ಛತ್ತೀಸ್‌ಗಢ : ಎಂಟು ನಕ್ಸಲರ ಹತ್ಯೆ; ಇಬ್ಬರು ಜವಾನರು ಹುತಾತ್ಮ
Team Udayavani, Nov 26, 2018, 3:25 PM IST
ಛತ್ತೀಸ್‌ಗಢ : ರಾಜ್ಯದ ಸುಕ್‌ಮಾ ಜಿಲ್ಲೆಯ ಸಕಲಾರ್ ಗ್ರಾಮದಲ್ಲಿ ಇಂದು ಸೋಮವಾರ ನಡೆದ ಎನಕೌಂಟ್ ನಲ್ಲಿ ಎಂಟು ನಕ್ಸಲರ ಹತ್ಯೆ ನಡೆದಿದೆ; ಇದೇ ವೇಳೆ ಇಬ್ಬರು ಭದ್ರತಾ ಸಿಬಂದಿ ಹುತಾತ್ಮರಾಗಿರುವುದಾಗಿ ವರದಿಗಳು ತಿಳಿಸಿವೆ.
ಛತ್ತೀಸ್‌ಗಢದ ಜಿಲ್ಲಾ ಪೊಲೀಸ್ ಮೀಸಲು ಪಡೆ (ಡಿಆರ್‌ಜಿ)ಮತ್ತು ಸಿಆರ್‌ಪಿಎಫ್ನ 206 ಮತ್ತು 208 ಕೋಬ್ರಾ ದಳ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದವು.
ಎನ್‌ಕೌಂಟರ್‌ನಲ್ಲಿ ಒಬ್ಬ ಮಾವೋ ಉಗ್ರ ಗಂಭೀರವಾಗಿ ಗಾಯಗೊಂಡಿದ್ದು ಆತನಿಂದ ಭಮಾå… ಗನ್ ಒಂದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸುಕ್‌ಮಾ ಎಸ್‌ಪಿ ಅಭಿಷೇಕ್ ಮೀಣ ತಿಳಿಸಿದ್ದಾರೆ.
ಎನ್‌ಕೌಂಟರ್ ನಡೆದ ಪ್ರದೇಶದಲ್ಲಿ ಇನ್ನೂ ಅಡಗಿಕೊಂಡಿರಬಹುದಾದ ನಕ್ಸಲರಿಗೆ ಭದ್ರತಾ ಶೋಧ ಕಾರ್ಯಾಚರಣೆ ಈಗಲೂ ಮುಂದುವರಿದಿದ್ದು ಭದ್ರತಾ ಸಿಬಂದಿಗಳ ಮೃತ ದೇಹಗಳನ್ನು ಸಾಗಿಸುವ ಕೆಲಸವೂ ನಡೆಯುತ್ತಿದೆ ಎಂದವರು ತಿಳಿಸಿದ್ದಾರೆ.
ನಿನ್ನೆ ಭಾನುವಾರವಷ್ಟೇ ಭದ್ರತಾ ಪಡೆಗಳು ಬಿಜಾಪೂರ ಜಿಲ್ಲೆಯಲ್ಲಿ ನಡೆಸಿದ್ದ ಕಾರ್ಯಾಚರಣೆಯಲ್ಲಿ ಇಬ್ಬರು ನಕ್ಸಲರು ಹತರಾಗಿದ್ದರು. ಗುಂಡಿನ ಕಾಳಗದಲ್ಲಿ ಒಬ್ಬ ಪೊಲೀಸ್ ಸಿಬಂದಿ ಗಾಯಗೊಂಡಿದ್ದರು.
ನಿನ್ನೆ ಭಾನುವಾರ ಡಿಆರ್‌ಜಿ ಮತ್ತು ವಿಶೇಷ ಕಾರ್ಯ ಪಡೆಯ ಸಿಬಂದಿ ಉಗ್ರ ನಿಗ್ರಹ ಕಾರ್ಯಾಚರಣೆ ಕೈಗೊಂಡಿದ್ದ ವೇಳೆ ಗಂಗಲೂರ್ ಮತ್ತು ಮಾದ್ದೇಡ್ ನಲ್ಲಿ ಗುಂಡಿನ ಕಾಳಗ ಏರ್ಪಟ್ಟಿತ್ತು.
