ಮದುವೆ ದಿನ ವರನ ಮೇಲೆ ಆ್ಯಸಿಡ್ ಎರಚಿದ ಮಾಜಿ ಪ್ರಿಯತಮೆ: ಕೃತ್ಯಕ್ಕೆ ಸಹಾಯವಾಯಿತು ಕ್ರೈಮ್ ಶೋ
Team Udayavani, Apr 25, 2023, 11:25 AM IST
ಛತ್ತೀಸ್‌ಗಢ: ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನ ಮೇಲೆ ಆ್ಯಸಿಡ್ ಎರಚಿರುವ ಘಟನೆ ಛತ್ತೀಸ್‌ಗಢದ ಛೋಟೆ ಅಮಬಲ್ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಎ.19 ರಂದು ಈ ಘಟನೆ ನಡೆದಿದೆ. ದಮೃಧರ್ ಬಾಘೇಲ್ (25) 19 ವರ್ಷದ ಯುವತಿ ಜೊತೆ ವಿವಾಹವಾಗಲಿದ್ದರು. ಈ ವಿಚಾರವನ್ನು ತಿಳಿದ ದಮೃಧರ್ ಅವರ ಮಾಜಿ ಪ್ರಿಯತಮೆ ಈ ಕೃತ್ಯವನ್ನು ಎಸಗಿದ್ದಾಳೆ.
ಘಟನೆ ವಿವರ: ಕಳೆದ ಕೆಲ ಸಮಯದಿಂದ 23 ವರ್ಷದ ಯುವತಿ ದಮೃಧರ್ ನನ್ನು ಪ್ರೀತಿಸುತ್ತಿದ್ದಳು. ಮದುವೆ ಬಗ್ಗೆ ಹಲವಾರು ಕನಸನ್ನು ಕಂಡಿದ್ದಳು. ಆದರೆ ಇದ್ದಕ್ಕಿದ್ದಂತೆ ಪ್ರಿಯಕರ ದಮೃಧರ್ ಯುವತಿಗೆ ಕೈಕೊಟ್ಟಿದ್ದಾನೆ. ಇದರಿಂದ ಸಹಜವಾಗಿ ಯುವತಿ ನೊಂದಿದ್ದಾಳೆ. ಇದಾದ ಕೆಲ ಸಮಯದ ಬಳಿಕ ಪ್ರಿಯಕರ ಕಾಲ್ , ಮೆಸೇಜ್ ಎಲ್ಲವನ್ನೂ ಮಾಡುವುದನ್ನು ಬಿಟ್ಟಿದ್ದಾನೆ. ಬೇರೊಂದು ಯುವತಿ ಜೊತೆ ವಿವಾಹವಾಗಲು ನಿಶ್ಚಯಿಸಿದ್ದಾನೆ.
ಇದನ್ನೂ ಓದಿ: Darshan: ಮಾಧ್ಯಮದವರ ಬಳಿ ವಿಷಾದ ವ್ಯಕ್ತಪಡಿಸಿದ ನಟ ದರ್ಶನ್? ಪತ್ರ ವೈರಲ್
ಕೃತ್ಯಕ್ಕೆ ಸಹಾಯವಾದ ಕ್ರೈಮ್ ಶೋ: ಯುವಕ ಕೈ ಕೊಟ್ಟರು, ಆತ ತನ್ನಗಾಗಿ ಬರುತ್ತಾನೆಂದು ತನ್ನ ಪ್ರೀತಿಯನ್ನು ನಂಬಿಕೊಂಡಿದ್ದ ಯುವತಿಗೆ ನಿರಾಶೆಯಾಗಿದ್ದು, ಆತನಿಗೆ ಬುದ್ಧಿ ಕಲಿಸಬೇಕೆಂದು ನಿರ್ಧಾರ ಮಾಡಿದ್ದಾಳೆ. ಟವಿಯಲ್ಲಿ ʼಕ್ರೈಂ ಪ್ಯಾಟ್ರೋಲ್ʼ ಎನ್ನುವ ಕ್ರೈಮ್ ಶೋವನ್ನು ನೋಡಿದ ಪ್ರಿಯತಮೆ, ಅಲ್ಲಿ ಆ್ಯಸಿಡ್ ಎರಚುವ ಕೃತ್ಯವೊಂದನ್ನು ನೋಡಿ ಹಾಗೆಯೇ ಮಾಡಲು ಹೊರಟಿದ್ದಾಳೆ.
ತನ್ನ ಪ್ರಿಯಕರನ ಮದುವೆಯ ಸಮಾರಂಭದ ವೇಳೆ ಯಾರಿಗೂ ಗುರುತು ಬಾರದಂತೆ, ಪುರುಷರ ಧಿರಿಸನ್ನು ಹಾಕಿಕೊಂಡು, ಕೈಯಲ್ಲಿ ಆ್ಯಸಿಡ್ ಬಾಟಲಿಯನ್ನು ಹಿಡಿದುಕೊಂಡಿದ್ದಾಳೆ. ಇದೇ ವೇಳೆ ವಿದ್ಯುತ್ ಕಡಿತಗೊಂಡಿದ್ದು, ಯುವತಿ ಯುವಕನ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾಳೆ.
ಕೃತ್ಯದ ಪರಿಣಾಮ ವರ, ವಧು ಸೇರಿದಂತೆ 10 ಮಂದಿ ಅತಿಥಿಗಳು ಗಾಯಗೊಂಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು 12 ಸಿಸಿಟಿವಿಗಳನ್ನು ಪರಿಶೀಲಿಸಿದ್ದಾರೆ. ಆರೋಪಿ ಯುವಕನ ಪ್ರಿಯತಮೆ ಎನ್ನುವುದು ತಿಳಿದು ಬಂದಿದೆ. ಮಾಜಿ ಪ್ರಿಯಕರ ಬೇರೆ ಮದುವೆ ಆದ ಕಾರಣ ಈ ಕೃತ್ಯ ಎಸೆಗಿದ್ದಾಳೆ ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ.
ತಾನು ಕೆಲಸ ಮಾಡುತ್ತಿದ್ದ ಮೆಣಸಿನಕಾಯಿ ಕಂಪೆನಿಯಿಂದ ಯುವತಿ ಆ್ಯಸಿಡ್ ನ್ನು ಕದ್ದು ಅದನ್ನೇ ಕೃತ್ಯಕ್ಕೆ ಬಳಸಿದ್ದಾರೆ. ಸದ್ಯ ಯುವತಿ ಪೊಲೀಸ್ ಕಸ್ಟಡಿಯಲ್ಲಿದ್ದಾಳೆ ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು
Varanasi: ಕುಟುಂಬಿಕರ ಎದುರಿಗೆ ಪೊಲೀಸ್ ಅಧಿಕಾರಿಗೆ ಥಳಿಸಿದ ಗುಂಪು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.