Crime: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ
Team Udayavani, May 5, 2024, 10:39 AM IST
ಛತ್ತೀಸ್‌ಗಢ್: ಮೊಬೈಲ್ ನಲ್ಲಿ ಯಾವಾಗಾಲೂ ಹುಡುಗರ ಜೊತೆ ಮಾತನಾಡುತ್ತಿದ್ದ ತಂಗಿಯನ್ನು ಗದರಿದಕ್ಕೆ ಹಿರಿಯ ಸಹೋದರನನ್ನೇ ಹತ್ಯೆಗೈದಿರುವ ಘಟನೆ ಛತ್ತೀಸ್‌ಗಢದ ಖೈರಗಢ್-ಚುಯಿಖಾದನ್-ಗಂಡೈ (ಕೆಸಿಜಿ) ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.
ಶುಕ್ರವಾರ(ಮೇ.3 ರಂದು) ಚುಯಿಖಾಡನ್ ಪೊಲೀಸ್ ಠಾಣಾ ವ್ಯಾಪ್ತಿಯ ಅಮ್ಲಿದಿಹ್ಕಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
14 ವರ್ಷದ ತನ್ನ ತಂಗಿ ಯಾವಾಗಲೂ ಮೊಬೈಲ್ ನಲ್ಲಿ ಮಾತನಾಡುತ್ತಿದ್ದಳು. ಹುಡುಗರ ಜೊತೆ ಫೋನಿನಲ್ಲಿ ಮಾತನಾಡಬೇಡ ಎಂದು ಹಿರಿಯ ಸಹೋದರ ತಂಗಿಯನ್ನು ಗದರಿ, ಫೋನ್ ಬಳಸಬೇಡ ಎಂದು ಎಚ್ಚರಿಸಿದ್ದಾನೆ.
ಆದರೆ ಇದಕ್ಕೆ ಸಿಟ್ಟಾದ ಬಾಲಕಿ ಅಣ್ಣ ಮಲಗಿದ್ದ ವೇಳೆ ಕುತ್ತಿಗೆಗೆ ಕೊಡಲಿಯಿಂದ ಹೊಡೆದಿದ್ದಾಳೆ. ಪರಿಣಾಮ ಸಹೋದರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಅಣ್ಣನನ್ನು ಹತ್ಯೆಗೈದ ಬಳಿಕ ಬಟ್ಟೆಯ ಮೇಲಿನ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿ, ತನ್ನ ಸಹೋದರನನ್ನು ಕೊಲೆ ಮಾಡಿದ್ದೇನೆ ಎಂದು ತನ್ನ ನೆರೆಹೊರೆಯವರಿಗೆ ತಿಳಿಸಿದ್ದಾಳೆ.
ಈ ಕೃತ್ಯದ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಕೃತ್ಯವೆಸಗಿದ ಬಾಲಕಿಯನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokasabha: ಕೆಲವು ನಾಯಕರಿಗೆ ಮನೆ ನವೀಕರಣ, ಸ್ಟೈಲಿಶ್ ಶವರ್‌ಗಳೇ ಆದ್ಯತೆ: ಮೋದಿ ಟಾಂಗ್
Maharashtra: ಮತ್ತೆ ಫಡ್ನವೀಸ್ ಸಭೆಗೆ ಗೈರಾದ ಶಿಂಧೆ; ಬಿರುಕು ಚರ್ಚೆಗೆ ಸಿಕ್ತು ಪುಷ್ಟಿ
Indore: ಎರಡು ಶಾಲೆಗಳಿಗೆ ಬಾಂಬ್ ಬೆದರಿಕೆ; ವಿದ್ಯಾರ್ಥಿಗಳ ಸ್ಥಳಾಂತರ
Trade War: ಅಮೆರಿಕದ ಕಲ್ಲಿದ್ದಲು, ಅನಿಲ ಆಮದಿನ ಮೇಲೆ ಶೇ.15ರಷ್ಟು ಸುಂಕ ಹೇರಿದ ಚೀನಾ!
Kerala: ಅಂಗನವಾಡಿಯಲ್ಲಿ ಉಪ್ಪಿಟ್ಟು ಬೇಡ, ಬಿರಿಯಾನಿ ಬೇಕು.. ಬಾಲಕನ ಮನವಿಗೆ ಸಚಿವೆ ಸ್ಪಂದನೆ
MUST WATCH
ಹೊಸ ಸೇರ್ಪಡೆ
Congress: ಡಿಕೆಶಿ ಮುಂದಿನ ಸಿಎಂ ಎಂದು ಘೋಷಣೆ ಕೂಗುವುದರಲ್ಲಿ ತಪ್ಪಿಲ್ಲ: ಸತೀಶ ಜಾರಕಿಹೊಳಿ
Dambala: ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ
Lokasabha: ಕೆಲವು ನಾಯಕರಿಗೆ ಮನೆ ನವೀಕರಣ, ಸ್ಟೈಲಿಶ್ ಶವರ್‌ಗಳೇ ಆದ್ಯತೆ: ಮೋದಿ ಟಾಂಗ್
Bantwala: ದ.ಕ. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಿತ್ತರಂಜನ್ ಶೆಟ್ಟಿ ಮೇಲೆ ಫೈರಿಂಗ್
ನರೇಗಾ ಯೋಜನೆ ಸದ್ಬಳಕೆ: ಗೋವಿನಜೋಳ ಬೆಳೆಯುತ್ತಿದ್ದವರು ಕುರಿದೊಡ್ಡಿ ಕಟ್ಟಿದರು…