಹೈಕೋರ್ಟ್ ಆದೇಶ
Pinarayi Vijayan: ಸಿಂಗ್ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ
Manmohan Singh ವಿಚಾರದಲ್ಲಿ ಕಾಂಗ್ರೆಸ್ ಅಗ್ಗದ ರಾಜಕಾರಣ ಮಾಡುತ್ತಿದೆ: ಬಿಜೆಪಿ
ED ಅಧಿಕಾರಿ ಒಳಗೊಂಡ ಲಂಚ ಪ್ರಕರಣ; ಸಿಬಿಐನಿಂದ ಮಧ್ಯವರ್ತಿ ಬಂಧನ
Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.