ಸಸ್ಯಾಹಾರಿ ಆಹಾರದಲ್ಲಿ ಕೋಳಿ ತುಂಡು ಪತ್ತೆ: ತನಿಖೆ; ಮುಖ್ಯಮಂತ್ರಿ
Team Udayavani, Jun 21, 2019, 1:09 PM IST
ಮುಂಬಯಿ: ರಾಜ್ಯ ವಿಧಾನ ಭವನದ ಕ್ಯಾಂಟೀನ್‌ನಲ್ಲಿ ಬಡಿಸಲಾದ ಸಸ್ಯಾಹಾರಿ ಆಹಾರದಲ್ಲಿ ಕೋಳಿ ತುಂಡು ಪತ್ತೆಯಾಗಿರುವ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಿಎಂ ಅವರು, ಈ ಆಹಾರವನ್ನು ಸಿದ್ಧಪಡಿಸಿದ ಅಡುಗೆಮನೆಯು ಆಹಾರ ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತದೆಯೇ ಎಂದು ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿ ಎನ್‌ಸಿಪಿ ಸದಸ್ಯ ಅಜಿತ್ ಪವಾರ್ ಅವರು ಈ ವಿಷಯವನ್ನು ಎತ್ತಿದಾಗ ಮಾತನಾಡಿದ ಫಡ್ನವೀಸ್ ಅವರು, ಇಂತಹ ಘಟನೆ ಮರುಕಳಿಸದಂತೆ ಕ್ಯಾಂಟೀನ್ ಸಿಬಂದಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗುವುದು ಎಂದರು. ಬುಧವಾರ ಸರಕಾರಿ ಅಧಿಕಾರಿಯೊಬ್ಬರು ವಿಧಾನ ಭವನದ ಕ್ಯಾಂಟೀನ್‌ನಲ್ಲಿ “ಮಟ್ಕಿ ಉಸಾಲ್ ‘ (ಮಹಾರಾಷ್ಟ್ರದ ಸಸ್ಯಾಹಾರಿ ಖಾದ್ಯ) ಅನ್ನು ಆರ್ಡರ್ ಮಾಡಿದಾಗ ಅದರಲ್ಲಿ ಕೋಳಿ ತುಂಡುಗಳು ಪತ್ತೆಯಾಗಿವೆ. ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಸದಸ್ಯ ವಿಜಯ್, ಇತ್ತೀಚೆಗೆ ನಾಗಪುರದ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ರೋಗಿಗೆ ನೀಡಲಾದ ಆಹಾರದಲ್ಲಿ ಸೆಗಣಿ ತುಂಡು ಪತ್ತೆಯಾಗಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಇದು ಗಂಭೀರ ವಿಷಯವಾಗಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.