ಚೆನ್ನೈನಲ್ಲೂ ನದಿ ಕೆಳಗಿನ ಮೆಟ್ರೋ
Team Udayavani, May 11, 2023, 6:30 AM IST
ನದಿಯ ಕೆಳಗೆ ಮೆಟ್ರೋ ರೈಲು ಸಂಪರ್ಕ ದೇಶಕ್ಕೆ ಹೊಸತು. ಕೋಲ್ಕತಾದ ಹೂಗ್ಲಿ ನದಿಯ ಕೆಳಭಾಗದಲ್ಲಿ ದೇಶದ ಮೊದಲ ನದಿಯ ಕೆಳಗಿನ ಮೆಟ್ರೋ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಒಟ್ಟು 520 ಮೀಟರ್ ಉದ್ದವಿದೆ. ಈಗ ತಮಿಳುನಾಡಿಗೂ ಇಂಥದ್ದೊಂದು ಮಾರ್ಗ ಲಭ್ಯವಾಗಲಿದೆ. ಚೆನ್ನೈನಲ್ಲಿ ಮೊದಲ ಬಾರಿಗೆ ಅಡ್ಯಾರ್ ನದಿಯ ಕೆಳಭಾಗದಲ್ಲಿ ಮಾದವಾರ ಮಿಲ್ಕ್ ಕಾಲೊನಿಯಿಂದ ಸಿರುಸೇರಿ ಸಿಪ್ಕಾಟ್ ಎಂಬಲ್ಲಿಗೆ ಇದು ಸಂಪರ್ಕ ಕಲ್ಪಿಸಲಿದೆ.
ಯೋಜನೆಯ ಸದ್ಯದ ಪ್ರಗತಿ ಏನು?
ಫೆಬ್ರವರಿಯಿಂದ ಟನೆಲ್ ಬೋರಿಂಗ್ ಮಷಿನ್ ಕಾರ್ಯಾರಂಭ ಮಾಡಿದೆ. ಇದುವರೆಗೆ 20 ಮೀಟರ್ ಸುರಂಗ ಕೊರೆಯುವ ಕಾರ್ಯ ಮುಕ್ತಾಯಗೊಂಡಿದೆ. ಜುಲೈ ವೇಳೆಗೆ ನದಿಯ ಕೆಳಭಾಗದ ಸುರಂಗ ನಿರ್ಮಾಣ ಕಾರ್ಯ ಮುಕ್ತಾಯವಾಗುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ನವೆಂಬರ್ ವೇಳೆಗೆ ಅಡ್ಯಾರ್ ಜಂಕ್ಷನ್ಗೆ ಕಾಮಗಾರಿ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ.
ಚೆನ್ನೈ ಮೆಟ್ರೋ 2ನೇ ಹಂತದ ಬಗ್ಗೆ
ಈ ಹಂತದಲ್ಲಿ ಒಟ್ಟು 3 ಕಾರಿಡಾರ್ಗಳು ನಿರ್ಮಾಣವಾಗಲಿವೆ. ಒಟ್ಟು 118.9 ಕಿಮೀ ಮಾರ್ಗ ನಿರ್ಮಾಣವಾಗಲಿದೆ. ಸದ್ಯದ ಯೋಜನೆ ಮಾಹಿತಿ ಪ್ರಕಾರ ಕಾರಿಡಾರ್ 3 ನೇರಳೆ ಮಾರ್ಗದಲ್ಲಿ 44 ನಿಲ್ದಾಣಗಳು ಇರಲಿವೆ. 19 ಕಿಮೀ ಎತ್ತರಿಸಿದ ಮಾರ್ಗ ಮತ್ತು 26.72 ಕಿಮೀ ಭೂಮಿಯ ಒಳಗೆ ರೈಲು ಮಾರ್ಗ ಇರಲಿದೆ.
ಯೋಜನೆಯ ಪಕ್ಷಿ ನೋಟ
45.8 ಕಿಮೀ- ಹೊಸ ಮೆಟ್ರೋದ ಉದ್ದ
400 ಮೀಟರ್- ಅಡ್ಯಾರ್ ನದಿಯ ಕೆಳಭಾಗದಲ್ಲಿ ನಿರ್ಮಾಣಗೊಳ್ಳಲಿರುವ ಸುರಂಗದ ಉದ್ದ
20 ಮೀಟರ್- ನದಿ ಪಾತ್ರದಿಂದ ಕೆಳಗೆ ನಿರ್ಮಾಣ
32 ಮೀಟರ್- ಹೂಗ್ಲಿ ನದಿಯ ನೀರಿನ ಮಟ್ಟದಿಂದ ಕೆಳಗೆ ಟನೆಲ್ ನಿರ್ಮಾಣ
69, 180 ಕೋಟಿ ರೂ.- ಯೋಜನೆಯ ಒಟ್ಟು ವೆಚ್ಚ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.