ಸಿಜೆಐ ಗೊಗೊಯ್‌ಗೆ ಆತ್ಮೀಯ ಬೀಳ್ಕೊಡುಗೆ
4 ನಿಮಿಷ ಕಲಾಪದಲ್ಲಿ ಭಾಗಿ; ನಾಳೆ ನಿವೃತ್ತಿ
Team Udayavani, Nov 16, 2019, 5:48 AM IST
ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ನ ಕೊಠಡಿ ಸಂಖ್ಯೆ 1ಕ್ಕೆ ಆಗಮನ, 4 ನಿಮಿಷ ಗಳ ಕಲಾಪ, 10 ನೋಟಿಸ್‌ಗಳ ಜಾರಿ ಮತ್ತು ಮೌನದ ಮಹತ್ವದ ಕುರಿತ ಟಿಪ್ಪಣಿ…
ಇದೇ 17ರಂದು ನಿವೃತ್ತಿಯಾಗಲಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ಕೊನೆಯ ದಿನದ ಕರ್ತವ್ಯದ ದಿನಚರಿ ಹೀಗಿತ್ತು. ಶುಕ್ರವಾರ ಅವರ ಕೆಲಸದ ಕೊನೆಯ ದಿನವಾಗಿದ್ದು, ಸುಪ್ರೀಂನ ಕೊಠಡಿ ಸಂಖ್ಯೆ 1ಕ್ಕೆ ಆಗಮಿಸಿ 4 ನಿಮಿಷಗಳ ಕಲಾಪದಲ್ಲಿ ಪಾಲ್ಗೊಂಡರು. ಅನಂತರ, ತಮ್ಮ ಮುಂದೆ ಬಂದ ಎಲ್ಲ 10 ಪ್ರಕರಣ ಗಳಿಗೆ ಸಂಬಂಧಿಸಿಯೂ ನೋಟಿಸ್ ಜಾರಿ ಮಾಡಿದರು. ಬಳಿಕ ನ್ಯಾಯಾಂಗದಲ್ಲಿ ಮೌನ ಎಷ್ಟು ಮುಖ್ಯ ಎಂಬ ಬಗ್ಗೆ ಟಿಪ್ಪಣಿಯೊಂದನ್ನು ಬರೆಯುವ ಮೂಲಕ ಕಿವಿಮಾತು ಹೇಳಿದರು.
ನ್ಯಾಯಾಂಗದ ಹುದ್ದೆಯಲ್ಲಿರುವವರು ತಮ್ಮ ಸ್ವಾತಂತ್ರ್ಯವನ್ನು ಬಳಸಿಕೊಳ್ಳುತ್ತಲೇ ಹೇಗೆ ಮೌನ ವಹಿಸಬೇಕು ಎಂದು ತಿಳಿಸಿ ಕೊಟ್ಟರು. “ಮೌನ ವಹಿಸಬೇಕು ಎಂದಾಕ್ಷಣ ಜಡ್ಜ್ಗಳು ಮಾತನಾಡ ಲೇಬಾರದು ಎಂದರ್ಥವಲ್ಲ. ಕೇವಲ ಕಾರ್ಯ ನಿರ್ವಹಣೆಯಲ್ಲಿ ಅಗತ್ಯ ಎನಿಸಿದಾಗ ಮಾತ್ರವೇ ಮಾತನಾಡಿ’ ಎಂದರು.
ಜತೆಗೆ, ಕೆಲವೊಂದು ಕಹಿ ಸತ್ಯಗಳು ಸ್ಮತಿ ಪಟಲದಲ್ಲಷ್ಟೇ ಉಳಿಯಬೇಕಾಗುತ್ತದೆ ಎಂದೂ ಹೇಳಿದರು.
ಸಂದರ್ಶನ ನೀಡದ್ದಕ್ಕೆ ಸ್ಪಷ್ಟನೆ: ಮಾಧ್ಯಮ ಗಳಿಗೆ ಸಂದರ್ಶನ ನೀಡದೇ ಇದ್ದ ಬಗ್ಗೆ ಮಾತನಾಡಿದ ಅವರು, ನಾನು ಸಾರ್ವ ಜನಿಕರ ವಿಶ್ವಾಸ ಮತ್ತು ನಂಬಿಕೆಯನ್ನೇ ಅವಲಂಬಿಸಿರುವಂಥ ಸಂಸ್ಥೆಯೊಂದಕ್ಕೆ ಸೇರಿದವನು. ಹೀಗಾಗಿ, ಮಾಧ್ಯಮಗಳಿಂದ ದೂರ ಇರಲು ಬಯಸಿದ್ದೇನೆ ಎಂದರು. ಇದೇ ವೇಳೆ, ಮಾಧ್ಯಮಗಳು ಕೆಲವೊಂದು ಸಂದಿಗ್ಧ ಸಂದರ್ಭದಲ್ಲೂ ಪ್ರೌಢಿಮೆ ಮೆರೆದಿವೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಸರಳ ಬೀಳ್ಕೊಡುಗೆ ಸಮಾರಂಭ: ಸುಪ್ರೀಂ ಕೋರ್ಟ್ ಬಾರ್ ಅಸೋಸಿ ಯೇಷನ್ ವತಿಯಿಂದ ಶುಕ್ರವಾರ ಸಂಜೆ ಸಿಜೆಐ ಗೊಗೊಯ್ ಅವರ ಬೀಳ್ಕೊಡುಗೆ ಸಮಾರಂಭ ಅತ್ಯಂತ ಸರಳವಾಗಿ ನೆರವೇರಿತು. ನ್ಯಾ| ಗೊಗೊಯ್ ಸೂಚನೆ ಮೇರೆಗೆ ಔಪಚಾರಿಕ ಭಾಷಣಗಳೂ ನಡೆಯಲಿಲ್ಲ.
ನಿಯೋಜಿತ ಸಿಜೆಐ ಎಸ್.ಎ. ಬೋಬೆx ಸಹಿತ ಸುಪ್ರೀಂ ಕೋರ್ಟ್‌ನ ಬಹುತೇಕ ಎಲ್ಲ ನ್ಯಾಯಮೂರ್ತಿಗಳೂ ಕಾರ್ಯ ಕ್ರಮದಲ್ಲಿ ಹಾಜರಿದ್ದರು. ಇದೇ ವೇಳೆ, ಶುಕ್ರವಾರ ಸಿಜೆಐ ಗೊಗೊಯ್ ಅವರು ರಾಜ್‌ಘಾಟ್‌ಗೆ ತೆರಳಿ ಮಹಾತ್ಮಾನ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.