ಡಿಆರ್‌ಜಿ ಮತ್ತು ಎಸ್‌ಟಿಎಫ್ ನ ಜಂಟಿ ಪಡೆಗಳು ನೀಲಮಾಡು ಮತ್ತು ಕೋರಿಂಜೆಡ್ ನಲ್ಲಿನ ಅರಣ್ಯ ಪ್ರದೇಶಗಳಲ್ಲಿ ನಕ್ಸಲ್ ಶೋಧ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸ್ ಸುಪರಿಂಟೆಂಡೆಂಟ್ ಮೋಹಿತ್ ಗರ್ಗ್ ತಿಳಿಸಿದ್ದಾರೆ.
ನಕ್ಸಲರ ವಿರುದ್ಧ ಸುಮಾರು 40 ನಿಮಿಷಗಳ ಕಾಲ ನಡೆದಿದ್ದ ಗುಂಡಿನ ಕಾಳಗದಲ್ಲಿ ಓರ್ವ ಡಿಆರ್‌ಜಿ ಜವಾನನಿಗೆ ಕುತ್ತಿಗೆಗೆ ಗುಂಡೇಟು ತಗಲಿದೆ; ಆತನನ್ನು ಆಸ್ಪತ್ರೆಗೆ ಒಯ್ಯಲಾಗುತ್ತಿದೆ ಎಂದು ಗರ್ಗ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Borewell Tragedy: ಹತ್ತು ದಿನಗಳ ಕಾರ್ಯಾಚರಣೆ… ಕೊನೆಗೂ ಬದುಕಿ ಉಳಿಯಲಿಲ್ಲ ಚೇತನಾ
Borewell Tragedy: 10 ದಿನದ ಕಾರ್ಯಾಚರಣೆ ಬಳಿಕ ಬದುಕಿ ಬಂದ ಬಾಲೆ, ಇದು ಪವಾಡ ಎಂದ ಪೋಷಕರು
Navy: ಜ.15ಕ್ಕೆ ನೌಕಾಪಡೆಗೆ 2 ಯುದ್ಧ ನೌಕೆ, 1 ಸಬ್‌ಮರೀನ್ ಸೇರ್ಪಡೆ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
Viral: ಫೇಸ್‌ಬುಕ್ ಪ್ರೇಯಸಿ ಭೇಟಿಗೆ ಅಕ್ರಮವಾಗಿ ಪಾಕ್‌ಗೆ ತೆರಳಿ ಸಿಕ್ಕಿಬಿದ್ದ ಭಾರತೀಯ ಯುವಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Priyank Kharge ರಾಜೀನಾಮೆ ಕೇಳುವುದಕ್ಕೆ ಸಿಎಂಗೆ ಧೈರ್ಯವಿಲ್ಲ: ಛಲವಾದಿ ವ್ಯಂಗ್ಯ
Karnataka: “ಆರೋಗ್ಯ ಸಂಜೀವಿನಿ’ ತ್ವರಿತ ಅನುಷ್ಠಾನಕ್ಕೆ ಸಿಎಸ್‌ಗೆ ಮನವಿ
CM Siddaramaiah: ರಾಜ್ಯ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರೊಂದಿಗೆ ಚರ್ಚೆ
Karnataka ಪಠ್ಯಪುಸ್ತಕ ಬೇಡಿಕೆ: ಜ.10ರೊಳಗೆ ದೃಢೀಕರಣ ರಾಜ್ಯಹಂತಕ್ಕೆ ಕಳುಹಿಸಿ
Siddapura: ಬೈಕಿಗೆ ಕಾರು ಡಿಕ್ಕಿ; ಬೈಕ್ ಸವಾರ ಗಂಭೀರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.