ಚಂದ್ರಗ್ರಹಣದಂದು ಶಿಶು ಬಲಿ ? ಮನೆ ಟೆರೇಸ್‌ನಲ್ಲಿ ಶಿರೋಭಾಗ ಪತ್ತೆ
Team Udayavani, Feb 3, 2018, 3:47 PM IST
ಹೈದರಾಬಾದ್ : 150 ವರ್ಷಗಳಿಗೆ ಒಮ್ಮೆ ಸಂಭವಿಸುವ ಖಗ್ರಾಸ ಚಂದ್ರಗ್ರಹಣಕ್ಕೆ ಸಂಬಂಧಿಸಿದ ಮೂಢನಂಬಿಕೆಯ ಭಾಗವಾಗಿ ಹಸುಳೆಯೊಂದನ್ನು ಬಲಿ ನೀಡಲಾಗಿದೆಯೇ ಎಂಬ ಬಗ್ಗೆ ಹೈದರಾಬಾದ್ ಪೊಲೀಸರು ಈಗ ತೀವ್ರ ತನಿಖೆ ನಡೆಸುತ್ತಿದ್ದಾರೆ.
ಹೈದರಾಬಾದಿನ ಚಿಲುಕಾ ನಗರದಲ್ಲಿನ ಮನೆಯೊಂದರ ಟೆರೇಸ್ ಮೇಲೆ ಒಂದೆಡೆ ಮೂಲೆಯಲ್ಲಿ ಕಸದ ತೊಟ್ಟಿಯಲ್ಲಿ ಅಡಗಿಸಿಡಲಾಗಿದ್ದ ಶಿಶುವಿನ ಛೇದಿತ ಶಿರೋಭಾಗ ಪೆ.1ರ ಗುರುವಾರದಂದು ಪತ್ತೆಯಾಗಿದೆ.
ಈ ಕಟ್ಟಡದಲ್ಲಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ಮಹಿಳೆಯೋರ್ವರು ಬಟ್ಟೆ ಒಣಗಿಸಲೆಂದು ಟೆರೇಸ್‌ಗೆ ಹೋಗಿದ್ದಾಗ ಅಲ್ಲಿ ಆಕೆಗೆ ಮಗುವಿನ ಛೇದಿತ ಶಿರೋಭಾಗ ಪತ್ತೆಯಾಯಿತು. ಅದನ್ನು ಕಂಡು ಗಾಬರಿಯಾಗಿ ಮಹಿಳೆಯು ಬೊಬ್ಬಿಟ್ಟಾಗ ನೆರೆಕರೆಯವರೆಲ್ಲ ಧಾವಿಸಿ ಬಂದು ಈ ದೃಶ್ಯವನ್ನು ಕಂಡು ದಿಗಿಲುಗೊಂಡರು.
ಒಡನೆಯೇ ಪೊಲೀಸರನ್ನು ಎಚ್ಚರಿಸಲಾಗಿ ಅವರು ಸ್ಥಳಕ್ಕೆ ಭೇಟಿಕೊಟ್ಟರು. ಶಿರಚ್ಛೇದನಕ್ಕೆ ಗುರಿಯಾಗಿದ್ದ ಮಗುವ ಎರಡು ಅಥವಾ ಮೂರು ತಿಂಗಳಿನದ್ದಾಗಿರಬಹುದೆಂದು ಅಂದಾಜಿಸಲಾಗಿದೆ.
ಕ್ಯಾಬ್ ಡ್ರೈವರ್ ಆಗಿರುವ ಮಹಿಳೆಯ ಅಳಿಯ ರಾಜ್‌ಶೇಖರ್ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಆತನನ್ನು ತೀವ್ರವಾಗಿ ಪ್ರಶ್ನಿಸುತ್ತಿದ್ದಾರೆ. ಇದೇ ರೀತಿ ಇನ್ನಿಬ್ಬರು ನರೆಕರೆಯ ನರಹರಿ ಮತ್ತು ಆತನ ಪುತ್ರ ರಂಜಿತ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಪೊಲೀಸ್ ಶ್ವಾನವನ್ನು ಕರೆಸಿಕೊಂಡಾಗ ಅದು ನರಹರಿ ಅವರ ಮನೆಯೊಳಗಿನ ಡಸ್ಟ್‌ಬಿನ್ ಮೂಸಿ ನೋಡಿದೆ. ನರಹರಿ ಮತ್ತು ರಂಜಿತ್ ಆಗೀಗ ಎಂಬಂತೆ ಮೂಢನಂಬಿಕೆಯ ಪೂಜೆಗಳನ್ನು ಮನೆಯಲ್ಲಿ ನಡೆಸಿದವರಾಗಿದ್ದಾರೆ.
ಟೆರೇಸ್‌ನಲ್ಲಿ ಶಿರಚ್ಛೇದಿತ ಮಗುವಿನ ರಕ್ತದ ಕಲೆಗಳು ಕಂಡುಬಂದಿಲ್ಲ; ಮಗುವನ್ನು ಬೇರೆಲ್ಲೋ ಬಲಿಕೊಟ್ಟ ಬಳಿಕ ಅದರ ತಲೆಯನ್ನು ಇಲ್ಲಿ ತಂದಿಡಲಾಗಿದೆ ಎಂದು ಶಂಕಿಸಲಾಗಿದೆ. ಮೃತ ಮಗುವಿನ ದೇಹದ ಭಾಗಕ್ಕಾಗಿ ಪೊಲೀಸರೀಗ ಹುಡುಕಾಡ ನಡೆಸಿದ್ದಾರೆ.
ಈ ಕೃತ್ಯಕ್ಕೆ ಮಾಟ-ಮಂತ್ರಗಾರರು ನನ್ನ ಮನೆಯ ಟೆರೇಸನ್ನೇ ಯಾಕೆ ಆಯ್ಕೆ ಮಾಡಿದರು ಎಂದು ಘಟನೆಯಿಂದ ತೀವ್ರ ಆಘಾತಗೊಂಡ ಮನೆಯೊಡತಿ ಬಾಲಲಕ್ಷ್ಮೀ ಕಣ್ಣೀರು ಸುರಿಸುತ್ತಾ ಪೊಲೀಸರಿಗೆ ಪ್ರಶ್ನಿಸುತ್ತಿದ್ದಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.