ಭದ್ರತಾ ಪಡೆಗಳಿಂದ ಪೈಪ್ ಬಾಂಬ್ ನಿಷ್ಕ್ರಿಯ
Team Udayavani, Oct 20, 2022, 7:26 PM IST
ಕಂಕರ್: ಛತ್ತೀಸಗಡದ ಕಂಕರ್ ಜಿಲೆಯಲ್ಲಿ ಮಾವೋವಾದಿಗಳು ಇರಿಸಿದ್ದ ಶಕ್ತಿಯುತ ಸುಧಾರಿತ ಸ್ಫೋಟಕ ಸಾಧನ(ಐಇಡಿ)ವನ್ನು ಭದ್ರತಾ ಪಡೆಗಳು ಗುರುವಾರ ನಿಷ್ಕ್ರಿಯಗೊಳಿಸಿವೆ. ಇದರಿಂದ ಸಂಭವಿಸಬಹುದಾದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.
10 ಕೆಜಿ ಸ್ಫೋಟಕವನ್ನು ಕಬ್ಬಿಣದ ಪೈಪ್ನಲ್ಲಿ ಇರಿಸಲಾಗಿತ್ತು. ಇದನ್ನು ಪೈಪ್ ಬಾಂಬ್ ಎಂದು ಕರೆಯುತ್ತಾರೆ. ಕಂಕರ್ ಜಿಲ್ಲೆಯ ಕೊಯಲಿಬೀಡ ಪೊಲೀಸ್ ಠಾಣೆ ವ್ಯಾಪ್ತಿಯ ತೇಕಪರ್ ಗ್ರಾಮದಲ್ಲಿ ಜಿಲ್ಲಾ ಮೀಸಲು ಪಡೆಯು(ಡಿಆರ್ಜಿ) ಮಾವೋವಾದಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿತ್ತು. ಈ ವೇಳೆ ಅರಣ್ಯದಿಂದ ಕೂಡಿದ ಬೆಟ್ಟದಲ್ಲಿ ಪೊದೆಗಳ ಅಡಿಯಲ್ಲಿ ಅಡಗಿಸಿಟ್ಟ ಸ್ಫೋಟಕವನ್ನು ಗಸ್ತು ಪಡೆ ಪತ್ತೆಹಚ್ಚಿತು. ಭದ್ರತಾ ಪಡೆಗಳನ್ನು ಗುರಿಯಾಸಿ ಮಣ್ಣಿನ ಅಡಿಯಲ್ಲಿ ಇದನ್ನು ಹೂತಿಡಲಾಗಿತ್ತು. ನಂತರ ಬಾಂಬ್ ನಿಷ್ಕ್ರಿಯದಳವು ಪೈಪ್ ಬಾಂಬ್ ಅನ್ನು ನಿಷ್ಕ್ರಿಯಗೊಳಿಸಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾಮಾನ್ಯವಾಗಿ ಮಾವೋವಾದಿಗಳು ಕಾಡಿನಲ್ಲಿ ಕಾರ್ಯಾಚರಣೆ ಕೈಗೊಂಡಿರುವ ಭದ್ರತಾ ಪಡೆಗಳನ್ನು ಗುರಿಯಾಗಿಸಿ ಸ್ಫೋಟಕಗಳು ಮತ್ತು ಪೈಪ್ ಬಾಂಬ್ಗಳನ್ನು ಅಡಗಿಸಿ ಇಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು
Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ
Bengaluru: 2 ಕೋಟಿ ರೂ. ಹೂಡಿದರೆ 1 ದಿನದಲ್ಲಿ 3.5 ಕೋಟಿ ಕೊಡುವುದಾಗಿ ವಂಚನೆ!
Cast Census: ಜಾತಿ ಗಣತಿ ಮರು ಸಮೀಕ್ಷೆ ಅಗತ್ಯ: ಅಶೋಕ್ ಹಾರನಹಳ್ಳಿ
Congress: ‘ಒಬ್ಬರಿಗೆ ಒಂದೇ ಹುದ್ದೆ’ಗೆ ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ: ರಣದೀಪ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.